ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಇಂಗ್ಲೆಂಡ್ ತಾರೆ ನ್ಯಾಟ್ ಸೀವರ್ ಬ್ರಂಟ್ (75* ರನ್, 44 ಎಸೆತ, 13 ಬೌಂಡರಿ ಹಾಗೂ 18ಕ್ಕೆ 3) ಆಲ್ರೌಂಡ್ ಆಟದ ಬಲದಿಂದ ಮುಂಬೈ ಇಂಂಡಿಯನ್ಸ್ ತಂಡ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲುಪಿಎಲ್) ಯುಪಿ ವಾರಿಯರ್ಸ್ ಎದುರು 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್ಪ್ರೀತ್ ಕೌರ್ ಪಡೆ ಡೆಲ್ಲಿ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಯುಪಿ ವಾರಿಯರ್ಸ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಎರಡನೇ ವಿಕೆಟ್ಗೆ ಗ್ರೇಸ್ ಹ್ಯಾರಿಸ್ (45 ರನ್, 26 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡತಿ ವೃಂದಾ ದಿನೇಶ್ (33) ನಡೆಸಿದ ಜತೆಯಾಟದಿಂದ ಸುಸ್ಥಿತಿಯಲ್ಲಿತ್ತು. ನಂತರ ದಿಢೀರ್ ಕುಸಿತ ಕಂಡ ಯುಪಿ ಅಂತಿಮವಾಗಿ 9 ವಿಕೆಟ್ಗೆ 142 ರನ್ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ನ್ಯಾಟ್ ಸೀವರ್ ಬ್ರಂಟ್ ಹಾಗೂ ಹ್ಯಾಲೆ ಮ್ಯಾಥ್ಯೂಸ್ (59 ರನ್, 50 ಎಸೆತ, 7 ಬೌಂಡರಿ, 2 ಸಿಕ್ಸರ್) ಎರಡನೇ ವಿಕೆಟ್ಗೆ ಇವರಿಬ್ಬರು 82 ಎಸೆತಗಳಲ್ಲಿ 133 ರನ್ ಕಸಿದ ನೆರವಿನಿಂದ ಮುಂಬೈ ಇಂಡಿಯನ್ಸ್ 17 ಓವರ್ಗಳಲ್ಲಿ 2 ವಿಕೆಟ್ಗೆ 143 ರನ್ಗಳಿಸಿ ಜಯದ ಸಂಭ್ರಮ ಕಂಡಿತು.
ಯುಪಿ ವಾರಿಯರ್ಸ್: 9 ವಿಕೆಟ್ಗೆ 142 (ಕಿರಣ್ 1, ಗ್ರೇಸ್ ಹ್ಯಾರಿಸ್ 45, ವೃಂದಾ ದಿನೇಶ್ 33, ದೀಪ್ತಿ 4, ತಾಹ್ಲಿಯಾ 1, ಶ್ವೇತಾ 19, ಉಮಾ 13, ಚಿನೆಲ್ಲೆ 7, ಎಕ್ಲೆಸ್ಟೋನ್ 6, ಕ್ರಾಂತಿ ಗೌಡ್ 5*, ಸೀವರ್ ಬ್ರಂಟ್ 18ಕ್ಕೆ 3, ಸಂಸತಿ 11ಕ್ಕೆ 2, ಶಬ್ನಮ್ 33ಕ್ಕೆ 2).
ಮುಂಬೈ ಇಂಡಿಯನ್ಸ್: 17 ಓವರ್ಗಳಲ್ಲಿ 2 ವಿಕೆಟ್ಗೆ 143 (ಯಸ್ತಿಕಾ 0, ಮ್ಯಾಥ್ಯೂಸ್ 59, ಸೀವರ್ ಬ್ರಂಟ್ 75*, ಹರ್ಮಾನ್ಪ್ರೀತ್ 4*, ದೀಪ್ತಿ ಶರ್ಮ 25ಕ್ಕೆ 1).