ಕ್ರೀಡೆ

ಸಿರಾಜ್​, ವಿಲ್​ ಜ್ಯಾಕ್ ಕೈಬಿಟ್ಟಿರುವುದಕ್ಕೆ ಬೇಸರವಿದೆ! ಅವರನ್ನು ಮರಳಿ ಪಡೆಯಲು ಸಾಧ್ಯವಾಗಲ್ಲ ಎಂದ ದಿನೇಶ್ ಕಾರ್ತಿಕ್ | RCB

ಬೆಂಗಳೂರು: IPL2025 ಹರಾಜಿನ ವೇಳೆ RCB ಪ್ರಾಂಚೈಸಿ ವೇಗಿ ಮೊಹಮ್ಮದ್​ ಸಿರಾಜ್​ ಮತ್ತು ಸ್ಫೋಟಕ ಬ್ಯಾಟ್ಸ್​ಮನ್​ ವಿಲ್​ ಜ್ಯಾಕ್ಸ್​ ಅವರನ್ನು ಕೈಬಿಟ್ಟಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ RCB ಮೆಂಟರ್​ ದಿನೇಶ್​ ಕಾರ್ತಿಕ್​, ಅವರನ್ನು ಮರಳಿ ಪಡೆಯಲು ಸಾಧ್ಯವಾಗದಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ಹರಾಜು ವೇಳೆ ಸಿರಾಜ್​ ಮತ್ತು ವಿಲ್​ ಜ್ಯಾಕ್​ ಅವರನ್ನು ಖರೀದಿಗೆ ರೈಟ್​ ಟು ಮ್ಯಾಚ್​(RTM) ಬಳಸಿದ್ದಾಗ ಎಲ್ಲರ ಕಣ್ಣು ಹುಬ್ಬೆರುವಂತೆ ಮಾಡಿತು. ಇದೇ ಸಂದರ್ಭವನ್ನು ದಿನೇಶ್​ ಕಾರ್ತಿಕ್​ ವಿವರಿಸಿದ್ದಾರೆ.

''ಮೊಹಮ್ಮದ್​ ಸಿರಾಜ್​ ನಮಗೆ ಅದ್ಭುತ ಬೌಲರ್​, ಅವರನ್ನು ನಮ್ಮ ತಂಡಕ್ಕೆ ಮರಳಿ ಪಡೆಯಲು ತುಂಬಾ ಉತ್ಸುಕರಾಗಿದ್ದೇವು. ಆದರೆ, ಬೇರೆ ಪ್ರಾಂಚೈಸಿ ಅವರ ಮೇಲೆ ದುಬಾರಿ ಬಿಡ್ಡಿಂಗ್​ ಮಾಡಿತು. ಇದರಿಂದ ನಮಗೆ ಸಲ್ಪ ಹಿನ್ನೆಡೆ ಆಗಿತು. ಅಲ್ಲದೆ, ನಾವು ಬೇರೆ ಬೇರೆ ಆಟಗಾರರನ್ನು ಖರೀದಿಗೆ ಮುಂದಾಗಬೇಕಿದೆ. ಆ ಸಂದರ್ಭದಲ್ಲಿ ನಮ್ಮ ಪ್ಯಾಕೇಟ್​ ಮೊನಿ ಅನುಸಾರವಾಗಿ ಬಿಡ್ಡಿಂಗ್​ ಮಾಡಬೇಕಾಗಿ ಬಂತು. ಅವರನ್ನು ಖರೀದಿ ಮಾಡಲೇಬೇಕು ಎಂದು ಪಣತೊಟ್ಟರೆ ಅದು ಬಿಡ್ಡಿಂಗ್​ ಆಗುವುದಿಲ್ಲ. ಹೀಗಾಗಿ, ಅವರನ್ನು ಕೈಬಿಡಬೇಕಾಗಿ ಬಂತು'' ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.

ವಿಲ್​ ಜ್ಯಾಕ್ಸ್​ನ್ನು ಉಳಿಸಿಕೊಳ್ಳದಿರುವುದರ ಬಗ್ಗೆ ಸಮರ್ಥನೆ ಮಾಡಿಕೊಂಡ ಕಾರ್ತಿಕ್​

ಸಿರಾಜ್​ 12.25 ಕೋಟಿಗೆ ಗುಜರಾತ್​ ಟೈಟನ್ಸ್​ಗೆ ಹೋದರೆ, ವಿಲ್ ಜ್ಯಾಕ್ಸ್​ ಐದು ಬಾರಿ ಚಾಂಪಿಯನ್ಸ್​ ಆಗಿರುವ ಮುಂಬೈ ಇಂಡಿಯನ್ಸ್​ ತೆಕ್ಕೆಗೆ 5.25 ಕೋಟಿ ರೂ.ಗೆ ಹೋದರು. ಇದರ ಬಗ್ಗೆ ಮಾತನಾಡಿರುವ ದಿನೇಶ್​, ಜ್ಯಾಕ್ಸ್​ ಅವರನ್ನು ಉಳ್ಳಿಸಿಕೊಳ್ಳಲು ಉತ್ಸುಕರಾಗಿದ್ದೇವು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತಮಗೆ ಸಿಕ್ಕಿರುವ ಲಿವಿಂಗ್​ಸ್ಟೋನ್​ ಮತ್ತು ಟಿಮ್​ ಡೇವಿಡ್​ ಬಗ್ಗೆ ಸಂತೋಷವಾಗಿದೆ ಎಂದಿದ್ದಾರೆ.

''ವಿಲ್​ ಜ್ಯಾಕ್ಸ್​ ಮರಳಿ ಪಡೆಯಲು ಆರ್​ಟಿಎಂ ಕಾರ್ಡ್​ ಬಳಸಬಹುದಾಗಿತ್ತು. ಆದರೆ, ನಮ್ಮ ತಂಡ ನೋಡಿ ಮೊದಲ ಬ್ಯಾಟರ್​ ಆಗಿ ಫಿಲ್​ ಸ್ಟಾಲ್​ ಮತ್ತು ಮಾಧ್ಯಮ ಕ್ರಮಾಂಕದಲ್ಲಿ ಲಿವಿಂಗ್​ಸ್ಟೋನ್​ ಮತ್ತು ಟಿಮ್​ ಡೇವಿಡ್​ ಇದ್ದಾರೆ. ಕೆಲ ಸಂದರ್ಭದಲ್ಲಿ ತಂಡ ಬದಲಾವಣೆ ಮಾಡಬೇಕಾಗುತ್ತದೆ. ಹೀಗಾಗಿ, ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ವಿಲ್​ ಜ್ಯಾಕ್ಸ್​ನ್ನು ಉಳಿಸಿಕೊಳ್ಳದಿರುವುದರ ಬಗ್ಗೆ ದಿನೇಶ್​ ಕಾರ್ತಿಕ್​ ಸಮರ್ಥನೆ ಮಾಡಿಕೊಂಡಿದ್ದಾರೆ. ತಂಡದಿಂದ ಸಿರಾಜ್​ ಮತ್ತು ವಿಲ್​ ಜ್ಯಾಕ್ಸ್ ಹೋಗಿರುವುದರ ಬಗ್ಗೆ ನಮಗೂ ಬೇಸರವಿದೆ. ಅವರು ಒಳ್ಳೆಯ ತಂಡವನ್ನು ಸೇರಿದ್ದಾರೆ ಎಂದಿರುವ ಅವರು ಇಬ್ಬರಿಗೂ ಶುಭ ಹಾರೈಸಿದ್ದಾರೆ, (ಏಜೆನ್ಸೀಸ್​).