ಹರಾರೆ: ಉಪನಾಯಕ ಸಂಜು ಸ್ಯಾಮ್ಸನ್ (58 ರನ್, 45 ಎಸೆತ, 1 ಬೌಂಡರಿ, 4 ಸಿಕ್ಸರ್) ಸಮಯೋಚಿತ ಅರ್ಧಶತಕ ಹಾಗೂ ವೇಗಿ ಮುಕೇಶ್ ಕುಮಾರ್ (22ಕ್ಕೆ 4) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಯುವ ಭಾರತ, ಆತಿಥೇಯ ಜಿಂಬಾಬ್ವೆ ಎದುರು ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 42 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಶುಭಮಾನ್ ಗಿಲ್ ಬಳಗ ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಕೈ ವಶಮಾಡಿಕೊಂಡಿದೆ. ಜತೆಗೆ ನಾಯಕನಾಗಿ ಮೊದಲ ಸರಣಿಯಲ್ಲಿ ಶುಭಮಾನ್ ಗಿಲ್ ಯಶಸ್ಸು ಕಂಡಿದ್ದಾರೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಔಪಚಾರಿಕ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ವಿಕೆಟ್ ಕೀಪರ್-ಬ್ಯಾಟರ್ ಸ್ಯಾಮ್ಸನ್ ಹಾಗೂ ಶಿವಂ ದುಬೆ (26 ರನ್, 12 ಎಸೆತ, 2 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ 6 ವಿಕೆಟ್‌ಗೆ 167 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಡಿಯೋನ್ ಮೇಯರ್ಸ್ (34) ಹಾಗೂ ರ್ಜ್ ಅಕ್ರಂ (27) ಹೋರಾಟ ನಡುವೆಯೂ ಮುಕೇಶ್ ಕುಮಾರ್ ಹಾಗೂ ಶಿವಂ ದುಬೆ (25ಕ್ಕೆ 2) ದಾಳಿಗೆ ಕಂಗೆಟ್ಟ ಜಿಂಬಾಬ್ವೆ 18.3 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು.
ಪಂದ್ಯಶ್ರೇಷ್ಠ: ಶಿವಂ ದುಬೆ
ಸರಣಿಶ್ರೇಷ್ಠ: ವಾಷಿಂಗ್ಟನ್ ಸುಂದರ್