ನವದೆಹಲಿ: ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿದ್ದರೆ. ತಮ್ಮ ಪ್ರವಾಸದ ಫೋಟೋಗಳನ್ನು ಆಗಾಗ್ಗೇ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಹಾಗೂ ಯುವರಾಜ್ ಸಿಂಗ್ ಅವರೊಂದಿಗೆ ಗೋವಾ ಪ್ರವಾಸದ ವೇಳೆ ತೆಗೆದಿರುವ ಸೆಲ್ಫಿಯನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಗೋವಾದಲ್ಲಿ ನಮ್ಮ ದಿಲ್ ಚಾಹ್ತಾ ಹೈ' ಕ್ಷಣ ಎಂದು ತೆಂಡೂಲ್ಕರ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಹೆಂಡತಿಯನ್ನು 11 ವರ್ಷ ಮನೆಯಲ್ಲಿ ಕೂಡಿ ಹಾಕಿದ ಲಾಯರ್!
ಸದ್ಯ ಸಚಿನ್ ಹಂಚಿಕೊಂಡಿರುವ ಸೆಲ್ಫಿ ಫೋಟೋಗೆ ಸಾಕಷ್ಟು ಕಮೆಂಟ್ ಬರುತ್ತಿದೆ. ತಮ್ಮ ನೆಚ್ಚಿನ ಕ್ರಿಕೆಟಿಗಳನ್ನು ಒಂದೇ ಫ್ರೇಮ್ನಲ್ಲಿ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಕ್ರಿಕೆಟ್ನ ಹೊರತಾಗಿ ಆತ್ಮೀಯ ಗೆಳಯರು. ಆಗಾಗ್ಗೇ ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡಿದರೂ ತಮಾಷೆಯ ಧಾಟಿಯಲ್ಲಿ ಕಮೆಂಟ್ ಮಾಡುತ್ತಾರೆ. ಇದೀಗ ಇವರಿಬ್ಬರ ಜತೆಗೆ ಕನ್ನಡಿಗ ಅನಿಲ್ ಕುಂಬ್ಳೆ ಒಟ್ಟಾಗಿ ಗೋವಾ ಪ್ರವಾಸ ಹೋಗಿದ್ದು, ಸಖತ್ ಎಂಜಾಯ್ ಮಾಡಿದ್ದಾರೆ.
2001 ರಲ್ಲಿ ಬಿಡುಗಡೆಯಾದ 'ದಿಲ್ ಚಾಹ್ತಾ ಹೈ' ಸಿನಿಮಾದಲ್ಲಿ ಅಮೀರ್ ಖಾನ್, ಸೈಫ್ ಅಲಿ ಖಾನ್, ಅಕ್ಷಯ್ ಖನ್ನಾ, ಪ್ರೀತಿ ಜಿಂಟಾ ಮತ್ತು ಡಿಂಪಲ್ ಕಪಾಡಿಯಾ ಮುಂತಾದವರು ನಟಿಸಿದ್ದಾರೆ. ಇದನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದರು. ಇದೀಗ ಈ ಸಿನಿಮಾದ ಶೀರ್ಷಿಕೆಗೆ ಹೊಂದುವಂತೆ ಸಚಿನ್ ತೆಂಡೂಲ್ಕರ್ ಫೋಟೋ ಹಂಚಿಕೊಂಡಿದ್ದಾರೆ.