ಕ್ರೀಡೆ

'ನನ್ನನ್ನು ಮದುವೆಯಾಗುತ್ತೀರಾ?' ಎಂದು ಫ್ಯಾನ್​ಗೆ ಪ್ರಪೋಸ್​ ಮಾಡಿದ ರೋಹಿತ್ ಶರ್ಮಾ!

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ನಾಯಕ ರೋಹಿತ್ ಶರ್ಮಾ ಮೈದಾನದ ಒಳಗೂ ಹೊರಗೂ ವಿನೋದದ ಮೂಡ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ರೋಹಿತ್​ ಶರ್ಮಾರನ್ನು ಹಿಂಬಾಲಿಸುತ್ತಿದ್ದ ಅಭಿಮಾನಿಯೊಬ್ಬರೊಂದಿಗೆ ಸಂಭಾಷಣೆ ನಡೆಸುತ್ತಿದ್ದರು. ರೋಹಿತ್ ಶರ್ಮಾ ತಮ್ಮ ಸೋದರ ಮಾವನ ಮದುವೆಗೆ ಹಾಜರಾಗಬೇಕಿದ್ದ ಕಾರಣ ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಂಡಿದ್ದರು.

ಅವರು ಎರಡನೇ ಏಕದಿನ ಪಂದ್ಯದ ಸ್ಥಳವಾದ ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿನ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಾಗ ಜನರು ಅವರನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದರು. ರೋಹಿತ್ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಅಭಿಮಾನಿಯೊಬ್ಬರನ್ನು ಗುರುತಿಸಿ ಎಲ್ಲರಿಗೂ ಆಶ್ಚರ್ಯವಾಗುವಂತೆ ಗುಲಾಬಿಯನ್ನು ಉಡುಗೊರೆಯಾಗಿ ನೀಡಿದರು. ಇದರಿಂದಾಗಿ ಅಭಿಮಾನಿಯು ತುಂಬಾ ಸಂತೋಷಗೊಂಡಿದ್ದರು. ಇದಾದ ತಕ್ಷಣವೇ ರೋಹಿತ್​ ಶರ್ಮಾ "ನೀವು ನನ್ನನ್ನು ಮದುವೆಯಾಗುತ್ತೀರಾ?" ಎಂದು ತಮಾಷೆಯಾಗಿ ಪ್ರಶ್ನಿಸಿದರು.

ಇದೀಗ ಈ ಘಟನೆಯ ವಿಡಿಯೋ ವೈರಲ್​ ಆಗಿದ್ದು ಜನರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರಂತೂ ರೋಹಿತ್​ ಸಲಿಂಗಿ ಎಂದಿದ್ದಾರೆ! ಇನ್ನೊಬ್ಬ ಟ್ವಿಟರ್ ಬಳಕೆದಾರ, ರೋಹಿತ್​ ಶರ್ಮಾ ಗುಲಾಬಿ ಎಸೆಯಲು ಡಸ್ಟ್​ಬಿನ್​ ಹುಡುಕುತ್ತಿದ್ದರು. ಆಗ ಈ ವ್ಯಕ್ತಿ ಸಿಕ್ಕಿದ್ದಾರೆ ಎಂದು ಬರೆದಿದ್ದಾರೆ.