ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಪಾಕ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಆತಿಥೇಯ ರಾಷ್ಟ್ರ ಟಾಸ್ಗೆದ್ದಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ನ್ಯೂಜಿಲೆಂಡ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 60 ರನ್ಗಳ ಸೋಲುಂಡಿದ್ದ ಪಾಕ್ಗೆ ಈ ಮ್ಯಾಚ್ ಮಹತ್ವದಾಗಿದ್ದು, ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿಯಲ್ಲಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯಗಳಿಸಿರುವ ಭಾರತ ತಂಡವು ಪಾಕ್ ವಿರುದ್ಧ ತನ್ನ ಪಾರುಪತ್ಯವನ್ನು ಸಾಧಿಸುವ ಮೂಲಕ ಸೆಮೀಸ್ ಟಿಕೆಟ್ಅನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಣಕ್ಕಿಳಿದಿದೆ.
ಇನ್ನೂ ಟಾಸ್ ವೇಳೆ ನಡೆದ ಸ್ವಾರಸ್ಯಕರ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಮಾಜಿ ಕೋಚ್ ರವಿಶಾಸ್ತ್ರಿ ಪ್ರಶ್ನೆಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ (Rohit Sharma) ನೀಡಿರುವ ಉತ್ತರ ಸಖತ್ ವೈರಲ್ ಆಗುತ್ತಿದೆ.
ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಜೊತೆ ಮಾತನಾಡಿದ ಬಳಿಕ ರವಿಶಾಸ್ತ್ರಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಗೆ (Rohit Sharma) ಏನು ನಿರ್ಧರಿಸಿದ್ದೀರಿ? ಎಂದು ಕೇಳುತ್ತಾರೆ. ಕೂಡಲೇ ಎಚ್ಚೆತ್ತ ರೋಹಿತ್ ಶರ್ಮ ಯಾರು ಟಾಸ್ ಗೆದ್ದರೂ ಎಂಬುದು ಮುಖ್ಯವಲ್ಲ ನಾವು ಮೊದಲು ಬೌಲಿಂಗ್ ಮಾಡುತ್ತಿದ್ಧೇವೆ ಎಂದು ಹೇಳಿದರು.
ಪಿಚ್ ಕಳೆದ ಪಂದ್ಯದಂತೆಯೇ ಕಾಣುತ್ತದೆ, ಮೇಲ್ಮೈ ನಿಧಾನವಾಗಿದೆ. ನಾವು ಬ್ಯಾಟಿಂಗ್‌ನಲ್ಲಿ ಅನುಭವಿ ಘಟಕವನ್ನು ಹೊಂದಿದ್ದೇವೆ ಆದ್ದರಿಂದ ಪಿಚ್‌ಗಳು ನಿಧಾನವಾಗಿದ್ದರೆ ನಾವು ಏನು ಮಾಡಬೇಕು ಎಂದು ನಮಗೆ ತಿಳಿದಿದೆ. ತಂಡದಿಂದ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಒಟ್ಟಾರೆ ಪ್ರದರ್ಶನದ ಅಗತ್ಯವಿದೆ. ಯಾವುದೇ ಪಂದ್ಯವು ನಮಗೆ ಸುಲಭವಲ್ಲ, ಅದು ಯಾವಾಗಲೂ ಉತ್ತಮವಾಗಿರುತ್ತದೆ. ನೀವು ಒತ್ತಡದಲ್ಲಿರಲು ಮತ್ತು ನಿಮ್ಮನ್ನು ಪರೀಕ್ಷಿಸಲು ಬಯಸುತ್ತೀರಿ ಎಂದು ಟಾಸ್ ಬಳಿಕ ರೋಹಿತ್ ಶರ್ಮ ಹೇಳಿದ್ದಾರೆ.
ಇನ್ನೂ ಟಾಸ್ ವೇಳೆ ರೋಹಿತ್ ಶರ್ಮ (Rohit Sharma) ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ನೀಡಿದ ಉತ್ತರ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಿಟ್ಮ್ಯಾನ್ನ ಗೆಸ್ಚರ್ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ಅನ್ನು ಸೃಷ್ಟಿಸಿದೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ.
ಪಾಕಿಸ್ತಾನ: ಬಾಬರ್ ಆಜಂ, ಇಮಾಮ್ ಉಲ್ ಹಕ್, ಸೌದ್ ಶಕೀಲ್, ಮೊಹಮ್ಮದ್ ರಿಝ್ವಾನ್ (ನಾಯಕ), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.