ನವದೆಹಲಿ: ಭಾರತದ ಸ್ಟಾರ್ ಷಟ್ಲರ್ ಸಿಕ್ಕಿ ರೆಡ್ಡಿ ಹಾಗೂ ಫಿಸಿಯೋ ಥೆರಪಿಸ್ಟ್ ಕಿರಣ್ ಚಲ್ಲಾಗುಂಡ್ಲ ಶುಕ್ರವಾರ 2ನೇ ಬಾರಿಗೆ ಕೋವಿಡ್-19 ಪರೀಕ್ಷೆಗೆ ಒಳಗಾದರು. ಸಿಕ್ಕಿ ಹಾಗೂ ಅವರ ಫಿಸಿಯೋ ಕಿರಣ್ಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಬ್ಯಾಡ್ಮಿಂಟನ್ ಶಿಬಿರವನ್ನು ಸ್ಥಗಿತಗೊಳಿಸಲಾಗಿತ್ತು. ಸಿಕ್ಕಿ ರೆಡ್ಡಿ ಹಾಗೂ ಕಿರಣ್ ಸೇರಿದಂತೆ 21 ಮಂದಿ ಆಟಗಾರರು, ಕೋಚ್ಗಳು ಹಾಗೂ ಸಹಾಯಕ ಸಿಬ್ಬಂದಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಆದೇಶದ ಮೇರೆಗೆ ಕೋವಿಡ್ ಟೆಸ್ಟ್ಗೆ ಒಳಗಾಗಿದ್ದರು. ಇಬ್ಬರ ವರದಿ ಪಾಸಿಟಿವ್, ಉಳಿದ 21 ಮಂದಿಯ ವರದಿ ನೆಗೆಟಿವ್ ಬಂದಿತ್ತು. ಆಗಸ್ಟ್ 7 ರಿಂದ ಗೋಪಿಚಂದ್ ಅಕಾಡೆಮಿಯಲ್ಲಿ ರಾಷ್ಟ್ರೀಯ ತರಬೇತಿ ಶಿಬಿರ ಆರಂಭಗೊಂಡಿತ್ತು. .
ಇದನ್ನೂ ಓದಿ: ಐಪಿಎಲ್ ಪ್ರಾಯೋಜಕತ್ವ ರೇಸ್ಗೆ ಟಾಟಾ ಗ್ರೂಪ್ ಎಂಟ್ರಿ
ಸಿಕ್ಕಿ ರೆಡ್ಡಿ ಹಾಗೂ ಕಿರಣ್ ತಾವಾಗಿಯೇ ಹೈದರಾಬಾದ್ನ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾದರು ಎಂದು ಮೂಲಗಳು ತಿಳಿಸಿವೆ. ವರದಿಯ ಫಲಿತಾಂಶ ಶನಿವಾರ ಸಿಗುವ ಸಾಧ್ಯತೆಗಳಿವೆ. ಉಳಿದ ಸದಸ್ಯರು ಕ್ವಾರಂಟೈನ್ನಲ್ಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಕ್ಕಿ ರೆಡ್ಡಿ ಪತ್ನಿ ಷಟ್ಲರ್ ಸುಮೀತ್ ರೆಡ್ಡಿ ಕೂಡ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಸುಮೀತ್ ಕೂಡ ಡಬಲ್ಸ್ ವಿಭಾಗದ ತಜ್ಞ ಆಟಗಾರನಾಗಿದ್ದು, ರಾಷ್ಟ್ರೀಯ ಶಿಬಿರದಲ್ಲಿ ಇರಲಿಲ್ಲ.
ಸಿಕ್ಕಿ ರೆಡ್ಡಿ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಜತೆಗೂಡಿ ಕಣಕ್ಕಿಳಿಯಬೇಕಿದೆ. ಅಶ್ವಿನಿ ಪೊನ್ನಪ್ಪ ಹೈದರಾಬಾದ್ಗೆ ತೆರಳದೆ ಬೆಂಗಳೂರಿನಲ್ಲೇ ತರಬೇತಿ ಮುಂದುವರಿಸಿದ್ದಾರೆ. ಸಿಕ್ಕಿ ರೆಡ್ಡಿ ಹಾಗೂ ವಿಶ್ವ ಚಾಂಪಿಯನ್ ಪಿವಿ ಸಿಂಧು ಅಭ್ಯಾಸ ಅವಧಿಗೆ ಬೇರೆಯಾಗಿದ್ದರೂ ಅಭ್ಯಾಸದ ಮೊದಲ ದಿನ (ಆ.7) ಫೋಟೋಗೆ ಒಟ್ಟಿಗೆ ಪೋಸ್ ನೀಡಿದ್ದರು. ಭಾರತ ಬ್ಯಾಡ್ಮಿಂಟನ್ ತಂಡ ಅ,3 ರಿಂದ 11 ರವರೆಗೆ ಥಾಮಸ್ ಹಾಗೂ ಉಬೆರ್ ಕಪ್ನಲ್ಲಿ ಆಡಲಿದೆ.