ಕ್ರೀಡೆ

ಮತ್ತೆ ಮಿಂಚಿದ ಅಭಿನವ್​ ಮನೋಹರ್​; ಶಿವಮೊಗ್ಗ ಲಯನ್ಸ್​ಗೆ ಸತತ 2ನೇ ಗೆಲುವು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಶಿವಮೊಗ್ಗ ಲಯನ್ಸ್​ ಆರಂಭಿಕ 6 ಪಂದ್ಯಗಳ ಸೋಲಿನ ಬಳಿಕ ಸತತ 2ನೇ ಜಯದೊಂದಿಗೆ ಸೆಮೀಸ್​ ಆಸೆ ಜೀವಂತ ಉಳಿಸಿಕೊಂಡಿದೆ. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಮತ್ತೊಮ್ಮೆ ಮಿಂಚಿದ ಅಭಿನವ್​ ಮನೋಹರ್​ (43) ಮತ್ತು ಎಸ್​. ಶಿವರಾಜ್​ (24*) ಉಪಯುಕ್ತ ಆಟದಿಂದ ಶಿವಮೊಗ್ಗ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಮಂಗಳೂ ಡ್ರ್ಯಾಗನ್ಸ್​ ವಿರುದ್ಧ 3 ವಿಕೆಟ್​ಗಳಿಂದ ಜಯ ಸಾಧಿಸಿತು. ಇದರೊಂದಿಗೆ ನಿಹಾಲ್​ ಉಲ್ಲಾಳ್​ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಮಂಗಳೂರು ಕೊನೇ ಸ್ಥಾನಕ್ಕೆ ಕುಸಿಯಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮಂಗಳೂರು ತಂಡ ನಿಕಿನ್​ ಜೋಸ್​ (57 ರನ್​, 37 ಎಸೆತ, 7 ಬೌಂಡರಿ, 1 ಸಿಕ್ಸರ್​) ಅರ್ಧಶತಕದ ಬಲದಿಂದ 7 ವಿಕೆಟ್​ಗೆ 152 ರನ್​ ಗಳಿಸಿತು. ಪ್ರತಿಯಾಗಿ ಶಿವಮೊಗ್ಗ 18.4 ಓವರ್​ಗಳಲ್ಲಿ 7 ವಿಕೆಟ್​ಗೆ 153 ರನ್​ ಗಳಿಸಿ ಜಯಿಸಿತು.

ಮಂಗಳೂರು ಡ್ರ್ಯಾಗನ್ಸ್​: 7 ವಿಕೆಟ್​ಗೆ 152 (ನೋರೋನ್ಹಾ 6, ರೋಹನ್​ 9, ನಿಕಿನ್​ 57, ಸಿದ್ಧಾರ್ಥ್​ 9, ಶ್ರೇಯಸ್​ 19, ದರ್ಶನ್​ 18*, ಲೋಚನ್​ 19, ಕೌಶಿಕ್​ 21ಕ್ಕೆ 1, ಆನಂದ್​ 26ಕ್ಕೆ 1, ಅವಿನಾಶ್​ 26ಕ್ಕೆ 1, ಅಶೋಕ್​ 20ಕ್ಕೆ 1, ಹಾರ್ದಿಕ್​ 21ಕ್ಕೆ 1). ಶಿವಮೊಗ್ಗ ಲಯನ್ಸ್​: 18.4 ಓವರ್​ಗಳಲ್ಲಿ 7 ವಿಕೆಟ್​ಗೆ 153 (ನಿಹಾಲ್​ 13, ರೋಹನ್​ ನವೀನ್​ 37, ಅಭಿನವ್​ 43, ಶಿವರಾಜ್​ 24*, ಅದ್ವಿತ್​ ಶೆಟ್ಟಿ 49ಕ್ಕೆ 2, ಆರ್ಯ 14ಕ್ಕೆ 2).

ಇಂದಿನ ಪಂದ್ಯಗಳು

ಮಂಗಳೂರು ಡ್ರ್ಯಾಗನ್ಸ್​-ಹುಬ್ಬಳ್ಳಿ ಟೈಗರ್ಸ್​

ಆರಂಭ: ಮಧ್ಯಾಹ್ನ 3.00

ಬೆಂಗಳೂರು ಬ್ಲಾಸ್ಟರ್ಸ್​-ಗುಲ್ಬರ್ಗಾ ಮಿಸ್ಟಿಕ್ಸ್​

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ಕನ್ನಡ