ಕ್ರೀಡೆ

ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್​ ಆಟಗಾರ; KKRಗೆ ಬಿಗ್​ ಶಾಕ್​

ಕೊಲ್ಕತ: ಬಾಂಗ್ಲಾದೇಶ ಕ್ರಿಕೆಟ್​ ತಂಡದ ನಾಯಕ ಶಕಿಬ್​ ಅಲ್​ ಹಸನ್​ ಅಂತರಾಷ್ಟ್ರೀಯ ಸರಣಿ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿಯ IPLನಲ್ಲಿ ಆಡದಿರಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.

ಐರ್ಲೆಂಡ್​ ವಿರುದ್ದ ಏಪ್ರಿಲ್​ 4-8ರವರೆಗೆ ಟೆಸ್ಟ್​​ ಪಂದ್ಯ ನಡೆಯಲಿದ್ದು 9ನೇ ತಾರೀಖು ಆರ್​ಸಿಬಿ ವಿರುದ್ಧ ನಡೆಯುವ ಪಂದ್ಯದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. IPLನಲ್ಲಿ ಭಾಗವಹಿಸದೆ ಇರುವುದನ್ನು ತಮ್ಮ ಫ್ರಾಂಚೈಸಿ(KKR)ಗೆ ಶಕಿಬ್​​ ತಿಳಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಶಕಿಬ್​ ಜೊತೆ ಬಾಂಗ್ಲಾದೇಶದ ಆಟಗಾರ ವಿಕೆಟ್​ ಕೀಪರ್​, ಬ್ಯಾಟ್ಸ್​ಮ್ಯಾನ್​ ಲಿಟನ್​ ದಾಸ್​ ಲಭ್ಯತೆ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

KKR ತಂಡವು ಶಕಿಬ್​ ಬದಲಿಗೆ ಶ್ರೀಲಂಕಾದ ದಸುನ್​ ಶನಕಾ, ಅಫ್ಘಾನಿಸ್ಥಾನದ ಸ್ಪಿನರ್​ ಮೊಹಮ್ಮದ್​ ನಬಿ, ದಕ್ಷಿಣ ಆಫ್ರಿಕಾದ ವೇಯ್ನ್​ ಪರ್​ನೆಲ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಮೊದಲು ನಾಯಕ ಶ್ರೇಯಸ್ ಅಯ್ಯರ್​ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಬಿದ್ದಿದ್ದರು.