2 ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನು ಆಳಿದ ದಿಗ್ಗಜ ಸಚಿನ್ ತೆಂಡುಲ್ಕರ್ ಶುಕ್ರವಾರ 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಈಗಲೂ ಅಚ್ಚಳಿಯದೆ ಉಳಿದಿರುವ ಸಚಿನ್, ಕರೊನಾ ಹಾವಳಿಯ ನಡುವೆ ಈ ಬಾರಿ ಜನ್ಮದಿನದ ಸಂಭ್ರಮವನ್ನು ಆಚರಿಸುವುದಿಲ್ಲ ಎಂದಿದ್ದಾರೆ. ಇದರ ನಡುವೆಯೂ ಅವರ ಹೆಸರಿನಲ್ಲಿರುವ 47 ಪ್ರಮುಖ ದಾಖಲೆಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.
- ಭಾರತರತ್ನ ಪ್ರಶಸ್ತಿ ಪುರಸ್ಕೃತ ಏಕೈಕ ಕ್ರೀಡಾಪಟು. ಖೇಲ್ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ.
- ಟೆಸ್ಟ್ (15,921) ಮತ್ತು ಏಕದಿನ (18,426) ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್.
- ಅತಿ ಹೆಚ್ಚು ಟೆಸ್ಟ್ (200) ಮತ್ತು ಏಕದಿನ (463) ಪಂದ್ಯಗಳನ್ನು ಆಡಿದ ಸಾಧನೆ.
- ಟೆಸ್ಟ್ (51) ಮತ್ತು ಏಕದಿನ (49) ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳು.
- ಅತಿ ಹೆಚ್ಚು ಮೈದಾನಗಳಲ್ಲಿ ಟೆಸ್ಟ್ (59) ಮತ್ತು ಏಕದಿನ (96) ಪಂದ್ಯ ಆಡಿದ ಸಾಧನೆ.
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ (34,347) ಗಳಿಕೆ.
- ಸತತವಾಗಿ ಅತಿಹೆಚ್ಚು ಏಕದಿನ (185), ಟೆಸ್ಟ್ (85) ಪಂದ್ಯ ಆಡಿದ ದಾಖಲೆ.
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೌಂಡರಿ (4,074) ಸಿಡಿಸಿದ ಸಾಧನೆ.
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ (72).
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕದ ಸಾಧನೆ.
- ಟೆಸ್ಟ್ (5) ಮತ್ತು ಏಕದಿನ (15) ಕ್ರಿಕೆಟ್ನಲ್ಲಿ ಗರಿಷ್ಠ ಸರಣಿಶ್ರೇಷ್ಠ ಗರಿ.
- 4 ಬಾರಿ ಒಂದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2 ಸಾವಿರಕ್ಕಿಂತ ಹೆಚ್ಚು ರನ್.
- ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್.
- ಒಟ್ಟಾರೆಯಾಗಿ ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 6,707 ರನ್ ಗಳಿಕೆ.
- ಒಂದೇ ದೇಶದ ವಿರುದ್ಧ (ಆಸ್ಟ್ರೇಲಿಯಾ) ಅತಿ ಹೆಚ್ಚು 20 ಶತಕ ಸಿಡಿಸಿದ ಸಾಧನೆ.
- ಭಾರತ ಪರ ಟೆಸ್ಟ್ ಮತ್ತು ಏಕದಿನ (16 ವರ್ಷ) ಪಂದ್ಯ ಆಡಿದ ಅತಿ ಕಿರಿಯ ಆಟಗಾರ.
- ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ (8,705).
- ಏಕದಿನದಲ್ಲಿ ಆರಂಭಿಕನಾಗಿ ಅತಿ ಹೆಚ್ಚು (15,310) ರನ್, ಶತಕ (45), ಅರ್ಧಶತಕ (75).
- ಟೆಸ್ಟ್ನಲ್ಲಿ ಒಂದೇ (4) ಕ್ರಮಾಂಕದಲ್ಲಿ ಅತಿ ಹೆಚ್ಚು (13,482) ರನ್, ಶತಕ (44), ಅರ್ಧಶತಕ (58).
- 20ನೇ ವಯಸ್ಸಿಗೆ ಕಾಲಿಡುವ ಮುನ್ನವೇ ಟೆಸ್ಟ್ ಕ್ರಿಕೆಟ್ನಲ್ಲಿ 5 ಶತಕ ಸಿಡಿಸಿದ ಸಾಧನೆ.
- 1990ರಿಂದ 1998ರ ನಡುವೆ ಸತತವಾಗಿ 239 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕೆ.
- ಟೆಸ್ಟ್ನಲ್ಲಿ ಅತಿ ಹೆಚ್ಚು 50 ಪ್ಲಸ್ (51 ಶತಕ+68 ಅರ್ಧಶತಕ=119) ಗಳಿಕೆ.
- ಟೆಸ್ಟ್ನಲ್ಲಿ ಔಟ್ ಆಗುವ ನಡುವೆ ಗರಿಷ್ಠ 497 ರನ್ (241*, 60*, 194*, 2) ಗಳಿಸಿದ ಸಾಧನೆ.
- ಏಕದಿನದಲ್ಲಿ 3 ಬಾರಿ 175 ಪ್ಲಸ್ ರನ್ ಇನಿಂಗ್ಸ್.
- ರಣಜಿ, ಇರಾನಿ, ದುಲೀಪ್ ಟ್ರೋಫಿ ದೇಶೀಯ ಟೂರ್ನಿಗಳಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಆಟಗಾರ.
- ಭಾರತ ಪರ ಅತಿ ಹೆಚ್ಚು ಟೆಸ್ಟ್ (72), ಏಕದಿನ (234) ಗೆಲುವು.
- ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ಹೊರತಾಗಿ ಟೆಸ್ಟ್ ಆಡುವ ಉಳಿದ 7 ರಾಷ್ಟ್ರಗಳ ವಿರುದ್ಧ ಕನಿಷ್ಠ ಒಂದು ಸಾವಿರ ರನ್.
- ಟೆಸ್ಟ್ನಲ್ಲಿ ಪೂರ್ಣಗೊಂಡ ಇನಿಂಗ್ಸ್ಗಳ ಪೈಕಿ 53 ಬಾರಿ ತಂಡದ ಗರಿಷ್ಠ ಸ್ಕೋರರ್.
- ಟೆಸ್ಟ್ ಕ್ರಿಕೆಟ್ ಆಡುವ ಎಲ್ಲ 9 ದೇಶಗಳ ವಿರುದ್ಧ ಕನಿಷ್ಠ 2 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್ಮನ್.
- ಗಂಗೂಲಿ ಜತೆ ಗರಿಷ್ಠ ರನ್ (6,609), ಶತಕದ (21) ಆರಂಭಿಕ ಜತೆಯಾಟ.
- ಏಕದಿನದಲ್ಲಿ ಶ್ರೀಲಂಕಾ (3,113) ಮತ್ತು ಆಸ್ಟ್ರೇಲಿಯಾ ವಿರುದ್ಧ (3,077) 3 ಸಾವಿರಕ್ಕಿಂತ ಹೆಚ್ಚು ರನ್.
- ಕ್ಯಾಲೆಂಡರ್ ವರ್ಷ (1998) ಒಂದರಲ್ಲಿ ಅತಿ ಹೆಚ್ಚು ಏಕದಿನ ಶತಕ (9).
- ಗರಿಷ್ಠ 6 ವಿಶ್ವಕಪ್ಗಳಲ್ಲಿ (1992-2011) ಆಡಿದ ದಾಖಲೆಯಲ್ಲಿ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಜತೆ ಸಮಬಲ.
- ಏಕದಿನ ವಿಶ್ವಕಪ್ನಲ್ಲಿ ಗರಿಷ್ಠ ರನ್ (2,278), ಶತಕ (6), ಅರ್ಧಶತಕ (15).
- ಒಂದೇ ವಿಶ್ವಕಪ್ನಲ್ಲಿ (2003) ಅತಿ ಹೆಚ್ಚು 673 ರನ್.
- ಟೆಸ್ಟ್ನಲ್ಲಿ 20 ಬಾರಿ 150 ಪ್ಲಸ್ ಇನಿಂಗ್ಸ್.
- ಏಕದಿನದಲ್ಲಿ 15 ಸಾವಿರಕ್ಕಿಂತ ಹೆಚ್ಚು ರನ್ ಮತ್ತು 150 ವಿಕೆಟ್ ಗಳಿಸಿದ ಏಕೈಕ ಕ್ರಿಕೆಟಿಗ.
- ದ್ರಾವಿಡ್ ಜತೆ 2ನೇ ವಿಕೆಟ್ಗೆ 331 ರನ್ ಸೇರಿಸಿರುವುದು ಏಕದಿನದಲ್ಲಿ ಯಾವುದೇ ವಿಕೆಟ್ಗೆ ಗರಿಷ್ಠ ಜತೆಯಾಟ.
- ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ 50 ಸಾವಿರಕ್ಕಿಂತ ಹೆಚ್ಚು ರನ್ ಸಿಡಿಸಿದ ಏಕೈಕ ಭಾರತೀಯ.
- ಏಕದಿನದಲ್ಲಿ ಅತಿ ಹೆಚ್ಚು 50 ಪ್ಲಸ್ (49 ಶತಕ+ 96 ಅರ್ಧಶತಕ) ಇನಿಂಗ್ಸ್.
- ಟೆಸ್ಟ್ ಕ್ರಿಕೆಟ್ನಲ್ಲಿ 12, 13, 14, 15 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್.
- ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 10 ವರ್ಷಗಳ ಕಾಲ ಅಗ್ರ 10ರಲ್ಲಿ ಸ್ಥಾನ.
- ಏಕದಿನದಲ್ಲಿ 21 ಆಟಗಾರರೊಂದಿಗೆ 99 ಬಾರಿ 100 ಪ್ಲಸ್ ರನ್ ಜತೆಯಾಟದಲ್ಲಿ ಭಾಗಿ.
- 129 ಬಾರಿ ಭಾರತ ಪರ ಗರಿಷ್ಠ ಸ್ಕೋರರ್ ಎನಿಸಿದ್ದು ಜಾಗತಿಕ ಏಕದಿನ ಕ್ರಿಕೆಟ್ನಲ್ಲಿ ದಾಖಲೆ.
- ಗೆದ್ದ ಏಕದಿನ ಪಂದ್ಯದಲ್ಲಿ (234) ಅತಿ ಹೆಚ್ಚು 11,157 ರನ್, 33 ಶತಕ ಬಾರಿಸಿದ ಹೆಗ್ಗಳಿಕೆ.
- ಟೆಸ್ಟ್ನಲ್ಲಿ 593 (108 ಸಹ, 485 ಎದುರಾಳಿ), ಏಕದಿನದಲ್ಲಿ 866 (123 ಸಹ, 743 ಎದುರಾಳಿ) ಆಟಗಾರರೊಂದಿಗೆ ಆಟ.
- ವಿವಿಧ ಕ್ರಿಕೆಟ್ ಪ್ರಕಾರಗಳಲ್ಲಿ (ಟೆಸ್ಟ್, ಏಕದಿನ, ಟಿ20, ಐಪಿಎಲ್, ಚಾಂಪಿಯನ್ಸ್ ಲೀಗ್ ಟಿ20, ವಿಶ್ವಕಪ್, ರಣಜಿ ಟ್ರೋಫಿ) ಗೆಲುವಿನೊಂದಿಗೆ ವಿದಾಯ.