ಕ್ರೀಡೆ

ಶುಭಮನ್ ಗಿಲ್ ಮದುವೆ! shubman gill 3 ಶೇರ್ವಾನಿಗಳಲ್ಲಿ ನೀವು ಯಾವುದನ್ನು ಧರಿಸುತ್ತೀರಿ ಎಂದು ಕೇಳಿ..ಸತ್ಯ ಬಿಚ್ಚಿಟ್ಟ ಹರ್ಭಜನ್ ಸಿಂಗ್

ನವದೆಹಲಿ: ( shubman gill ) ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಮದುವೆ ಕುರಿತಾಗಿ  ಹರ್ಭಜನ್ ಸಿಂಗ್ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ಸೋಶಿಯಲ್​​ ಮೀಡಿಯಾದಲ್ಲಿ  ವೈರಲ್​  ಆಗಿದೆ. ಆದರೆ ಈ ಸುದ್ದಿ ಹಿಂದಿನ ಅಸಲಿ ಕಥೆಯೆ ಬೇರೆ ಇದೆ ಎನ್ನಲಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಅವರ ವೈಯಕ್ತಿಕ ಜೀವನ ಯಾವಾಗಲೂ ಸುದ್ದಿಯಲ್ಲಿರುತ್ತದೆ.  ಶುಭಮನ್ ಗಿಲ್ ಅವರ ಹೆಸರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಮಗಳು ಸಾರಾ ತೆಂಡೂಲ್ಕರ್  ಜೆತೆಗೆ ಬೆಸೆದು ಸುದ್ದಿಯಾಗಿತ್ತು. ಆದರೆ, ಶುಭ್‌ಮನ್ ಗಿಲ್ ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ.

ಚಾಂಪಿಯನ್ಸ್ ಟ್ರೋಫಿಯ ನಡುವೆ, ಶುಭಮನ್ ಗಿಲ್ ಅವರ ವಿವಾಹದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಡಿತು. ಹರ್ಭಜನ್ ಸಿಂಗ್ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಒಂದು  ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಗಿಲ್ ಅವರ ಮದುವೆಯ ಬಗ್ಗೆ ಮಾತನಾಡಿದರು. ಅವರು ಅವನಿಗೆ ಮೂರು ಆಯ್ಕೆಗಳನ್ನು ನೀಡಿದರು. ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಏನು ಹೇಳಿದ್ದಾರೆಂದು ನೋಡೋಣ.

ಶುಭ್‌ಮನ್ ಗಿಲ್ ಮದುವೆಯಾಗುತ್ತಾರಾ?

ಹರ್ಭಜನ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಶುಭ್‌ಮನ್ ಗಿಲ್  ಮದುವೆಯಾಗುತ್ತತಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಶುಭ್‌ಮನ್ ಗಿಲ್ ಕುದುರೆ ಸವಾರಿ ಮಾಡಲು ಸಿದ್ಧರಾಗಿದ್ದಾರೆ.  ಈ ಮೂರು ಶೇರ್ವಾನಿಗಳನ್ನು ತೋರಿಸಿ ನೀವು ಮದುವೆಯಲ್ಲಿ ಯಾವ ಶೇರ್ವಾನಿ ಧರಿಸುತ್ತೀರಿ ಎಂದು ಕೇಳಿದರು.

ಶುಭಮನ್ ಗಿಲ್ ಅವರ ಅಭಿಮಾನಿಗಳು ನಿರಾಶೆಗೊಳ್ಳುವ ಮೊದಲು, ಇದನ್ನು ಕೇವಲ ಬ್ರಾಂಡ್ ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಇದರರ್ಥ ಗಿಲ್ ನಿಜವಾಗಿಯೂ ಮದುವೆಯಾಗುತ್ತಿಲ್ಲ ಬ್ರಾಂಡ್ ಪ್ರಚಾರಕ್ಕಾಗಿ ಹೀಗೆ ಹೇಳಲಾಗಿದೆ.

ಹರ್ಭಜನ್ ಸಿಂಗ್ ಒಬ್ಬ ಕ್ರಿಕೆಟಿಗ, ಅವರ ವ್ಯಕ್ತಿತ್ವ ತುಂಬಾ ಹರ್ಷಚಿತ್ತದಿಂದ ಕೂಡಿರುತ್ತದೆ. ಕ್ರಿಕೆಟ್ ವೀಕ್ಷಕ ವಿವರಣೆಯ ಹೊರತಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿಯೂ ತುಂಬಾ ಸಕ್ರಿಯರಾಗಿದ್ದಾರೆ.