ಕ್ರೀಡೆ

ವಿರಾಟ್​ ಹೆಚ್ಚು ರನ್​ ಗಳಿಸಲಿಲ್ಲ ಆ ಕಾರಣಕ್ಕೆ...; ಅಚ್ಚರಿಯ ಹೇಳಿಕೆ ನೀಡಿದ ಅಂಬಾಟಿ ರಾಯುಡು

ನವದೆಹಲಿ: ಇಲ್ಲಿನ ಪ್ರಾವಿಡೆನ್ಸ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದ್ದು, 2022ರಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿದೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಮೂಲಕ ಆರೆಂಜ್​ ಕ್ಯಾಪನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್​ನಲ್ಲೂ ಟಾಪ್​ ರನ್​ ಸ್ಕೋರರ್​ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುಟುಕು ವಿಶ್ವಸಮರದಲ್ಲಿ ವಿರಾಟ್​ ಯಾಕೋ ಮಂಕಾದಂತೆ ಕಾಣುತ್ತಿದ್ದು, ನಿರೀಕ್ಷಿತ ಪ್ರದರ್ಶನವನ್ನು ನೀಡುತ್ತಿಲ್ಲ.

ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲೂ ವಿರಾಟ್​ ರನ್​ ಗಳಿಸಲು ಪರದಾಡಿದ್ದು, ಕೊಹ್ಲಿ ಫಾರ್ಮ್​ ಟೀಮ್​ ಇಂಡಿಯಾವನ್ನು ಚಿಂತೆಗೆ ದೂಡಿದೆ. ಇನ್ನೂ ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಕೊಹ್ಲಿ ಹೆಚ್ಚು ರನ್​ ಗಳಿಸದಿರುವುದೇ ರೋಹಿತ್​ ಶಾಂತವಾಗಿರಲು ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ರಾಯುಡು, ಟೀಮ್​ ಇಂಡಿಯಾದಲ್ಲಿ ಅದ್ಭುತ ವಾತವರಣವಿದ್ದು, ಎಲ್ಲರೂ ಸಂಯೋಜಿತರಾಗಿ ಆಟವಾಡುತ್ತಿದ್ದಾರೆ. ಆಟಗಾರರು ಆಡುತ್ತಿರುವ ರೀತಿ ನೋಡಿದರೆ ಎಲ್ಲರೂ ಸಿದ್ದರಾಗಿ ಹೋದಂತೆ ಕಾಣುತ್ತಿದೆ. ರೋಹಿತ್​ ಶಾಂತವಾಗಿದ್ದು, ತಂಡದಲ್ಲಿ ಇತರರ ಪಾತ್ರದ ಬಗ್ಗೆ ತಿಳಿದಿದ್ದಾರೆ. ನಿಸ್ವಾರ್ಥದ ಆಟಕ್ಕೆ ಅದೃಷ್ಟ ಇವರ ಕೈ ಹಿಡಿಯಲಿದ್ದು, ಈ ಬಾರಿ ಭಾರತ ಕಪ್​ ಗೆಲ್ಲುವುದು ಕನ್ಫರ್ಮ್​.

ವಿರಾಟ್​ ಹೆಚ್ಚು ರನ್​ ಗಳಿಸಿಲ್ಲ ಎಂಬ ಕಾರಣಕ್ಕೆ ರೋಹಿತ್​ ಶಾಂತವಾಗಿದ್ದಾರೆ. ವಿರಾಟ್​ ಚೆಂಡನ್ನು ಹೊಡೆಯುವ ರೀತಿ ಮತ್ತು ಎದುರಾಳಿಗಳನ್ನು ಅಂದಾಜಿಸುವ ರೀತಿ ದೊಡ್ಡ ಆಟದ ಮುನ್ಸೂಚನೆ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಹೆಚ್ಚು ರನ್​ ಗಳಿಸಬೇಕೆಂದೆನಿಲ್ಲ. ಕೊಹ್ಲಿ ರೀತಿ ಆಡಲು ಅದೃಷ್ಟ ಇರಬೇಕು. ವಿರಾಟ್​ ಮುಂದಿನ ದಿನಗಳಲ್ಲಿ ಹೆಚ್ಚ ರನ್​ ಗಳಿಸುತ್ತಾರೆ. ಶತಕೋಟಿ ಜನರ ಪ್ರಾರ್ಥನೆ ಅವರ ಕೈ ಹಿಡಿಯಲಿದೆ ಎಂದು ಅಂಬಾಟಿ ರಾಯುಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.