ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರಾಹುಲ್​ ದ್ರಾವಿಡ್​ ಸಾಧನೆ ಸರಿಗಟ್ಟಿದ ರೋಹಿತ್ ಶರ್ಮ!

ಧರ್ಮಶಾಲಾ: ರೋಹಿತ್​ ಶರ್ಮ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ 5ನೇ ಹಾಗೂ ಕೊನೇ ಟೆಸ್ಟ್​ನಲ್ಲಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಪರ 3ನೇ ಸರ್ವಾಧಿಕ 48 ಶತಕ ಸಿಡಿಸಿದ ರಾಹುಲ್​ ದ್ರಾವಿಡ್​ ಸಾಧನೆಯನ್ನು ಸರಿಗಟ್ಟಿದರು.

ಸಚಿನ್​ ತೆಂಡುಲ್ಕರ್​ (100) ಮತ್ತು ವಿರಾಟ್​ ಕೊಹ್ಲಿ (80) ಮೊದಲೆರಡು ಸ್ಥಾನದಲ್ಲಿದ್ದಾರೆ. ಟೀಮ್​ ಇಂಡಿಯಾದ ಹಾಲಿ ಮುಖ್ಯ ಕೋಚ್​ ದ್ರಾವಿಡ್​ ಟೆಸ್ಟ್​ನಲ್ಲಿ 36, ಏಕದಿನದಲ್ಲಿ 12 ಶತಕ ಸಿಡಿಸಿದ್ದರೆ, ರೋಹಿತ್​ ಟೆಸ್ಟ್​ನಲ್ಲಿ 12, ಏಕದಿನದಲ್ಲಿ 31 ಮತ್ತು ಟಿ20ಯಲ್ಲಿ 5 ಶತಕ ಸಿಡಿಸಿದ್ದಾರೆ.

ಇನ್ನು 36 ವರ್ಷದ ರೋಹಿತ್​ ಶರ್ಮ 30ನೇ ವಯಸ್ಸಿನ ಬಳಿಕ ಭಾರತ ಪರ ಸರ್ವಾಧಿಕ 35 ಶತಕ ಸಿಡಿಸಿದ ಸಚಿನ್​ ತೆಂಡುಲ್ಕರ್​ ದಾಖಲೆ ಸರಿಗಟ್ಟಿದರು. ದ್ರಾವಿಡ್​ 26 ಶತಕ ಸಿಡಿಸಿರುವುದು ನಂತರದ ಗರಿಷ್ಠ. ಕುಮಾರ ಸಂಗಕ್ಕರ 30ರ ನಂತರ 43 ಶತಕ ಸಿಡಿಸಿರುವುದು ವಿಶ್ವದಾಖಲೆಯಾಗಿದೆ.