ಕ್ರೀಡೆ

ರಗ್ಬಿ ಪ್ರೀಮಿಯರ್ ಲೀಗ್: ಬೆಂಗಳೂರು ಬ್ರೇವ್ ಹಾರ್ಟ್ಸ್ ತಂಡಕ್ಕೆ ಸ್ಕಾಟ್ ಕರಿ ನಾಯಕ, ಪೊಲ್ ಪ್ಲೇವೆಗ್ ಉಪನಾಯಕ

ಬೆಂಗಳೂರು: ಜೂನ್ 15 ರಿಂದ ಮುಂಬೈನ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವ ಜಿಎಂಆರ್ ರಗ್ಬಿ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ಬ್ರೇವ್ ಹಾರ್ಟ್ಸ್ ತಂಡ ಸಹ-ಕ್ಯಾಪ್ಟನ್ ಗಳಾಗಿ ಕಿವಿ ಲೆಜೆಂಡ್ ಎಂದು ಖ್ಯಾತಿ ಪಡೆದ ಸ್ಕಾಟ್ ಕರಿ ಮತ್ತು ಸ್ಪಾನಿಷ್ ಕ್ಯಾಪ್ಟನ್ ಪೊಲ್ ಪ್ಲೇವೆಗ್ ಸಹ-ಕ್ಯಾಪ್ಟನ್ ಗಳಾಗಿದ್ದಾರೆ.

ಜಿಎಂಆರ್ ರಗ್ಬಿ ಪ್ರೀಮಿಯರ್ ಲೀಗ್ ಮೊದಲ ಫ್ರಾಂಚೈಸಿ ಆಧರಿತ ಅಂತಾರಾಷ್ಟ್ರೀಯ ಲೀಗ್ ಆಗಿದ್ದು ಅಂತಾರಾಷ್ಟ್ರೀಯ ರಗ್ಬಿ ಖ್ಯಾತನಾಮರು ಭಾರತದಲ್ಲಿ ಬೆಳೆದ ಅತ್ಯುತ್ತಮ ಪ್ರತಿಭೆಗಳ ಜೊತೆಯಲ್ಲಿ ಆಡಲಿದ್ದಾರೆ.

ನಾವು ಮುಂದೆ ಬರಲಿರುವ ರಗ್ಬಿ ಪ್ರೀಮಿಯರ್ ಲೀಗ್ ಕುರಿತು ಬಹಳ ಉತ್ಸುಕರಾಗಿದ್ದೇವೆ ಮತ್ತು ಉದ್ಘಾಟನಾ ಋತುವಿನಲ್ಲಿ ಬೆಂಗಳೂರು ಬ್ರೇವ್ ಹಾರ್ಟ್ಸ್ ನಾಯಕತ್ವ ವಹಿಸುವುದು ನಾವು ನಿಜಕ್ಕೂ ನಿರೀಕ್ಷಿಸುತ್ತಿರುವ ಜವಾಬ್ದಾರಿಯಾಗಿದೆ. ನಮ್ಮ ತಂಡದಲ್ಲಿ ಅಂತಾರಾಷ್ಟ್ರೀಯ ರಗ್ಬಿಯ ಖ್ಯಾತನಾಮರು ಮತ್ತು ಭಾರತೀಯ ಅತ್ಯುತ್ತಮ ಆಟಗಾರರಿದ್ದಾರೆ ಮತ್ತು ನಮ್ಮ ಅಭಿಯಾನ ಪ್ರಾರಂಭಿಸಲು ಕಾತುರರಾಗಿದ್ದೇವೆ” ಎಂದು ಸ್ಕಾಟ್ ಕರಿ ಮತ್ತು ಪೊಲ್ ಪ್ಲೇವೆಗ್ ಹೇಳಿದರು.

ಸ್ಕಾಟ್ ಕರಿ ಮತ್ತು ಪೊಲ್ ಪ್ಲೇವೆಗ್ ಪರಸ್ಪರ ಅವರ ಸ್ವಂತ ಅನುಭವವನ್ನು ಫ್ರಾಂಚೈಸಿಗೆ ತರಲಿದ್ದು ಪ್ರತಿಯೊಬ್ಬರೂ ವಿಶ್ವದ ಅತ್ಯುತ್ತಮ ಕಡೆಗಳಲ್ಲಿ ನಾಯಕತ್ವ ವಹಿಸಿದ್ದು ಬೆಂಗಳೂರು ಬ್ರೇವ್ ಹಾರ್ಟ್ಸ್ ಅನ್ನು ರಗ್ಬಿ ಪ್ರೀಮಿಯರ್ ಲೀಗ್ ನಲ್ಲಿ ಯಶಸ್ವಿ ಉದ್ಘಾಟನಾ ಋತುವನ್ನಾಗಿಸಲಿದ್ದಾರೆ. ಸ್ಕಾಟ್ ಕರಿ ರಗ್ಬಿ ಸೆವೆನ್ಸ್ ಗೇಮ್ ನಲ್ಲಿ ನ್ಯೂಜಿಲೆಂಡ್ ಕಡೆ ನಾಯಕತ್ವ ವಹಿಸಿದ್ದು ಆ ತಂಡವು ಆಲ್ ಬ್ಲಾಕ್ಸ್ ಸೆವೆನ್ ಎಂದು ಖ್ಯಾತಿ ಪಡೆದಿದೆ. ಅವರು ತಂಡವನ್ನು 2020ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಒಲಂಪಿಕ್ ಬೆಳ್ಳಿಯ ಪದಕ ಗೆಲ್ಲಲು ಮುನ್ನಡೆಸಿದರು. ಪೊಲ್ ಪ್ಲೇವೆಗ್ ಸ್ಪಾನಿಷ್ ರಗ್ಬಿ 7ಎಸ್ ತಂಡದ ನಾಯಕರಾಗಿದ್ದಾರೆ ಮತ್ತು ಮುಂಚೂಣಿಯ ಸ್ಪಾನಿಶ್ ಆಟಗಾರರಾಗಿದ್ದು ಹಲವಾರು ಸಾಧನೆಗಳನ್ನು ಮಾಡಿದ್ದಾರೆ.

“ರಂಜನ್, ಭೂಪಿಂದರ್ ಮತ್ತು ನಾನು ಮೂವರೂ ನ್ಯೂಜಿಲೆಂಡ್, ಫಿಜಿ, ಸ್ಪೇನ್, ಉಗಾಂಡಾ, ಹಾಂಗ್ ಕಾಂಗ್, ಕೆನಡಾ ಮತ್ತು ಭಾರತದ ರಗ್ಬಿಯ ಖ್ಯಾತರನ್ನು ಒಳಗೊಂಡ ತಂಡವನ್ನು ಭಾರತದ ಅತ್ಯುತ್ತಮ ಕೋಚ್ ಸಹಯೋಗದಲ್ಲಿ ಖ್ಯಾತ ಕೋಚ್ ಪಾಕೊ ಹರ್ನಂಡೆಝ್ ಅವರ ನೇತೃತ್ವದಲ್ಲಿ ಹೊಂದಿರುವುದಕ್ಕೆ ಬಹಳ ಸಂತೋಷ ಪಡುತ್ತಿದ್ದೇವೆ. ವಿವಿಧ ಭಾಷೆಗಳು, ವಿವಿಧ ರೀತಿಗಳು, ವಿವಿಧ ಸಂಸ್ಕೃತಿಗಳು ಆದರೆ ಅದು ನಗು, ರಗ್ಬಿಯ ಪ್ರೀತಿ ಮತ್ತು ಬ್ರೇವ್ ಹಾರ್ಟ್ಸ್ ಅನ್ನು ಬೆಂಗಳೂರಿಗೆ ಮೊದಲ ಆವೃತ್ತಿಯ ಕಪ್ ಗೆಲ್ಲುವ ಉತ್ಸಾಹಕರ “ನಮ್ಮದು” ಎನ್ನುವ ಪ್ರೀತಿಯು ಒಗ್ಗೂಡಿಸಿದೆ. ಜಿಎಂಆರ್ ಮತ್ತು ಇಂಡಿಯನ್ ರಗ್ಬಿ ಫುಟ್ ಬಾಲ್ ಯೂನಿಯನ್ ಒಗ್ಗೂಡುತ್ತಿದ್ದು ಭಾರತದಲ್ಲಿ ಭವಿಷ್ಯದಲ್ಲಿ ಈ ಕ್ರೀಡೆ ಆಡುವ ಲಕ್ಷಾಂತರ ಯುವಜನರಿಗೆ ಅಪಾರ ಭರವಸೆ ನೀಡುತ್ತದೆ” ಎಂದು ಬೆಂಗಳೂರು ಬ್ರೇವ್ ಹಾರ್ಟ್ಸ್ ಸಂಜಿತ್ ಶೆಟ್ಟಿ ಹೇಳಿದರು.

ಮಣಿಪಾಲ್ ಸಮೂಹದ ಡಾ.ರಂಜನ್ ಪೈ, ಇನ್ಕ್ರೆಡ್ ನ ಶ್ರೀ ಭೂಪಿಂದರ್ ಸಿಂಗ್ ಮತ್ತು ಸೋಹಂನ ಶ್ರೀ ಸಂಜಿತ್ ಶೆಟ್ಟಿ ನೇತೃತ್ವದ ಬೆಂಗಳೂರು ಬ್ರೇವ್ ಹಾರ್ಟ್ಸ್ ತಂಡದಲ್ಲಿ ಟೋನ್ ಎನ್.ಜಿ. ಶಿಯು, ಮೋಹಿತ್ ಖತ್ರಿ, ಅಯೊವನೆ ತೆಬಾ, ಲಿಯಂ ಪೌಲ್ಟನ್, ಅರ್ಪಣ್ ಛೆಟ್ರಿ ಅಂತಿಮ ತಂಡದಲ್ಲಿದ್ದಾರೆ. ಸಂಪೂರ್ಣ ತಂಡದಲ್ಲಿ ಸ್ಕಾಟ್ ಕರಿ, ಪೊಲ್ ಪ್ಲೇವೆಗ್, ಟೋನ್ ಎನ್.ಜಿ.ಶಿಯು, ಸುರೇಶ್ ಕುಮಾರ್, ಅಯೊವನೆ ತೆಬಾ, ಮಾಕ್ ಚುಂಗ್, ಅಕಿಲಾ ರೊಕೊಲಿಸೊವಾ, ಲಿಯಮ್ ಪೌಲ್ಟನ್, ಮೋಹಿತ್ ಖತ್ರಿ, ಅರ್ಪಣ್ ಛೆಟ್ರಿ, ಕರಣ್ ರಾಜ್ ಭಾರ್ ಮತ್ತು ಪ್ರಶಾಂತ್ ಸಿಂಗ್ ಇದ್ದಾರೆ. ತಂಡಕ್ಕೆ ಖ್ಯಾತ ಫ್ರಾನ್ಸಿಸ್ಕೊ `ಪಾಕೊ’ ಹರ್ನಂಡೆಝ್ ಕೋಚ್ ಮಾಡುತ್ತಿದ್ದಾರೆ.

ಬೆಂಗಳೂರು ಬ್ರೇವ್ ಹಾರ್ಟ್ಸ್ ದೆಹಲಿ ರೆಡ್ಝ್ ವಿರುದ್ಧ ತಮ್ಮ ಅಭಿಯಾನವನ್ನು ಜೂನ್ 15, 2025ರಂದು ನಡೆಯುವ ಮೊದಲ ಪಂದ್ಯದಲ್ಲಿ ಪ್ರಾರಂಭಿಸುತ್ತದೆ.

ವೇಳಾಪಟ್ಟಿ (ಬೆಂಗಳೂರು ಬ್ರೇವ್ ಹಾರ್ಟ್ಸ್)

June 15: vs ಡೆಲ್ಲಿ ರೆಡ್ಜ್

June 16: vs ಕಳಿಂಗಾ ಬ್ಲಾಕ್ ಟೈಗರ್ಸ್

June 17: vs ಹೈದರಾಬಾದ್ ಹೀರೋಸ್

June 19: vs ಮುಂಬೈ ಡ್ರೀಮರ್ಸ್

June 20: vs ಚೆನ್ನೈ ಬುಲ್ಸ್

June 21: vs ಚೆನ್ನೈ ಬುಲ್ಸ್

June 22: vs ಹೈದರಾಬಾದ್ ಹೀರೋಸ್

June 23: vs ಡೆಲ್ಲಿ ರೆಡ್ಜ್

June 25: vs ಕಳಿಂಗಾ ಬ್ಲಾಕ್ ಟೈಗರ್ಸ್

June 27: vs ಮುಂಬೈ ಡ್ರೀಮರ್ಸ್