ಬೆಂಗಳೂರು: ರಷ್ಯಾದ ಬೋಗ್ಡನ್ ಬೊಬ್ರೊವ್, ಆತಿಥೇಯರಾದ 4ನೇ ಶ್ರೇಯಾಂಕಿತ ಕರಣ್ ಸಿಂಗ್, 5ನೇ ಶ್ರೇಯಾಂಕಿತ ಆರ್ಯನ್ ಷಾ, ದೇವ್ ಜವಿಯಾ ಹಾಗೂ ಸಿದ್ದಾರ್ಥ್ ರಾವತ್ ಕಲಬುರಗಿ ಓಪನ್ ಪುರುಷರ ಐಟಿಎ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ಫೈನಲ್ಗೇರಿದ್ದಾರೆ. . ಮೈಸೂರಿನ ಎಸ್‌ಡಿ ಪ್ರಜ್ವಲ್ ದೇವ್ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.
ಕಲಬುರಗಿಯ ಚಂದ್ರಶೇಖರ್ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಬೋಗ್ಡನ್ ಬೊಬ್ರೊವ್ ವಿರುದ್ಧ 6-2, 6-3 ರಿಂದ 28 ವರ್ಷದ ಪ್ರಜ್ವಲ್‌ದೇವ್ ಪರಾಭವಗೊಂಡರು. ಇನ್ನೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಖುಮೊಯುನ್ ಸುಲ್ತಾನೊವ್ 6-4, 6-0 ರಿಂದ ಧೀರಜ್ ಕೊಡಂಚಾ ಎದುರು ಗೆಲುವು ಸಾಧಿಸಿದರು.
7ನೇ ಶ್ರೇಯಾಂಕಿತ ದೇವ್ ಜವಿಯಾ 5-7, 6-2, 6-2ರಿಂದ ಇಂಡೋನೇಷ್ಯಾದ ರಿಕಿ ಫಿತ್ರಿಅದಿರನ್ನು ಮಣಿಸಿದರೆ, ಆರ್ಯನ್ ಷಾ 6-3, 6-3ರಿಂದ ದೇಶ ಬಾಂಧವ ಮನೀಷ್ ಸುರೇಶ್ ಕುಮಾರ್ ಎದುರು ಗೆದ್ದು ಜನ್ಮದಿನವನ್ನು ಸಂಭ್ರಮಿಸಿದರು. ಸಿದ್ದಾರ್ಥ್ ರಾವತ್ ಅಮೆರಿಕದ ಆಧಿತ್ಯ ಗಣೇಶನ್ ವಿರುದ್ಧ 6-3,7-6 (7-0)ರಿಂದ ಗೆದ್ದರೆ, ಅಮೆರಿಕದ ನಿಕ್ ಚಾಪೆಲ್ 6-3, 6-2 ರಿಂದ ಇಂಡೋನೇಷ್ಯಾದ ಆಂಟೋನಿ ಸುಸಾಂಟೋ ವಿರುದ್ಧ, ಮ್ಯಾಕ್ಸಿಮ್ ಝಕೊವ್ 6-2, 6-1 ರಿಂದ ರಿಷಭ್ ಅಗರ್ವಾಲ್ ಎದುರು ಗೆದ್ದು ಎಂಟರ ಘಟ್ಟಕ್ಕೇರಿದರು.
ಸೆಮೀಸ್‌ಗೆ ಸಿದ್ದಾಂತ್-ವಿಷ್ಣು ಜೋಡಿ: ಡಬಲ್ಸ್‌ನಲ್ಲಿ ಭಾರತದ ಸಿದ್ದಾಂತ್ ಬಂಥಿಯಾ ಹಾಗೂ ವಿಷ್ಣುವರ್ಧನ್ ಜೋಡಿ 4-6, 6-2, 10-7ರಿಂದ ರಿಕಿ ಫಿತ್ರಿಅದಿ- ರಿಷಿ ರೆಡ್ಡಿ ಜೋಡಿಯನ್ನು ಮಣಿಸಿ ಉಪಾಂತ್ಯಕ್ಕೇರಿತು. ನಿಕ್ ಚಾಪೆಲ್-ನಿತಿನ್ ಕುಮಾರ್ ಸಿನ್ಹಾ 6-2, 7-5 ರಿಂದ ಯಶ್ ಚೌರಾಸಿಯಾ-ಕರಣ್ ಸಿಂಗ್ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ರಷ್ಯಾದ ಇಗೋರ್ ಅಗಪೊನೊವ್-ಬೋಗ್ಡನ್ ಬೊಬ್ರೊವ್ ಜೋಡಿ 1-6, 7-6, (8-6) ರಿಂದ ಆದಿತ್ಯ ಗಣೇಶನ್ -ಆರ್ಯನ್ ಸಿಂಗ್ ಎದುರು ಜಯ ಸಾಧಿಸಿದರೆ, ರಿಷಭ್ ಅಗರ್ವಾಲ್ /ಕಬೀರ್ ಹನ್ಸ್ 7-5, 6-3 ರಿಂದ 4ನೇ ಶ್ರೇಯಾಂಕಿತ ಮನೀಷ್ ಸುರೇಶ್ ಕುಮಾರ್-ಪರೀಕ್ಷಿತ್ ಸೋಮನಿ ವಿರುದ್ಧ ಗೆದ್ದು ಸೆಮೀಸ್‌ಗೆ ಮುನ್ನಡೆದರು.