ನವದೆಹಲಿ: ಜಾಗತಿಕ ಕ್ರೀಡಾ ಚಟುವಟಿಕೆ ಸ್ತಬ್ಧಗೊಂಡಿ ರುವ ನಡುವೆ ಕೆಲ ಕ್ರೀಡಾಪಟುಗಳು ಈಗಾಗಲೆ ಆನ್ಲೈನ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಭಾರತದ ಟೇಬಲ್ ಟೆನಿಸ್ ಆಟಗಾರ ಜಿ. ಸತ್ಯನ್ ಇನ್ನಷ್ಟು ವಿನೂತನ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದು, ಲಾಕ್ಡೌನ್ ನಡುವೆ ಅಭ್ಯಾಸಕ್ಕಾಗಿ ರೋಬಾಟ್ಗಳನ್ನು ಬಳಸಿಕೊಂಡಿದ್ದಾರೆ.
ಚೆನ್ನೈನ ಮನೆಯಲ್ಲಿ ಲಾಕ್ ಆಗಿರುವ 27 ವರ್ಷದ ಜಿ. ಸತ್ಯನ್, ಅಲ್ಲೇ ರೋಬಾಟ್ ಜತೆಗೆ ಟೇಬಲ್ ಟೆನಿಸ್ ಆಡಿ ಅಭ್ಯಾಸ ಮಾಡುತ್ತಿದ್ದಾರೆ. ಬಟರ್ಫ್ಲೈ ಆಮಿಕಸ್ ಪ್ರೖೆಮ್ ರಿಮೋಟ್ ಮೂಲಕ ಆಪರೇಟ್ ಮಾಡಲಾಗುವ ರೋಬಾಟ್ಅನ್ನು ಜಿ. ಸತ್ಯನ್ ಕಳೆದ ನವೆಂಬರ್ನಲ್ಲೇ ಜರ್ಮನಿಯಿಂದ ಆಮದು ಮಾಡಿಕೊಂಡಿದ್ದರು. ವಿಶ್ವ ನಂ. 31 ಆಟಗಾರರಾಗಿರುವ ಜಿ. ಸತ್ಯನ್, ಗೋ ಸ್ಪೋರ್ಟ್ಸ್
ಫೌಂಡೇಷನ್ನ ಆರ್ಥಿಕ ನೆರವಿನಿಂದ ಈ ರೋಬಾಟ್ ಖರೀದಿಸಿದ್ದರು. ಇದು ಭಿನ್ನ ವೇಗಗಳಲ್ಲಿ ಚೆಂಡು ರಿಟರ್ನ್ ಮಾಡುತ್ತದೆ. ಒಟ್ಟು 300 ಚೆಂಡುಗಳನ್ನು ಅದರಲ್ಲಿ ಲೋಡ್ ಮಾಡಬಹುದು. ಈಗಿನ ಸಮಯದಲ್ಲಿ ಇದು ಬಹಳ ಉಪಯುಕ್ತ ಎಂದು ಜಿ.ಸತ್ಯನ್ ಹೇಳಿದ್ದಾರೆ.
ಮನೆಯಿಂದಲೇ ಮ್ಯಾರಥಾನ್ ಸ್ಪರ್ಧೆ!: ಆನ್ಲೈನ್ ಗೇಮಿಂಗ್ಗಳ ನಡುವೆ ಇದೀಗ ಮ್ಯಾರಥಾನ್ ಓಟವನ್ನೂ ಆಯೋಜಿಸಲಾಗಿದ್ದು, 62 ದೇಶಗಳಿಂದ 749 ಓಟಗಾರರು ಮನೆಯಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ! ಸ್ಪರ್ಧೆಯಲ್ಲಿ ಓಟಗಾರರು ಟ್ರೆಡ್ವಿುಲ್ ಅಥವಾ ಬೇರಾವುದೇ ಟ್ರೇನಿಂಗ್ ಯಂತ್ರಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲೂ ಓಡುವಂತಿಲ್ಲ. ಮನೆಯೊಳಗೆ ಮಾತ್ರ ಓಡಬೇಕು. ಈ ವೇಳೆ ಸ್ಪರ್ಧಿಗಳು ಓಡುವ ದೂರವನ್ನು ಸ್ಟಾವ ಆಪ್ ಮೂಲಕ ಅಳೆಯಲಾಗುವುದು. ಸ್ಮಾರ್ಟ್ವಾಚ್ ಅಥವಾ ಸ್ಮಾರ್ಟ್ಫೋನ್ವುೂಲಕ ಸ್ಟಾವದಲ್ಲಿ ಸ್ಪರ್ಧಿಗಳ ಚಲನೆ ಮತ್ತು ಓಟದ ಸಮಯ ಲೆಕ್ಕಹಾಕಲಾಗುವುದು.