ಕ್ರೀಡೆ

'ಗೊಂದಲ, ಹೋರಾಟ, ಪ್ರಯತ್ನ'….: ವಿಚ್ಛೇದನ ನೆನೆದು ಸಾನಿಯಾ ಭಾವುಕ!

ಹೈದರಾಬಾದ್: ಭಾರತದ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್​ ಮಾಜಿ ಆಟಗಾರ ಶೋಯಿಬ್​ ಮಲಿಕ್​ ವೈವಾಹಿಕ ಸಂಬಂಧ ಮುರಿದುಬಿದ್ದಿರುವ ಸಂಗತಿ ಈಗ ಎಲ್ಲರಿಗೂ ತಿಳಿದಿದೆ. ವಿಚ್ಛೇಧನ ಘೋಷಣೆಯಾಗುವ ಮುನ್ನ ಸಾನಿಯಾ ಮತ್ತು ಶೋಯಿಬ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿದರೂ ಸಹ ಇದು ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.

ಕಳೆದ ಹಲವು ತಿಂಗಳುಗಳಿಂದ ಸಾನಿಯಾ ಮತ್ತು ಮಲಿಕ್ ದಾಂಪತ್ಯ ಕುರಿತು ಅನೇಕ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು. ವದಂತಿಗಳ ಬೆನ್ನಲ್ಲೇ ಸನಾ ಜತೆ ಮಲಿಕ್ ಮದುವೆಯಾದ ಸಂಗತಿ ಹೊರಬಿದ್ದಿದ್ದು, ಸಾನಿಯಾ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಸನಾ ಜಾವೇದ್​ಗೆ ಇದು ಎರಡನೇ ವಿವಾಹವಾದರೆ, ಮಲಿಕ್​ಗೆ ಇದು ಮೂರನೇ ಮದುವೆ ಎಂಬುದು ಸದ್ಯ ಮತ್ತೊಂದು ಶಾಕಿಂಗ್​ ವಿಚಾರ.

ಸಾನಿಯಾ ಮತ್ತು ಮಲಿಕ್ ವಿಚ್ಛೇಧನಗೊಂಡು ಇಂದಿಗೆ ಒಂದು ತಿಂಗಳೇ ಕಳೆದಿದ್ದು, ಈ ವಿಚಾರದಿಂದ ತೀವ್ರ ಬೇಸರಕ್ಕೆ ಒಳಗಾಗಿರುವ ಸಾನಿಯಾ, ಆಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಈಗ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ನಾಲ್ಕು ಸಾಲುಗಳ ಸ್ಟೋರಿಯನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಮಿರ್ಜಾ ಬರೆದ ಸಾಲುಗಳೇನು?

“ಕೆಲವು ದಿನಗಳು ಆಕೆ ಒಬ್ಬಳು ಯೋಧ. ಕೆಲವು ದಿನಗಳಲ್ಲಿ ಅವಳು ಒಡೆದ ಮನಸ್ಸು ಹೆಚ್ಚಿನ ದಿನಗಳಲ್ಲಿ, ಹೆಚ್ಚಿನ ದಿನಗಳಲ್ಲಿ ಆಕೆ ಇವರೆಡು ಆಗಿರುತ್ತಾಳೆ ಆದರೆ ಪ್ರತಿದಿನ ಅಲ್ಲಿ ಅವಳಿರುತ್ತಾಳೆ. ಗಟ್ಟಿಯಾಗಿ ನಿಲ್ಲುವುದು, ಹೋರಾಡುವುದು, ಪ್ರಯತ್ನಿಸುವುದು. ಆ ಅವಳು ನಾನೇ ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).