ಪ್ಯಾರೀಸ್: ಫ್ರಾನ್ಸ್ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ಏರ್ಪಿಸ್ತೂಲ್ ಎಸ್ಎಚ್1 10 ಮೀಟರ್ ವಿಭಾಗದಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ ಶನಿವಾರ ಕಂಚಿನ ಪದಕ ಜಯಸಿದ್ದಾರೆ. ಆ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಂದು ಚಿನ್ನ ಸೇರಿ ನಾಲ್ಕು ಪದಕಗಳು ಲಭಿಸಿದೆ.
ಇದನ್ನೂ ಓದಿ: ದೆಹಲಿ: ಚೀಲದಲ್ಲಿ 6 ದಿನದ ಹೆಣ್ಣು ಮಗುವಿನ ಮೃತದೇಹ ಪತ್ತೆ; ತಾಯಿ ಬಂಧನ
ಅಂತಿಮ ಸುತ್ತಿನ ಆಯ್ಕೆಗೆ ನಡೆದ ಪಂದ್ಯದಲ್ಲಿ ರುಬಿನಾ ಅವರು 8 ಜನರಲ್ಲಿ ಏಳನೆಯವರಾಗಿದ್ದಾರೆ. ವಿಶ್ವ ದಾಖಲೆ ಹೊಂದಿರುವವರನ್ನೂ ಒಳಗೊಂಡ ಜಗತ್ತಿನ ಸರ್ವಶ್ರೇಷ್ಠ ಶೂಟರ್ಗಳೊಂದಿಗೆ ನಿಕಟ ಪೈಪೋಟಿ ನೀಡಿದ 25 ವರ್ಷದ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಇರಾಕ್ನ ಜವನ್ಮರ್ಡಿ ಸರೆ ಅವರು ಸತತ ಮೂರನೇ ಒಲಿಂಪಿಕ್ಸ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಅವರು 236.8 ಅಂಕಗಳನ್ನು ಗಳಿಸಿದರು. ವಿಶ್ವ ದಾಖಲೆ ಹೊಂದಿರುವ ಟರ್ಕಿಯ ಆಯ್ಸೆಲ್ ಅವರು 231.1 ಅಂಕಳೊಂದಿಗೆ ಬೆಳ್ಳಿ ಪದಕ ಜಯಿಸಿದರು. ಮಧ್ಯಪ್ರದೇಶದ ಜಬಲ್ಪುರದ ರುಬಿನಾ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಮೊದಲ ಪಿಸ್ತೂಲ್ ಶೂಟರ್ ಎನಿಸಿಕೊಂಡಿದ್ದಾರೆ. ಶೂಟಿಂಗ್‌ನಲ್ಲಿ ಭಾರತಕ್ಕೆ ಸಿಕ್ಕ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ.
ಇದಕ್ಕೂ ಮೊದಲು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಎರಡನೇ ದಿನ, ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದರೆ, ಇದೇ ಈವೆಂಟ್ನಲ್ಲಿ ಮತ್ತೊರ್ವ ಭಾರತೀಯ ಸ್ಪರ್ಧಿ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ನಂತರ, ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ಉಳಿದಂತೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದುಕೊಟ್ಟಿದ್ದರು.