ಕ್ರೀಡೆ

ಮಗಳ ಬಾಲ್ಯದ ಚಿತ್ರಕ್ಕೆ ವಿಶೇಷ ಕ್ಯಾಪ್ಶನ್ ನೀಡಿದ ಸಚಿನ್ ತೆಂಡುಲ್ಕರ್

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಪುತ್ರಿ ಸಾರಾ ಜತೆಗಿನ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಹಲ್ಲು ಕಿರಿದು ನಗುತ್ತಿರುವ ಚಿತ್ರಕ್ಕೆ ಸಚಿನ್ ತೆಂಡುಲ್ಕರ್ ವಿಶೇಷ ಅಡಿಬರಹವನ್ನೂ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮಗಳ ಕ್ಯೂಟ್‌ನೆಸ್‌ಗೆ ಫಿದಾ ಆಗಿರುವ ಸಚಿನ್ ತೆಂಡುಲ್ಕರ್, ಸಾರಾಳ ಹೆಸರನ್ನು ಕ್ಯಾಪ್ಶನ್‌ನಲ್ಲಿ ವಿಶೇಷವಾಗಿ ಬಳಸಿದ್ದಾರೆ. ಇತ್ನಾ ‘ಸಾರಾ’ ಕ್ಯೂಟ್‌ನೆಸ್ ಎಂದು ಮುದ್ದಾದ ಮಗಳನ್ನು ಬಣ್ಣಿಸಿರುವ ಸಚಿನ್ ತೆಂಡುಲ್ಕರ್, ‘ಇಷ್ಟೊಂದು ಮುದ್ದಾದ ಹುಡುಗಿಯನ್ನು ನಾನು ಎಲ್ಲಿಂದ ಪಡೆಯಲಿ’ ಎಂದು ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

47 ವರ್ಷದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿಗೆ ಈಗ 20 ವರ್ಷ ವಯಸ್ಸಾಗಿದ್ದು, ಲಂಡನ್‌ನಲ್ಲಿ ವೈದ್ಯಕೀಯ ಪದವಿಯನ್ನೂ ಪಡೆದಿದ್ದಾರೆ. ಈ ಮೂಲಕ ತಾಯಿ ಅಂಜಲಿ ತೆಂಡುಲ್ಕರ್ ಅವರಂತೆ ವೈದ್ಯಕೀಯ ರಂಗದತ್ತ ಆಸಕ್ತಿ ತೋರಿದ್ದಾರೆ.

ಸಚಿನ್ ಪುತ್ರ ಅರ್ಜುನ್ ತೆಂಡುಲ್ಕರ್ ಸದ್ಯ ಯುಎಇಯಲ್ಲಿ ಐಪಿಎಲ್ ಸಿದ್ಧತೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆಟ್ ಬೌಲರ್ ಆಗಿದ್ದಾರೆ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಅಯ ಹೇಳಿದ್ದ ಸಚಿನ್ ತೆಂಡುಲ್ಕರ್ ಈಗ ಮುಂಬೈನ ಮನೆಯಲ್ಲಿ ನಿವೃತ್ತಿ ಜೀವನ ಕಳೆಯುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮನೆಗೆ ವಿಶೇಷ ಅತಿಥಿಯಾಗಿ ಬಂದ ಬೆಕ್ಕಿನ ವಿಡಿಯೋವನ್ನು ಹಂಚಿಕೊಂಡಿದ್ದ ಸಚಿನ್, ಈ ಬೆಕ್ಕಿಗೆ ವಡಾ ಪಾವ್ ಎಂದರೆ ಬಲು ಇಷ್ಟ ಎಂದೂ ಹೇಳಿಕೊಂಡಿದ್ದರು.