ಕ್ರೀಡೆ

ಏಷ್ಯನ್ ಗೇಮ್ಸ್ ಪ್ರಿಯರಿಗೆ ಕಹಿ ಸುದ್ದಿ: ಚೀನಾದಲ್ಲಿ ನಡೆಯಬೇಕಿದ್ದ ಆಟ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವವದೆಹಲಿ:  ಚೀನಾದ ಹ್ಯಾಂಗ್‌ ಝೂನಲ್ಲಿ ಬರುವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ  19ನೇ ಏಷ್ಯನ್ ಗೇಮ್ಸ್ ಅನ್ನು ಚೀನಾ ಸರ್ಕಾರ ಮೂದೂಡಿದೆ. ಸದ್ಯ ಯಾವುದೇ ದಿನಾಂಕವನ್ನು ಅದು ಪ್ರಕಟಿಸಲಿಲ್ಲ.

ಒಲಿಂಪಿಕ್ಸ್‌ ಕೌನ್ಸಿಲ್ ಆಫ್ ಏಷ್ಯಾ ಈ ಮಾಹಿತಿ ನೀಡಿದ್ದು ಅದನ್ನು ಚೀನಾ ಮಾಧ್ಯಮ ವರದಿ ಮಾಡಿದೆ. ಕ್ರೀಡೆಯನ್ನು ಮುಂದೂಡಿರುವುದಕ್ಕೆ ನಿರ್ದಿಷ್ಟ ಕಾರಣವನ್ನು ಚೀನಾ ಕೊಟ್ಟಿಲ್ಲ. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಈ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ,

ಚೀನಾದ ಹಲವು ನಗರಗಳು ಕೋವಿಡ್‌ ಹಿನ್ನೆಲೆಯಲ್ಲಿ ಇದಾಗಲೇ ಲಾಕ್‌ಡೌನ್‌ನಲ್ಲಿವೆ. ಕೋವಿಡ್‌ ಪ್ರಕರಣ ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೆ.10ರಿಂದ 25ರವರೆಗೆ ಈ ಕ್ರೀಡೆ ನಡೆಯಬೇಕಿತ್ತು.