ಕ್ರೀಡೆ

ಜೋ ರೂಟ್​ ದಾಖಲೆ ಬಗ್ಗೆ ಮೌನ ಮುರಿದ ಕ್ರಿಕೆಟ್​ ದೇವರು; ಹೇಳಿದ್ದೇನು.? | Sachin Tendulkar

Sachin Tendulkar: ಟೆಸ್ಟ್​​ ಕ್ರಿಕೆಟ್​​ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಜೋ ರೂಟ್​​, ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ಭುತ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಿದ್ದು, ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್​​ ದೇವರು ತೆಂಡುಲ್ಕರ್​, ಈ ದಾಖಲೆಯನ್ನು ಅವರು ಮುರಿಯಬಹುದು ಎಂದು ತಿಳಿಸಿದ್ದಾರೆ.

ಆಸ್ಕ್ ಮಿ ಎನಿಥಿಂಗ್ (ಎಎಂಎ) ಸಂದಶರ್ನದಲ್ಲಿ ಸಚಿನ್​ಗೆ, ಜೋ ರೂಟ್ ಬಗ್ಗೆ ನಿಮ್ಮ ಮೊದಲ ಅನಿಸಿಕೆ ಏನು? ಎನ್ನುವ ಪ್ರಶ್ನೆ ಕೇಳಲಾಯಿತು, ಈ ಪ್ರಶ್ನೆಗೆ ಉತ್ತರಿಸಿದ ಸಚಿನ್​​, 13000 ರನ್‌ಗಳನ್ನು ದಾಟಿರುವುದು ಗಮನಾರ್ಹ ಸಾಧನೆಯಾಗಿದ್ದು, ಅವರು ಫಿಟ್​​ ಆಗಿರುವುದರಿಂದ​ ನನ್ನ ದಾಖಲೆಯನ್ನು ಮುರಿಯಬಹುದು ಎಂದರು. 2012 ರಲ್ಲಿ ನಾಗ್ಪುರದಲ್ಲಿ ಅವರ ಚೊಚ್ಚಲ ಟೆಸ್ಟ್ ಪಂದ್ಯದ ಸಮಯದಲ್ಲಿ ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನನ್ನ ತಂಡದ ಇತರೆ ಆಟಗಾರರಿಗೆ ಅವರು ಇಂಗ್ಲೆಂಡ್‌ನ ಭವಿಷ್ಯದ ನಾಯಕನಾಗುತ್ತಾರೆ ಎಂದು ಹೇಳಿದ್ದೆ ಎಂದರು. ರೂಟ್​ ವಿಕೆಟ್​​ ಕಾಯ್ದುಕೊಂಡು ಆಡುವ ರೀತಿ, ಅವರು ಸ್ಟ್ರೈಕ್ ರೊಟೆಟ್​ ಗೆ ಪ್ರಭಾವಿತನಾಗಿದ್ದೆ ಎಂದು ತಿಳಿಸಿದರು.200 ಟೆಸ್ಟ್‌ಗಳಿಂದ 15,921 ರನ್ ಗಳಿಸಿರುವ ಸಚಿನ್​ ದಾಖಲೆ ತಲುಪಲು ರೂಟ್​​ ಕೇವಲ 2378 ರನ್‌ ಗಳಿಸಬೇಕಿದೆ.

ಪೂಜಾರ ನಿವೃತ್ತಿಯ ಬಗ್ಗೆ ಕ್ರಿಕೆಟ್​ ದೇವರು ಹೇಳಿದ್ದೇನು.?

ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ ಭಾರತದ ಹಿರಿಯ ಆಟಗಾರ ಚೇತೇಶ್ವರ ಪೂಜಾರ ಅವರ ನಿವೃತ್ತಿ ಬಗ್ಗೆ ತಮ್ಮ ಎಕ್ಸ್​​ ಖಾತೆಯ ಮೂಲಕ ಪೋಸ್ಟ್​ ಹಂಚಿಕೊಂಡು ಶುಭಾಶಯ ತಿಳಿಸಿರುವ ಸಚಿನ್, ಪೂಜಾರ ತಂಡದ ಆಧಾರಸ್ತಂಭವಾಗಿದ್ದರು ಎಂದು ಕರೆದಿದ್ದಾರೆ. ಅವರು 15 ವರ್ಷಗಳ ಕಾಲ ಕ್ರಿಕೆಟ್​​ಗೆ ನೀಡಿದ ಕೊಡುಗೆ ಸ್ಮರಣೀಯ ಎಂದರು.

ಪೂಜಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುತಿದ್ದರೆ ಇಡೀ ತಂಡ ಅವರ ಆಟವನ್ನು ಧೈರ್ಯದಿಂದ ನೋಡುತಿತ್ತು, ಆಟದ ಬಗೆಗಿನ ಅವರ ತಂತ್ರಗಳು, ತಾಳ್ಮೆ ಮತ್ತು ಶಾಂತತೆಯು ತಂಡಕ್ಕೆ ಆಧಾರಸ್ತಂಭವಾಗಿತ್ತು ಎಂದಿದ್ದಾರೆ.(ಏಜೆನ್ಸೀಸ್)