Shreyas Iyer: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ಇತರ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ ತಮ್ಮ ಮಗ ಶ್ರೇಯಸ್ ಅಯ್ಯರ್ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯದಿದ್ದಕ್ಕೆ ಶ್ರೆಯಸ್ ಅಯ್ಯರ್ ತಂದೆ ಸಂತೋಷ್ ಅಯ್ಯರ್ ನಿರಾಶೆ ವ್ಯಕ್ತಪಡಿಸಿದ್ದಾರೆ.
ಈ ವಿಷಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್, ಶ್ರೇಯಸ್ಗೆ ಅವಕಾಶ ಸಿಗದಿರುವುದು ಸ್ವಾಭಾವಿಕವಾಗಿ ನಿರಾಶೆಯಾಗಿದ್ದು, ಆದರೆ ಈ ಹಿನ್ನಡೆಗೆ ಯಾರನ್ನೂ ದೂಷಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅಂತರ್ ಶಾಲಾ ದೇಶ ಭಕ್ತಿಗೀತೆ, ನೃತ್ಯ ಸ್ಪರ್ಧೆ
ಭಾರತೀಯ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಶ್ರೇಯಸ್ ಇನ್ನೇನು ಮಾಡಬೇಕೆಂದು ನನಗೆ ತಿಳಿದಿಲ್ಲ, ಅವನು ಕಳೆದ ಒಂದು ವರ್ಷದಿಂದ ಆಟಗಾರನಾಗಿ ಅಷ್ಟೆ ಅಲ್ಲದೇ, ನಾಯಕನಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ ಎಂದರು.
ನಾನು ಶ್ರೇಯಸ್ನನ್ನು ಭಾರತ ತಂಡದ ನಾಯಕನನ್ನಾಗಿ ಮಾಡಿ ಎಂದು ಹೇಳುತ್ತಿಲ್ಲ, ಆದರೆ ಕನಿಷ್ಠ ಪಕ್ಷ ತಂಡಕ್ಕಾದರು ಆಯ್ಕೆ ಮಾಡಬೇಕಿತ್ತು ಎಂದರು. ಅವನು ಶಾಂತ ಸ್ವಭಾವದವನಾಗಿದ್ದು, ಆಯ್ಕೆಯಾಗದಿರುವ ಬಗ್ಗೆ ಯಾರನ್ನೂ ದೂಷಿಸಿಲ್ಲ ಆದರೂ ಒಳಗೊಳಗೆ ನಿರಾಶೆಯಾಗಿರಬೇಕು ಎಂದು ತಿಳಿಸಿದರು.
ಇದನ್ನೂ ಓದಿ:ವಿಚಾರಣಾಧೀನ ಆರೋಪಿ ಆತ್ಮಹತ್ಯೆ?
ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿರುವ ಏಷ್ಯಾ ಕಪ್‌ಗಾಗಿ 15 ಸದಸ್ಯರ ತಂಡ ಪ್ರಕಟಿಸಿದ್ದು, ಅದರಿಂದ ಶ್ರೇಯಸ್ ಅವರನ್ನು ಕೈಬಿಡಲಾಗಿದೆ. ಹಲವಾರು ಮಾಜಿ ಕ್ರಿಕೆಟಿಗರು ಆಯ್ಕೆ ಸಮಿತಿಯ ಈ ನಿರ್ಧಾರವನ್ನು ಪ್ರಶ್ನಿಸಿದ್ದು, 2025ರ ಐಪಿಎಲ್ನಲ್ಲಿ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)
2025ರ ಏಷ್ಯಾ ಕಪ್ಗೆ ಭಾರತ ತಂಡ
ಸೂರ್ಯ ಕುಮಾರ್ ಯಾದವ್ (ಸಿ), ಶುಬ್ಮನ್ ಗಿಲ್ (ವಿಸಿ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಸಿಂಗ್, ಸಂಜುನ್ ಯಾದವ್
ಸ್ಟ್ಯಾಂಡ್-ಬೈಸ್: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್