ದುಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಖಜಾನೆಗೆ ಸೋಮವಾರ ಬರೋಬ್ಬರಿ 12,715 ಕೋಟಿ ರೂಪಾಯಿ ಮೊತ್ತ ಹರಿದುಬಂದಿದೆ. ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳಾಗಿ ಲಖನೌ ಮತ್ತು ಅಹಮದಾಬಾದ್ ಫ್ರಾಂಚೈಸಿಗಳು ಸೇರ್ಪಡೆಗೊಂಡಿವೆ. ಕೋಲ್ಕತ ಮೂಲದ ಬಿಲಿಯಾದೀಶ ಉದ್ಯಮಿ ಸಂಜೀವ್ ಗೋಯೆಂಕಾ ಮಾಲೀಕತ್ವದ ಆರ್‌ಪಿ-ಎಸ್‌ಜಿ ಗ್ರೂಪ್ 7,090 ಕೋಟಿ ರೂಪಾಯಿ ಮೊತ್ತಕ್ಕೆ ಲಖನೌ ತಂಡವನ್ನು ಖರೀದಿಸಿದ್ದರೆ, ಅಂತಾರಾಷ್ಟ್ರೀಯ ನಿವ್ವಳ ಹೂಡಿಕೆಯ ಸಿವಿಸಿ ಕ್ಯಾಪಿಟಲ್ ಕಂಪನಿ 5,625 ಕೋಟಿ ರೂಪಾಯಿಗೆ ಅಹಮದಾಬಾದ್ ತಂಡವನ್ನು ಕೊಂಡುಕೊಂಡಿದೆ.
ಹೊಸ ತಂಡವೊಂದು 10 ಸಾವಿರ ಕೋಟಿ ರೂಪಾಯಿ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿತ್ತು. ಆದರೆ ಒಂದು ತಂಡದ ಬಿಡ್ ಮೊತ್ತ 7 ಸಾವಿರ ಕೋಟಿ ರೂ. ದಾಟುವಷ್ಟರಲ್ಲಿ ನಿಂತುಬಿಟ್ಟರೆ, ಮತ್ತೊಂದು ತಂಡದ ಬಿಡ್ 5,500 ಕೋಟಿ ರೂ. ದಾಟಲಷ್ಟೇ ಶಕ್ತವಾಯಿತು. ತಂಡಗಳ ಮೂಲಬೆಲೆ 2 ಸಾವಿರ ಕೋಟಿ ರೂ. ಆಗಿತ್ತು. ಒಟ್ಟು 22 ಕಂಪನಿಗಳು 10 ಲಕ್ಷ ರೂ. ಮೌಲ್ಯದ ಬಿಡ್ ದಾಖಲೆ ಪತ್ರ ಖರೀದಿಸಿದ್ದವು. ಈ ಪೈಕಿ 9 ಕಂಪನಿಗಳಷ್ಟೇ ಅಂತಿಮವಾಗಿ ಬಿಡ್‌ನಲ್ಲಿ ಪಾಲ್ಗೊಂಡಿದ್ದವು.
ಸೋಮವಾರ ದುಬೈನಲ್ಲಿ ಸುಮಾರು 6 ಗಂಟೆಗಳ ಕಾಲ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು. ಸಂಜೆಯ ವೇಳೆಗೆ ಬಿಸಿಸಿಐ ಅಧಿಕೃತವಾಗಿ ಬಿಡ್ ಗೆದ್ದವರ ಹೆಸರು ಪ್ರಕಟಿಸಿತು. ಆರ್‌ಪಿ-ಎಸ್‌ಜಿ ಗ್ರೂಪ್ ಬಿಸಿಸಿಐ ನಿಗದಿಪಡಿಸಿದ್ದ ತಂಡದ ಮೂಲಬೆಲೆಗಿಂತ ಶೇ. 250ಕ್ಕೂ ಅಧಿಕ ಮೊತ್ತದ ಬಿಡ್ ಸಲ್ಲಿಸಿದರೆ, ಸಿವಿಸಿ ಕ್ಯಾಪಿಟಲ್ಸ್ ಕಂಪನಿ ಶೇ. 160ಕ್ಕೂ ಅಧಿಕ ಮೊತ್ತದ ಬಿಡ್ ಸಲ್ಲಿಸಿತು. ಸೀಲ್ ಮಾಡಿದ ಕವರ್‌ನಲ್ಲಿ ಸಲ್ಲಿಸಲಾಗಿದ್ದ ಬಿಡ್‌ಗಳನ್ನು ತೆರೆದು ಬಿಸಿಸಿಐ, ತಾಂತ್ರಿಕ ಮೌಲ್ಯಮಾಪನ ನಡೆಸಿತ್ತು. ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಸದಸ್ಯರು ಈ ಪ್ರಕ್ರಿಯೆಯ ಮೇಲ್ವಿಚಾರಣೆ ವಹಿಸಿದ್ದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ, ಖಜಾಂಚಿ ಅರುಣ್ ಧುಮಾಲ್, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಈ ಪೈಕಿ ಪ್ರಮುಖರಾಗಿದ್ದರು.
ಕಟಕ್, ಇಂದೋರ್‌ಗೆ ನಿರಾಸೆ
ಐಪಿಎಲ್‌ಗೆ ಸೇರ್ಪಡೆಗೊಳ್ಳುವ 2 ಹೊಸ ತಂಡಗಳು ಕಟಕ್, ಧರ್ಮಶಾಲಾ, ಗುವಾಹಟಿ ಮತ್ತು ಇಂದೋರ್‌ನಿಂದಲೂ ಸೇರ್ಪಡೆಗೊಳ್ಳಲು ಅವಕಾಶವಿತ್ತು. ಬಿಡ್ ಮಾಡುವವವರು ಒಂದಕ್ಕಿಂತ ಹೆಚ್ಚು ನಗರಗಳನ್ನು ಗುರುತಿಸಲು ಅವಕಾಶವಿದ್ದರೂ, ಅಂತಿಮವಾಗಿ ಒಂದು ನಗರದ ತಂಡದ ಒಡೆತನವನ್ನಷ್ಟೇ ಪಡೆಯಬಹುದಾಗಿತ್ತು. ಆರ್‌ಪಿ-ಎಸ್‌ಜಿ ಕಂಪನಿ ಇಂದೋರ್ ನಗರದ ತಂಡಕ್ಕೂ ಬಿಡ್ ಸಲ್ಲಿಸಿತ್ತು ಎನ್ನಲಾಗಿದೆ.
ಮುಂದಿನ ವರ್ಷದಿಂದ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳು ಆಡಲಿವೆ. ಈ ಮುನ್ನ 2011ರ ಐಪಿಎಲ್‌ನಲ್ಲೂ 10 ತಂಡಗಳು ಆಡಿದ್ದವು. ಎರಡು ಹೊಸ ತಂಡಗಳ ಸೇರ್ಪಡೆಯಿಂದ ಮುಂದಿನ ವರ್ಷದ ಐಪಿಎಲ್‌ನಲ್ಲಿ ಒಟ್ಟು ಪಂದ್ಯಗಳ ಸಂಖ್ಯೆ 74ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಎರಡು ಹೊಸ ತಂಡಗಳ ಸೇರ್ಪಡೆ ಹೊರತಾಗಿಯೂ ಮುಂದಿನ ಐಪಿಎಲ್‌ನಲ್ಲೂ ಎಲ್ಲ ತಂಡಗಳೂ ಲೀಗ್ ಹಂತದಲ್ಲಿ 14 ಪಂದ್ಯಗಳನ್ನೇ ಆಡಲಿದೆ ಎನ್ನಲಾಗಿದೆ.
ಮೊತ್ತ ಪಾವತಿ ಹೇಗೆ?
ಎರಡು ಹೊಸ ಐಪಿಎಲ್ ತಂಡಗಳ ಮಾಲೀಕರು ಬಿಡ್ ಮಾಡಿರುವ ಮೊತ್ತವನ್ನು ಬಿಸಿಸಿಐಗೆ ಒಮ್ಮೆಲೆ ಪಾವತಿಸಬೇಕಾಗಿಲ್ಲ. ಮುಂದಿನ 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಈ ಮೊತ್ತವನ್ನು ಬಿಸಿಸಿಐಗೆ ಪಾವತಿಸಬೇಕಾಗಿದೆ. ಈ ಹಣ ಪಾವತಿಯ ಖಚಿತತೆಗಾಗಿಯೇ ಬಿಸಿಸಿಐ, ಬಿಡ್ ಸಲ್ಲಿಸುವ ಕಂಪನಿ ವಾರ್ಷಿಕ 3 ಸಾವಿರ ಕೋಟಿ ರೂ. ವಹಿವಾಟು ಹೊಂದಿರಬೇಕು ಎಂಬ ಷರತ್ತು ವಿಧಿಸಿತ್ತು.
ಗೋಯೆಂಕಾ ಐಪಿಎಲ್ ನಂಟು ಹೊಸದಲ್ಲ
ಉದ್ಯಮಿ ಸಂಜೀವ್ ಗೋಯೆಂಕಾ ಅವರಿಗೆ ಐಪಿಎಲ್ ನಂಟು ಹೊಸದಲ್ಲ. ಅವರು ಈ ಮುನ್ನ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಮಾಲೀಕರಾಗಿದ್ದರು. ಈ ತಂಡ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 2 ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಿಸಲ್ಪಟ್ಟಿದ್ದ ಸಮಯದಲ್ಲಿ 2016-17ರ ಆವೃತ್ತಿಗಳಲ್ಲಿ ಆಡಿತ್ತು. ಗೋಯೆಂಕಾ ಅವರು ಐಎಸ್‌ಎಲ್ ುಟ್‌ಬಾಲ್ ಟೂರ್ನಿಯಲ್ಲಿ ಆಡುವ ಎಟಿಕೆ-ಮೋಹನ್ ಬಾಗನ್ ತಂಡದ ಒಡೆತನವನ್ನೂ ಹೊಂದಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೂ ಆಪ್ತರಾಗಿದ್ದಾರೆ.
ಅದಾನಿ, ಯುನೈಟೆಡ್‌ಗೆ ನಿರಾಸೆ
ಅಹಮದಾಬಾದ್ ತಂಡ ಖರೀದಿಸುವ ೇವರಿಟ್ ಎನಿಸಿದ್ದ ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ನಿರಾಸೆ ಅನುಭವಿಸಿತು. ಅಹಮದಾಬಾದ್ ತಂಡಕ್ಕೆ ಅದಾನಿ ಗ್ರೂಪ್ ಸುಮಾರು 5 ಸಾವಿರ ಕೋಟಿ ರೂ. ಮೊತ್ತದ ಬಿಡ್ ಮಾತ್ರ ಸಲ್ಲಿಸಿತ್ತು ಎನ್ನಲಾಗಿದೆ. ಇನ್ನು ಪ್ರತಿಷ್ಠಿತ ುಟ್‌ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕತ್ವ ಹೊಂದಿರುವ ‘ಲ್ಯಾನ್ಸರ್ ಕ್ಯಾಪಿಟಲ್’ ಮತ್ತು ಟೊರೆಂಟ್ ಗ್ರೂಪ್ ಕಂಪನಿಗಳು 5 ಸಾವಿರ ಕೋಟಿ ರೂ. ಒಳಗಿನ ಬಿಡ್ ಸಲ್ಲಿಸಿದ್ದವು ಎನ್ನಲಾಗಿದೆ.