ಲಾಕ್ಡೌನ್ ಮುಂದೂಡಿಕೆಯಿಂದ ದೇಶದ ಎಲ್ಲ ಕ್ರೀಡೆಗಳು ಸ್ತಬ್ಧಗೊಂಡಿರುವಂತೆ, ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ 13ನೇ ಆವೃತ್ತಿಯೂ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವುದು ಖಚಿತಗೊಂಡಿದೆ.
ಈ ಮುನ್ನ ಬಿಸಿಸಿಐ ನಿರ್ಧರಿಸಿದಂತೆ, ಏಪ್ರಿಲ್ 15ರವರೆಗೆ ಐಪಿಎಲ್ ನಡೆಸುವುದಿಲ್ಲ ಎಂದಿತ್ತು. ಇದೀಗ ಲಾಕ್ಡೌನ್ ಮೇ 3ರವರೆಗೆ ಮುಂದುವರಿದಿರುವ ಕಾರಣ, ಅಲ್ಲಿಯವರೆಗೆ ಐಪಿಎಲ್ ಕೂಡ ನಡೆಯುವುದಿಲ್ಲ. ಆದರೆ ಬಿಸಿಸಿಐ ಮಾತ್ರ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಮೇ 3ರವರೆಗೆ ಬಿಸಿಸಿಐಗೂ ಟೂರ್ನಿಯ ಭವಿಷ್ಯ ನಿರ್ಧರಿಸಲು ಸಾಧ್ಯವಾಗದು ಎನ್ನಲಾಗಿದೆ.