Rohit Sharma: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಭಾರತದ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿರುವುದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ವಾಹಿನಿ ಜೊತೆ ಮಾತನಾಡಿದ ಹರ್ಭಜನ್, ನಾಯಕನಾಗಿ ಗಿಲ್‌ಗೆ ಇದು ಹೊಸ ಸವಾಲಾಗಿದ್ದು, ನಾಯಕತ್ವವಿಲ್ಲದ ರೋಹಿತ್ರನ್ನು ಕೇವಲ ಆಟಗಾರನಾಗಿ ನೋಡಿ ಆಘಾತವಾಯಿತು. ಗಿಲ್‌ಗೆ ತಂಡವನ್ನು ಮುನ್ನಡೆಸುವ ಮತ್ತೊಂದು ಜವಾಬ್ದಾರಿಯನ್ನು ನೀಡಲಾಗಿದ್ದು, ಖಂಡಿತ, ಇದು ಅವರಿಗೆ ಹೊಸ ಸವಾಲಾಗಲಿದೆ ಎಂದರು.
ರೋಹಿತ್ ಶರ್ಮಾರನ್ನು ಕನಿಷ್ಠ ಪಕ್ಷ ಆಸ್ಟ್ರೇಲಿಯಾ ಪ್ರವಾಸಕ್ಕಾದರೂ ನಾಯಕನನ್ನಾಗಿ ಮುಂದುವರೆಸಬೇಕಿತ್ತು, ಅವರು ಏಕದಿನ ಸ್ವರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಧಾರಸ್ತಂಭಗಳಲ್ಲಿ ಎಂದು ಕರೆದಿದ್ದಾರೆ. ರೋಹಿತ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗುತ್ತಾರೆ ಎಂದಾಗ, ಮತ್ತೆ ನಾಯಕರಾಗಿ ಮುಂದುವರೆಯುತ್ತಾರೆ ಎಂದು ಭಾವಿಸಿದ್ದೆ, ಚಾಂಪಿಯನ್ಸ್ ಟ್ರೋಫಿ ಮತ್ತು ಇತರ ಪಂದ್ಯಾವಳಿಗಳಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಕ್ರಿಕೆಟಿಗನಿಗೆ ಇನ್ನಷ್ಟು ಸಮಯ ಮುಂದುವರೆಸಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಮುಂದಿನ ಪೀಳಿಗೆ ತಂಡವನ್ನು ಮುನ್ನಡೆಸಲಿ ಎಂಬ ಆಲೋಚನೆಯಲ್ಲಿ ಗಿಲ್ಅವಕಾಶ ನೀಡಿರುವುದು ಉತ್ತಮ ನಿರ್ಧಾರವೇ, ಆದರೆ, 2027 ರ ವಿಶ್ವಕಪ್‌ಗೆ ಇನ್ನೂ ಸಮಯವಿರುವುದರಿಂದ, ಶುಭ್‌ಮಾನ್ ಒಂದು ವರ್ಷದೊಳಗೆ ತಂಡದ ಜವಾಬ್ದಾರಿ ವಹಿಸಿಕೊಳ್ಳಬಹುದಿತ್ತು, ರೋಹಿತ್ ಶರ್ಮಾ ನಾಯಕನಾಗದಿರುವುದು ನನಗೆ ಸ್ವಲ್ಪ ನಿರಾಶೆಯನ್ನುಂಟುಮಾಡಿದೆ ಎಂದು ಹರ್ಭಜನ್ ಹೇಳಿದರು.
ಇದೇ ವಿಷಯವಾಗಿ ಮಾತನಾಡಿರುವ ಮಾಜಿ ಕ್ರಿಕೇಟಿಗ ದಿನೇಶ್ ಕಾರ್ತಿಕ್, ರೋಹಿತ್ ಶರ್ಮಾಗೆ ಧನ್ಯವಾದಗಳು. ನೀವೊಬ್ಬ ಅದ್ಭುತ ನಾಯಕ, ಯುದ್ಧತಂತ್ರದಲ್ಲಿ ನಿಮ್ಮಂತ ಇನ್ನೊಬ್ಬ ಚತುರ ಸಿಗಲು ಸಾಧ್ಯವಿಲ್ಲ. ತಂಡದಲ್ಲಿ ನೀವಿದ್ದಾಗ ತುಂಬಾ ಸ್ನೇಹಪರರಾಗಿದ್ದೀರಿ ಮತ್ತು ಎಲ್ಲರೊಂದಿಗೆ ಬೆರೆಯುತ್ತಿದ್ದಿರಿ. ನೀವು ನಾಯಕನಾಗಿ ಬಿಟ್ಟುಹೋದ ಪರಂಪರೆ. ಆ ದೊಡ್ಡ ಕ್ಷಣಗಳಲ್ಲಿ, ಆ ದೊಡ್ಡ ಪಂದ್ಯಗಳಲ್ಲಿ, ಗೆಲ್ಲಲು ಏನು ಮಾಡಬೇಕು ಎಂಬುದನ್ನು ಕಲಿಸಿದ್ದೀರಿ ಎಂದರು. ಸವಾಲಿನ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ನಾವು ಹಿಂದಕ್ಕೆ ಹೆಜ್ಜೆ ಇಡುತ್ತಿದ್ದೆವು, ಆದರೆ ನೀವು ಮುಂದೆ ಸಾಗಿ ಎದುರಾಳಿಯ ಮೇಲೆ ಹೆಚ್ಚಿನ ಒತ್ತಡ ಹೇರಬೇಕು, ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳವತ್ತಿದ್ದಿರಿ, ಪ್ರಮುಖ ಪಂದ್ಯಗಳಲ್ಲಿ ನಾನು ಇನ್ನೂ ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ನೀವು ಹೇಳುವಾಗ, ಅದನ್ನು ಬ್ಯಾಟ್ ಮೂಲಕವೂ ಸಾಧಿಸಿ ತೋರಿಸಿದ್ದಿರಿ, ನಿಮ್ಮ ಸಾಮರ್ಥ್ಯವೇನು ಎಂದು ತಿಳಿಯಬೇಕಾದರೆ ಬಾರತ ತಂಡದ ಆಡಿದ ಕೊನೆಯ 3 ಐಸಿಸಿ ಟೂರ್ನಿಗಳು ಸಾಕು, ಇವುಗಳಲ್ಲಿ ಭಾರತ ಕೇವಲ ಒಂದು ಪಂದ್ಯ ಮಾತ್ರ ಸೋತಿದೆ ಎಂದು ಹೇಳಿದರು.(ಏಜೆನ್ಸೀಸ್)