ಕಲಬುರಗಿಯ ಪೊಲೀಸ್ ಟೆನಿಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಮುಕ್ತ ಟೆನಿಸ್ ಟೂರ್ನಮೆಂಟ್‌ನಲ್ಲಿ ಸಿಂಧನೂರಿನ ಎಫ್‌ಆರ್‌ಸಿಎಸ್ ಕ್ಲಬ್ ಆಟಗಾರರಾದ ಸಿ.ಟಿ.ಪಾಟೀಲ್, ಗುರುಪಾದಯ್ಯಸ್ವಾಮಿ, ಅಭಿಷೇಕ, ಸುರೇಶ ಗೆಲುವು ಸಾಧಿಸಿದ್ದಾರೆ. 
ಕ್ರೀಡೆ

ಎಫ್‌ಆರ್‌ಸಿಎಸ್ ಕ್ಲಬ್‌ಗೆ ಗೆಲುವು

ಸಿಂಧನೂರು: ಕಲಬುರಗಿಯ ಪೊಲೀಸ್ ಟೆನಿಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಮುಕ್ತ ಟೆನಿಸ್ ಟೂರ್ನಮೆಂಟ್‌ನಲ್ಲಿ ಸಿಂಧನೂರಿನ ಎಫ್‌ಆರ್‌ಸಿಎಸ್ ಕ್ಲಬ್ ಆಟಗಾರರು ಗೆಲುವು ಸಾಧಿಸಿದ್ದಾರೆ. 35 ವರ್ಷ ಮೇಲ್ಪಟ್ಟವರ ಸಿಂಗಲ್ಸ್‌ನಲ್ಲಿ ಸಿ.ಟಿ.ಪಾಟೀಲ್ ರನ್ನರ್ ಅಪ್ ಆಗಿದ್ದರೆ, ಡಬಲ್ಸ್‌ನಲ್ಲಿ ಸಿ.ಟಿ.ಪಾಟೀಲ್ ಮತ್ತು ನಿಸಾರ್ ಬೇಗ್ ಗೆಲುವು ಸಾಧಿಸಿದ್ದಾರೆ. ಮುಕ್ತ ಡಬಲ್ಸ್‌ನಲ್ಲಿ ಅಭಿಷೇಕ್ ರಾಗಲಪರ್ವಿ, ಸುರೇಶರೆಡ್ಡಿ ಬೆಂಗಳೂರು ಗೆದ್ದಿದ್ದಾರೆ. 60 ವರ್ಷ ಮೇಲ್ಪಟ್ಟವರ ಡಬಲ್ಸ್‌ನಲ್ಲಿ ಗುರುಪಾದಯ್ಯಸ್ವಾಮಿ ಕಲಮಂಗಿ ಗೆಲುವು ಸಾಧಿಸಿದ್ದಾರೆ.