ಬೆಂಗಳೂರು: ಮಂಗಳೂರಿನ ಎಡಗೈ ವೇಗಿ 26 ವರ್ಷದ ಅಭಿಲಾಷ್ ಶೆಟ್ಟಿ ರಾಜ್ಯದ ತಂಡದ ಪರ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ವೈಶಾಕ್ ವಿಜಯ್ ಕುಮಾರ್ ಬದಲಿಗೆ 26 ವರ್ಷದ ಅಭಿಲಾಷ್ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದರು. 2024ರ ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರಾೃಗನ್ ಪರ ಆಡಿ 10 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದ ಅಭಿಲಾಷ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿಯೂ ಗುರುತಿಸಿಕೊಂಡಿದ್ದರು.
ಅಭಿಲಾಷ್ ಶೆಟ್ಟಿ ಕರ್ನಾಟಕ ಪರ ರಣಜಿ ಟ್ರೋಫಿ ಪಂದ್ಯ ಆಡಿದ 313ನೇ ಆಟಗಾರ ಎನಿಸಿದರು.
ಶ್ರೇಯಸ್ ಸತತ 2ನೇ ಸೆಂಚುರಿ: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ (152* ರನ್, 164 ಎಸೆತ, 18 ಬೌಂಡರಿ, 4 ಸಿಕ್ಸರ್) ಮುಂಬೈ ಪರ ಹಾಲಿ ಆವೃತ್ತಿಯಲ್ಲಿ ಸತತ 2ನೇ ಶತಕ ಸಿಡಿಸಿದರು. ಗಾಯದ ಸಮಸ್ಯೆಯಿಂದ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಎ ಗುಂಪಿನ ಪಂದ್ಯದಲ್ಲಿ ಒಡಿಶಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಕಂಬ್ಯಾಕ್ ಮರಳಿದ್ದಾರೆ. ಮೊದಲ ದಿನದಂತ್ಯಕ್ಕೆ ಮುಂಬೈ ತಂಡ 3 ವಿಕೆಟ್‌ಗೆ 385 ರನ್‌ಗಳಿಸಿದ್ದು ಬೃಹತ್ ಮೊತ್ತದತ್ತ ಸಾಗಿದೆ. ಮುಂಬೈ ಪರ 4ನೇ ವಿಕೆಟ್‌ಗೆ ಜತೆಯಾದ ಸಿದ್ದೇಶ್ ಲಾಡ್ (116* ರನ್, 234 ಎಸೆತ, 14 ಬೌಂಡರಿ) ಶ್ರೇಯಸ್ ಜೋಡಿ 298 ಎಸೆತಗಳಲ್ಲಿ 231 ರನ್ ಕಸಿದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಯಕ ಅಜಿಂಕ್ಯ ರಹಾನೆ ಡಕೌಟ್ ಆಗಿ ನಿರಾಸೆ ಮೂಡಿಸಿದರು.
ಸಕ್ಸೇನಾ ಡಬಲ್ ಮೈಲಿಗಲ್ಲು : ಕೇರಳದ ಆಲ್ರೌಂಡರ್ ಜಲಜ್ ಸಕ್ಸೇನಾ (56ಕ್ಕೆ 5) ರಣಜಿ ಟ್ರೋಫಿ ಇತಿಹಾಸದಲ್ಲಿ 6 ಸಾವಿರ ಪ್ಲಸ್ ರನ್ ಹಾಗೂ 400 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಮೈಲಿಗಲ್ಲು ಸ್ಥಾಪಿಸಿದರು. ಉತ್ತರ ಪ್ರದೇಶ ವಿರುದ್ಧ ವೃತ್ತಿಜೀವನದ ದಾಖಲೆಯ 29ನೇ ಐದು ವಿಕೆಟ್ ಗೊಂಚಲು ಪಡೆದ 37 ವರ್ಷದ ಸಕ್ಸೇನಾ, ರಣಜಿ ಇತಿಹಾಸದಲ್ಲಿ 400 ವಿಕೆಟ್ ಪಡೆದ 13ನೇ ಆಟಗಾರ ಎನಿಸಿದರು. ಬಂಗಾಳ ಎದುರಿನ ಹಿಂದಿನ ಪಂದ್ಯದಲ್ಲಿ ಆರು ಸಾವಿರ ರನ್ ಪೂರೈಸಿದ್ದರು. 2005ರಲ್ಲಿ ಮಧ್ಯಪ್ರದೇಶ ಪರವಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಲಗೈ ಆ್ ಸ್ಪಿನ್ನರ್ ಸಕ್ಸೇನಾ, 2016/17ರಲ್ಲಿ ಕೇರಳ ತಂಡಕ್ಕೆ ವಲಸೆ ಹೋದರು. ಸಕ್ಸೇನಾ ರಣಜಿಯಲ್ಲಿ 18ನೇ ತಂಡದ ಎದುರು ಐದು ವಿಕೆಟ್ ಸಾಧನೆ ಮಾಡುವ ಮೂಲಕ ಪಂಕಜ್ ಸಿಂಗ್ (18) ದಾಖಲೆ ಸರಿಗಟ್ಟಿದರು.