ಕ್ರೀಡೆ

ಮತ್ತೆ ಮಿಂಚಿದ ಸಮಿತ್ ದ್ರಾವಿಡ್

ಬೆಂಗಳೂರು: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್, ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ಆಲ್ರೌಂಡ್ ನಿರ್ವಹಣೆ ಮೂಲಕ ಗಮನ ಸೆಳೆದಿದ್ದಾರೆ.

ಸಮಿತ್ ದ್ರಾವಿಡ್ (166 ರನ್, 131 ಎಸೆತ, 24 ಬೌಂಡರಿ, 35ಕ್ಕೆ 4 ವಿಕೆಟ್) ಆಲ್ರೌಂಡ್ ನಿರ್ವಹಣೆಯಿಂದ ಮಲ್ಯ ಅದಿತಿ ಅಂತಾರಾಷ್ಟ್ರೀಯ ಶಾಲಾ ತಂಡ 14 ವಯೋಮಿತಿ ಬಿಟಿಆರ್ ಶೀಲ್ಡ್ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟದ ಪಂದ್ಯದಲ್ಲಿ 148 ರನ್​ಗಳಿಂದ ವಿದ್ಯಾಶಿಲ್ಪ ಅಕಾಡೆಮಿ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮಲ್ಯ ಅದಿತಿ ಶಾಲಾ ತಂಡ 50 ಓವರ್​ಗಳಲ್ಲಿ 5 ವಿಕೆಟ್​ಗೆ 330 ರನ್​ಗಳಿಸಿದರೆ, ವಿದ್ಯಾಶಿಲ್ಪ ಅಕಾಡೆಮಿ ತಂಡ 38.5 ಓವರ್​ಗಳಲ್ಲಿ 182 ರನ್​ಗಳಿಗೆ ಸರ್ವಪತನ ಕಂಡಿತು. ಶಾಲಾ ಮಟ್ಟದ ಕ್ರಿಕೆಟ್​ನಲ್ಲಿ ಸಮಿತ್ ಕಳೆದ ಎರಡು ತಿಂಗಳ ಅಂತರದಲ್ಲಿ 2 ದ್ವಿಶತಕ ಸಿಡಿಸಿ ಮಿಂಚಿದ್ದರು.