ಕ್ರೀಡೆ

Rohit Sharma ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ; ಹಿಟ್​ಮ್ಯಾನ್​ ಕುರಿತು ಶಾಕಿಂಗ್​​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್​ ಟ್ರೋಫಿ (Border Gavaskar Trophy) ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಗೆಲುವು-ಸೋಲು ಎರಡನ್ನು ಕಂಡಿದ್ದು, ಬ್ರಿಸ್ಬೇನ್​ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್​ನಲ್ಲಿ ಕಮ್​ಬ್ಯಾಕ್​ ಮಾಡಲು ಭಾರತ ತಂಡ ಸಜ್ಜಾಗಿದೆ. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ನಿಟ್ಟಿನಲ್ಲಿ ಈ ಪಂದ್ಯ ಭಾರತಕ್ಕೆ ಮಹತ್ವದಾಗಿದ್ದು, ಇದರ ನಡುವೆಯೇ ರೋಹಿತ್​ ಶರ್ಮ (Rohit Sharma) ಫಿಟ್ನೆಸ್​ ಬಗ್ಗೆ ದಕ್ಷಿಣಾ ಆಫ್ರಿಕಾ ಕ್ರಿಕೆಟ್​ ತಂಡದ ಮಾಜಿ ಆಟಗಾರ  ಡ್ಯಾರಿಲ್ ಕುಲ್ಲಿನನ್ (Daryll Cullinan) ಮಾತನಾಡಿದ್ದು, ರೋಹಿತ್​ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯ ಸಂವಾದದಲ್ಲಿ ಈ ಬಗ್ಗೆ ಮಾತನಾಡಿರುವ ಡ್ಯಾರಿಲ್​ ಕುಲ್ಲಿನನ್​, ವಿರಾಟ್​ ಹಾಗೂ ರೋಹಿತ್​ರ ದೈಹಿಕ ಸ್ಥಿತಿಯಲ್ಲಿನ ವ್ಯತ್ಯಾಸವನ್ನು ನೋಡಿ. ರೋಹಿತ್ ಅಧಿಕ ತೂಕ ಹೊಂದಿರುವ ಕಾರಣ, ಅವರು ಹೆಚ್ಚು ಕಾಲ ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲ. ಅವರ ದೈಹಿಕ ಸ್ಥಿತಿ ಒಂದೇ ಆಗಿಲ್ಲದ ಕಾರಣ ಅವರು ಇನ್ನು ಮುಂದೆ ಲಾಂಗ್ ಫಾರ್ಮ್ಯಾಟ್ ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ.

ರೋಹಿತ್ ಫ್ಲ್ಯಾಟ್​ ಪಿಚ್‌ಗಳ ರಾಜ. ಅವರು ಭಾರತದ ಪಿಚ್‌ಗಳಲ್ಲಿ ಮಾತ್ರ ರನ್ ಗಳಿಸಬಲ್ಲರು. ರೋಹಿತ್ ಶರ್ಮಾ ವಿದೇಶದ ಪಿಚ್‌ಗಳಿಗೆ ಪರಿಪೂರ್ಣ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ವಿಶೇಷವಾಗಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಅತನ ಆಟ ನಡೆಯುವುದಿಲ್ಲ. ಅವರು ತವರು ನೆಲದಲ್ಲಿ ಮಾತ್ರ ರನ್ ಗಳಿಸಬಲ್ಲರು, ಅವರ ಅಂಕಿಅಂಶಗಳು ಸಹ ಇದಕ್ಕೆ ಸಾಕ್ಷಿಯಾಗಿದೆ ಎಂದು ದಕ್ಷಿಣಾ ಆಫ್ರಿಕಾ ಕ್ರಿಕೆಟ್​ ತಂಡದ ಮಾಜಿ ಆಟಗಾರ  ಡ್ಯಾರಿಲ್ ಕುಲ್ಲಿನನ್ ವ್ಯಂಗ್ಯವಾಡಿದ್ದಾರೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.