ಕ್ರೀಡೆ

ಅಂತಾರಾಷ್ಟ್ರೀಯ ಆಟಕ್ಕೆ ದಿಢೀರ್‌ ನಿವೃತ್ತಿ ಘೋಷಣೆ ಮಾಡಿದ ಅತ್ಯುತ್ತಮ ಆಲ್‌ರೌಂಡರ್ ಪರೇರಾ!

ಕೊಲಂಬೋ: ಶ್ರೀಲಂಕಾ ಕಂಡ ಅತ್ಯುತ್ತಮ ಕ್ರಿಕೆಟಿಗ, ಅಂತಾರಾಷ್ಟ್ರೀಯ ಖ್ಯಾತಿಯ ತಿಸಾರ್‌ ಪರೇರಾ ಅವರು ಕ್ರಿಕೆಟ್‌ನ ಅಂತಾರಾಷ್ಟ್ರೀಯ ಆಟಕ್ಕೆ ದಿಢೀರ್‌ ನಿವೃತ್ತ ಘೋಷಿಸಿದ್ದಾರೆ.

32 ವರ್ಷದ ತಿಸಾರ ಪೆರೇರಾ ಅವರ ನಿವೃತ್ತಿಯ ಕುರಿತು ಶ್ರೀಲಂಕಾ ಕ್ರಿಕೆಟ್ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ. ತಾವು ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಪಾಲ್ಗೊಳ್ಳುವುದಾಗಿ ಪರೇರಾ ಖಚಿತಪಡಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಾಂಗ್ಲಾದೇಶ ವಿರುದ್ದ ಸೀಮಿತ ಓವರ್‌ಗಳ ಸರಣಿಯಲ್ಲಿ ಯುವ ಕ್ರಿಕೆಟಿಗರಿಗೆ ಮಣೆಹಾಕುವುದನ್ನು ಮನಗಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಇವರು ತೀರ್ಮಾನಿಸಿರುವುದಾಗಿ ಹೇಳಲಾಗಿದೆ.

2009 ಡಿಸೆಂಬರ್ 24ರಂದು ನಡೆದಿದ್ದ ಭಾರತ ಹಾಗೂ ಶ್ರೀಲಂಕಾ ನಡುವಣ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 166 ಪಂದ್ಯಗಳನ್ನಾಡಿರುವ ಇವರು 2338ರನ್ ಗಳಿಸಿದ್ದಾರೆ. ಇದರಲ್ಲಿ 10 ಅರ್ಧಶತಕ ಹಾಗೂ 1 ಶತಕ ಸೇರಿವೆ, ಇನ್ನು ಬೌಲಿಂಗ್‌ನಲ್ಲೂ ಭರ್ಜರಿ ಪ್ರದರ್ಶನ ತೋರಿರುವ ಪೆರೇರಾ 175 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.