ಮುಂಬೈ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಯ್ಕೆಯಾಗಿದ್ದರು ತಂಡ ಕೂಡಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದ ಯುವ ಆಟಗಾರರಾದ ಧ್ರುವ್ ಜುರೆಲ್, ಯಶ್ ದಯಾಳ್ ಹಾಗೂ ಸರ್ಫರಾಜ್ ಖಾನ್ ಇದೀಗ ಸರಣಿಯ ಎರಡನೇ ಪಂದ್ಯಕ್ಕೂ ತಂಡ ಕೂಡಿಕೊಳ್ಳುವುದಿಲ್ಲ ಎಂಬ ವಿಚಾರ ಹೊರಬಿದ್ದಿದ್ದು, ಈ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಸರ್ಫರಾಝ್ ಖಾನ್, ಧ್ರುವ್ ಜುರೇಲ್ ಹಾಗೂ ಯಶ್ ದಯಾಳ್ ಅವರನ್ನು ಭಾರತ ತಂಡದಿಂದ ಹೊರಬರಲಿದ್ದಾರೆ. ಈ ಮೂವರು ಆಟಗಾರರು ಮುಂಬರುವ ಇರಾನಿ ಕಪ್ ಪಂದ್ಯಕ್ಕೆ ಆಯ್ಕೆಯಾಗಿದ್ದು, ಹೀಗಾಗಿ ಇವರನ್ನು ಟೀಮ್ ಇಂಡಿಯಾದಿಂದ ರಿಲೀಸ್ ಮಾಡಲಾಗುತ್ತಿದೆ. ಅಕ್ಟೋಬರ್ 1 ರಿಂದ ಶುರುವಾಗಲಿರುವ ಇರಾನಿ ಕಪ್ನಲ್ಲಿ ಈ ಮೂವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಬಾಂಗ್ಲಾದೇಶ ವಿರುದ್ಧ ದ ಮೊಲದ ಪಂದ್ಯದಲ್ಲೂ ಈ ಮೂವರು ಆಟಗಾರರಿಗೆ ಮಣೆ ಹಾಕಿರಲಿಲ್ಲ. ಹೀಗಾಗಿ ಅವರು ಬೆಂಚ್ ಕಾಯಬೇಕಾಗಿ ಬಂತು. ಸರಣಿಯ ಎರಡನೇ ಪಂದ್ಯದಲ್ಲೂ ಚಾನ್ಸ್ ಸಿಗುವುದು ಡೌಟ್ ಎಂದು ಹೇಳಲಾಗಿದ್ದು, ಹೀಗಾಗಿ ಈ ಮೂವರು ಆಟಗಾರರನ್ನು ಇರಾನಿ ಕಪ್ಗೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಉನ್ನತ ಸುದ್ದಿ ಮೂಲಗಳು ತಿಳಿಸಿದೆ.
ಸರಣಿಯ ಎರಡನೇ ಪಂದ್ಯವು ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ ಆರಂಭವಾಗಲಿದ್ದು, ಅಕ್ಟೋಬರ್ 01ರಿಂದ ಇರಾನಿ ಕಪ್ ಆರಂಭವಾಗಲಿದೆ. ಒಂದು ವೇಳೆ ಈ ಮೂವರು ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ತಾನ ಪಡೆದರೆ ಆಗ ಇರಾನಿ ಕಪ್ನಲ್ಲಿ ಭಾಗಿಯಾಗಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೀಗಾಗಿ ಸೆಪ್ಟೆಂಬರ್ ಅಂತ್ಯದೊಳಗೆ ಈ ಮೂವರು ಇರಾನಿ ಕಪ್ ತಂಡಗಳನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.