ಮುಂಬೈ: ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಲಾಕ್ಡೌನ್ ಸಮಯದಿಂದಲೂ ತಮ್ಮ ವಿವಿಧ ರೀತಿಯ ಮ್ಯಾಜಿಕ್ ಟ್ರಿಕ್ಸ್ಗಳ ಮೂಲಕ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ಹೊಸ ಮ್ಯಾಜಿಕ್ ವಿಡಿಯೋದ ಮೂಲಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಬೆರಗು ಮೂಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಹೊಸ ವಿಡಿಯೋದಲ್ಲಿ ಶ್ರೇಯಸ್ ಅಯ್ಯರ್, ನೀರಿನ ಬಾಟಲಿಯನ್ನು ಟೇಬಲ್ ಮೇಲಿಟ್ಟು ಕೇವಲ ಕೈ ಸನ್ನೆಯ ಮೂಲಕ ಚಲಿಸುವಂತೆ ಮಾಡುವ ಮ್ಯಾಜಿಕ್ ಟ್ರಿಕ್ ಪ್ರದರ್ಶಿಸಿದ್ದಾರೆ. ಇದಕ್ಕೆ ಅವರು, 'ಪೋರ್ಸ್ ನಿಮ್ಮೊಂದಿಗೆ ಇರಬಹುದು' ಎಂಬ ಅಡಿಬರಹವನ್ನು ಬರೆದಿದ್ದಾರೆ.
ಟೀಮ್ ಇಂಡಿಯಾ ಪರ ಇದುವರೆಗೆ 18 ಏಕದಿನ ಮತ್ತು 22 ಟಿ20 ಪಂದ್ಯಗಳನ್ನು ಆಡಿರುವ ಮುಂಬೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಮ್ಯಾಜಿಕ್ ಟ್ರಿಕ್ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಟೀಮ್ ಇಂಡಿಯಾ ಆಟಗಾರರ ಜತೆಗೂ ಅವರು ಈ ಹಿಂದೆ ಮ್ಯಾಜಿಕ್ ಟ್ರಿಕ್ಗಳ ಮೂಲಕ ಗಮನಸೆಳೆದಿದ್ದರು ಎನ್ನಲಾಗಿದೆ.