ಕ್ರೀಡೆ

ಬಾರ್ಡರ್​-ಗವಾಸ್ಕರ್​​ ಟ್ರೋಫಿಯಿಂದ ಶಮಿ ಔಟ್​; Rohit Sharma ನೀಡಿದ ವಿವರಣೆ ಹೀಗಿದೆ

ಬೆಂಗಳೂರು: ಅಕ್ಟೋಬರ್​ 16ರಿಂದ ನ್ಯೂಜಿಲೆಂಡ್​ (NewZealand) ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ (Test Series) ಈಗಾಗಲೇ ಉಭಯ ತಂಡಗಳು ತಯಾರಿ ನಡೆಸುತ್ತಿವೆ. ಇನ್ನೂ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣವು (Chinnaswamy Stadium) 25ನೇ ಟೆಸ್ಟ್ ಪಂದ್ಯಕ್ಕೆ (Test Match) ಆತಿಥ್ಯವನ್ನು ವಹಿಸುತ್ತಿದ್ದು, ಈ ಸರಣಿಯಲ್ಲಿ ಗೆಲ್ಲುವ ಮೂಲಕ ಭಾರತ (Team India) ಮುಂಬರುವ ದಕ್ಷಿಣ ಆಫ್ರಿಕಾ ಹಾಗೂ ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ (Border-Gavaskar Trophy) ಸಜ್ಜಾಗಲು ಮುಂದಾಗಿದೆ.

ಇನ್ನೂ ವಾಡಿಕೆಯಂತೆ ಸರಣಿ (Series) ಆರಂಭಕ್ಕೂ ಮುನ್ನ ಉಭಯ ತಂಡಗಳ ನಾಯಕರು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತಾರೆ. ಅದರಂತೆ ಟೀಮ್​ ಇಂಡಿಯಾ (Team India) ನಾಯಕ ರೋಹಿತ್​ ಶರ್ಮ (Rohit Sharma) ಕೂಡ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದನ್ನು ಹಂಚಿಕೊಂಡಿದ್ದು, ಇದು ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ (Border-Gavaskar Trophy) ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ

ಅದೇನೆಂದರೆ, ಮುಂಬರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ (Border-Gavaskar) ಸಂಬಂಧಿಸಿದಂತೆ ಟೀಮ್​ ಇಂಡಿಯಾದ (Team India) ಸ್ಟಾರ್​ ವೇಗಿ ತಂಡದೊಂದಿಗೆ ಪ್ರಯಾಣಿಸುತ್ತಿಲ್ಲ ಎಂದು ನಾಯಕ ರೋಹಿತ್​ ಶರ್ಮ (Rohit Sharma) ಖಚಿತಪಡಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶಮಿ (Mohammed Shami) ಇನ್ನೂ ಸಂಪೂರ್ಣವಾಗಿ ಫಿಟ್​ ಆಗದ ಕಾರಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ. ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ವೈದ್ಯರ ನಿಗಾದಲ್ಲಿದ್ದು, ನಾವು ಶುಭ ಸುದ್ದಿಗಾಗಿ ಕಾಯುತ್ತಿದ್ದೇವೆ.

ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (NCA) ವೈದ್ಯರ ನಿಗಾದಲ್ಲಿದ್ದ ಶಮಿ (Mohammes Shami) ಚೇತರಿಕೆ ಕಾಣುತ್ತಿದ್ದರಾದರೂ ಅವರು ಆಸ್ಟ್ರೇಲಿಯಾಗೆ ಬಾರದಿರುವ ವಿಚಾರ ನಿಜಕ್ಕೂ ಕಷ್ಟಕರವಾಗಿದೆ. ನಾವು ಆತನಿಗೆ ಫಿಟ್​ ಆಗಲು ಸಕಷ್ಟು ಸಮಯವನ್ನು ನೀಡುತ್ತೇವೆ. ಆತ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರುಳುವ ಮುನ್ನ ದೇಶೀಯ ಟೂರ್ನಿಗಳಲ್ಲಿ ಭಾಗಿಯಾಗುವುದು ಸೂಕ್ತ ಎಂದು ಟೀಮ್​ ಇಂಡಿಯಾ (Team India) ನಾಯಕ ರೋಹಿತ್​​​ ಶರ್ಮ (Rohit Sharma) ಅಭಿಪ್ರಾಯಪಟ್ಟಿದ್ದಾರೆ.