ದುಬೈ: ಎಂಟು ವರ್ಷಗಳ ಬಳಿಕ ಪುನರಾರಂಭಗೊಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಭಾರತ ತಂಡ ಅಜೇಯವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಯಕ ರೋಹಿತ್ ಶರ್ಮ (76 ರನ್, 83 ಎಸೆತ, 7 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟ ಹಾಗೂ ನಾಲ್ವರು ಸ್ಪಿನ್ನರ್‌ಗಳ ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಒಲಿಸಿಕೊಂಡಿದೆ.
ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ಸ್ಪಿನ್ನರ್‌ಗಳ ಕಡಿವಾಣದ ನಡುವೆ ಬ್ಯಾಟರ್ ಡೆರಿಲ್ ಮಿಚೆಲ್ (63 ರನ್, 101 ಎಸೆತ, 3 ಬೌಂಡರಿ) ಹಾಗೂ ಮಿಚೆಲ್ ಬ್ರೇಸ್‌ವೆಲ್ (53* ರನ್, 40 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗೆ 251 ರನ್‌ಗಳ ಪೈಪೋಟಿಯುತ ಮೊತ್ತ ಕಲೆಹಾಕಿತು.
ಪ್ರತಿಯಾಗಿ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ (31) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 17 ರನ್‌ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಶ್ರೇಯಸ್ ಅಯ್ಯರ್ (48 ರನ್, 62 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ (29) ಚೇಸಿಂಗ್ ಜೀವಂತವಿಟ್ಟರು. ಕೊನೆಯಲ್ಲಿ ಕನ್ನಡಿಗ ಕೆಎಲ್ ರಾಹುಲ್ (34* ರನ್, 33 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಆಟದ ನೆರವಿನಿಂದ 49 ಓವರ್‌ಗಳಲ್ಲಿ 6 ವಿಕೆಟ್‌ಗೆ 254 ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಪಂದ್ಯದಲ್ಲಿ ಹೋರಾಡಿದ ನ್ಯೂಜಿಲೆಂಡ್ ರನ್ನರ್ ಅಪ್‌ಗೆ ಸಮಾಧಾನ ಕಂಡಿದೆ.
ಮೂರು ಸೋಲಿನ ಮುಯ್ಯಿ ತೀರಿತು!
25 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಕಣಕ್ಕಿಳಿದ ಭಾರತ ತಂಡ ಐಸಿಸಿ ಟೂರ್ನಿಯಲ್ಲಿ ತನ್ನ ದಾಖಲೆಯನ್ನು ಸುಧಾರಿಸಿಕೊಳ್ಳುವ ಮೂಲಕ ಮುಯ್ಯಿ ತೀರಿಸಿಕೊಂಡಿದೆ. 2000ರ ಚಾಂಪಿಯನ್ಸ್ ಟ್ರೋಫಿ ೈನಲ್, 2019 ಏಕದಿನ ವಿಶ್ವಕಪ್ ಸೆಮಿೈನಲ್ ಹಾಗೂ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಶಸ್ತಿ ಸುತ್ತಿನ ಸೋಲಿನ ಸೇಡು ತೀರಿಸಿಕೊಂಡಿದೆ. ಐಸಿಸಿ ಟೂರ್ನಿಗಳ ನಾಕೌಟ್‌ನಲ್ಲಿ 5 ಮುಖಾಮುಖಿಗಳಲ್ಲಿ ಭಾರತ 2-3 ದಾಖಲೆ ಹೊಂದಿದೆ. 2023ರ ಸೆಮಿೈನಲ್‌ನಲ್ಲಿ ಭಾರತ ಮೊದಲ ನಾಕೌಟ್ ಗೆಲುವು ಒಲಿಸಿಕೊಂಡಿತ್ತು.
ದಢೂತಿ ಹೇಳಿಕೆಗೆ ಎದಿರೇಟು...
ಕ್ರಿಕೆಟರ್ ಆಗಲು ರೋಹಿತ್ ಶರ್ಮ ಆನ್‌ಫಿಟ್ ಆಗಿದ್ದು, ದಢೂತಿ ದೇಹದ ಆಕಾರ ಹೊಂದಿರುವ ಅವರು ತೂಕ ಇಳಿಸಿಕೊಳ್ಳಬೇಕು. ನಾಯಕತ್ವವನ್ನು ಅಷ್ಟು ಪರಿಣಾಮಕಾರಿ ಆಗಿಲ್ಲ ಎಂಬ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮದ್ ಹೇಳಿಕೆ ಹಾಗೂ ಅದಕ್ಕೆ ಬೆಂಬಲ ನೀಡಿದವರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದ 37 ವರ್ಷದ ರೋಹಿತ್, ದಿಟ್ಟ ತಿರುಗೇಟು ನೀಡಿದರು. ಫೀಲ್ಡಿಂಗ್‌ನಲ್ಲೂ ಗಮನಸೆಳೆದ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು.
2. ವಿರಾಟ್ ಕೊಹ್ಲಿ 550 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ 2ನೇ ಭಾರತೀಯ ಎನಿಸಿದರು. ಸಚಿನ್ ತೆಂಡುಲ್ಕರ್ (664) ಮೊದಲ ಸ್ಥಾನದಲ್ಲಿದ್ದಾರೆ.
3. ರೋಹಿತ್ ಶರ್ಮ ಸೀಮಿತ ಓವರ್‌ಗಳ ಐಸಿಸಿ ಟೂರ್ನಿಯ ೈನಲ್‌ನಲ್ಲಿ 50 ಪ್ಲಸ್ ಸ್ಕೋರ್ ಮಾಡಿದ ಮೂರನೇ ಭಾರತೀಯ ನಾಯಕ. ಸೌರವ್ ಗಂಗೂಲಿ, ಎಂಎಸ್ ಧೋನಿ ಮೊದಲಿಬ್ಬರು.
3. ರೋಹಿತ್-ಶುಭಮಾನ್ ಚಾಂಪಿಯನ್ಸ್ ಟ್ರೋಫಿ ೈನಲ್‌ನಲ್ಲಿ ಶತಕದ ಜತೆಯಾಟವಾಡಿದ 3ನೇ ಜೋಡಿ ಎನಿಸಿತು. ಸೌರವ್ ಗಂಗೂಲಿ-ಸಚಿನ್ ತೆಂಡುಲ್ಕರ್ (2000), ಅಜರ್ ಅಲಿ-ಖರ್ ಜಮಾನ್ (2017) ಮೊದಲೆರಡು ಜೋಡಿ.
12. ಭಾರತ ತಂಡ ಏಕದಿನ ಕ್ರಿಕೆಟ್‌ನಲ್ಲಿ ಸತತ 15ನೇ ಬಾರಿ ಟಾಸ್ ಸೋತರೆ, ರೋಹಿತ್ ಶರ್ಮ ನಾಯಕನಾಗಿ ಸತತ 12ನೇ ಬಾರಿ ಟಾಸ್ ಜಯಿಸುವಲ್ಲಿ ವಿಲರಾದರು. ಇದರೊಂದಿಗೆ ಬ್ರಯಾನ್ ಲಾರಾ (1998-1999) ದಾಖಲೆಯನ್ನು ಸರಿಗಟ್ಟಿದರು.
5. ಕೆಎಲ್ ರಾಹುಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ 5ನೇ ಕನ್ನಡಿಗ ಎನಿಸಿದರು. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ (2002), ವಿನಯ್ ಕುಮಾರ್ (2013) ಹಿಂದಿನ ಸಾಧಕರು.
2. ರೋಹಿತ್ ಶರ್ಮ ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ20 ವಿಶ್ವಕಪ್ ಗೆದ್ದ ಎರಡನೇ ಭಾರತೀಯ ನಾಯಕ. ಎಂಎಸ್ ಧೋನಿ ಮೊದಲಿಗ.