ಕ್ರೀಡೆ

ಬ್ರಿಟಿಷ್​ ಪಾಪ್​ ಗಾಯಕಿ ಜತೆ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್​ ಪಾಂಡ್ಯ ಬ್ರೇಕಪ್!: ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ

ಮುಂಬೈ: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯ ಬಾಲಿವುಡ್​ ನಟಿ, ರೂಪದರ್ಶಿ ನತಾಶಾ ಸ್ಟಾಂಕೋವಿಕ್​ ಜತೆಗಿನ ದಾಂಪತ್ಯದಿಂದ ದೂರವಾದ ಬಳಿಕ ಭಾರತ ಮೂಲದ ಬ್ರಿಟಿಷ್​ ಪಾಪ್​ ಗಾಯಕಿ ಜಾಸ್ಮಿನ್​ ವಾಲಿಯಾ ಜತೆಗೆ ಸುತ್ತಾಡುತ್ತಿದ್ದರು. ಇವರಿಬ್ಬರು ಗ್ರೀಸ್​ನಲ್ಲಿ ಡೇಟಿಂಗ್​ ಕೂಡ ನಡೆಸಿದ್ದರು. ಹಾಲಿ ವರ್ಷ ಚಾಂಪಿಯನ್ಸ್​ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಜಾಸ್ಮಿನ್​ ದುಬೈ ಸ್ಟೇಡಿಯಂಗೆ ಹಾಜರಾಗಿ ಹಾರ್ದಿಕ್​ ಪಾಂಡ್ಯರನ್ನು ಹುರಿದುಂಬಿಸಿದ್ದರು. ನಂತರದಲ್ಲಿ ಐಪಿಎಲ್​ ಸಮಯದಲ್ಲೂ ಮುಂಬೈ ಇಂಡಿಯನ್ಸ್​ ತಂಡದ ಕೆಲ ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಹಾಜರಿದ್ದರು.

ಆದರೆ ಇದೀಗ ಹಾರ್ದಿಕ್​-ಜಾಸ್ಮಿನ್​ ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಾರ್ದಿಕ್​ ಮತ್ತು ಜಾಸ್ಮಿನ್​ ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರರನ್ನು "ಅನ್​ಫಾಲೋ' ಮಾಡಿರುವುದೇ ಈ ಸುದ್ದಿ ಹರಡಲು ಕಾರಣವಾಗಿದೆ. ಇದರಿಂದ ವಿಚ್ಛೇದನದ ಬಳಿಕ 2ನೇ ಬಾರಿ ಹಾರ್ದಿಕ್​ ಹೃದಯಭಗ್ನಗೊಂಡಿತೇ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.