ದುಬೈ: ಟೀಮ್ ಇಂಡಿಯಾ ಯುವ ಬ್ಯಾಟರ್ ಶುಭಮಾನ್ ಗಿಲ್ ಐಸಿಸಿ ಏಕದಿನ ಬ್ಯಾಟರ್‌ಗಳ ರ‌್ಯಾಂಕಿಂಗ್‌ನಲ್ಲಿ ಒಂದು ಸ್ತಾನ ಬಡ್ತಿ ಪಡೆಯುವ ಮೂಲಕ ವೃತ್ತಿ ಜೀವನ ಶ್ರೇಷ್ಠ ಸ್ಥಾನ ಅಲಂಕರಿಸಿದ್ದಾರೆ. ಬುಧವಾರ ಐಸಿಸಿ ಬಿಡುಗಡೆಗೊಳಿಸಿದ ನೂತನ ಪರಿಷ್ಕೃತ ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ 759 ರೇಟಿಂಗ್ ಪಾಯಿಂಟ್‌ಗಳೊಂದಿಗೆ ದಕ್ಷಿಣ ಆಫ್ರಿಕಾದ ರಸ್ಸಿ ವ್ಯಾನ್ ಡು ಸೆನ್ (745) ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ (863)ಅಗ್ರಸ್ಥಾನದಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ನಾಯಕ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 8, 9 ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಅಗ್ರ-10ರಲ್ಲಿ ಮೂವರು ಬ್ಯಾಟರ್‌ಗಳು ಸ್ಥಾನ ಪಡೆದಿದ್ದಾರೆ. 2019ರಲ್ಲಿ ಕೊನೇಯದಾಗಿ ರೋಹಿತ್, ಕೊಹ್ಲಿ ಹಾಗೂ ಶಿಖರ್ ಟಾಪ್-10ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಏಷ್ಯಾಕಪ್ ಟೂರ್ನಿಯಲ್ಲಿ 9 ವಿಕೆಟ್ ಕಬಳಿಸಿರುವ ಸ್ಪಿನ್ನರ್ ಕುಲದೀಪ್ ಯಾದವ್ ಬೌಲರ್‌ಗಳ ವಿಭಾಗದಲ್ಲಿ ಐದು ಸ್ಥಾನ ಏರಿಕೆಯೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಮೊಹಮದ್ ಸಿರಾಜ್ 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ.