ಸಿಡ್ನಿ: ಪರ್ತ್ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (Border Gavaskar Trophy Test Series) ಅಂತಿಮ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, 185 ರನ್ಗಳಿಗೆ ಆಲೌಟ್ ಆಗಿದೆ. ಇನ್ನೂ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ರೋಹಿತ್ ಶರ್ಮ (Rohit Sharma) ಬದಲು ಜಸ್ಪ್ರೀತ್ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸುತ್ತಿದ್ದು, ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಲವರು ರೋಹಿತ್ ಶರ್ಮ ಈ ಪಂದ್ಯದ ನಂತರ ನಿವೃತ್ತಿ ಘೋಷಿಸಬಹುದು ಎಂದು ಊಹಿಸಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬರು ತಮ್ಮ ಹೇಳಿಕೆ ಮೂಲಕವೇ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದಾರೆ.
ರೋಹಿತ್ ಶರ್ಮ (Rohit Sharma) ಕೊನೆ ಪಂದ್ಯದಲ್ಲಿ ಆಡದಿರುವ ಬಗ್ಗೆ ಮಾತನಾಡಿರುವ ಮಾರ್ಕ್ ಟೇಲರ್, ಒಬ್ಬ ತಂಡದ ನಾಯಕನನ್ನು ಸರಣಿಯ ಬಹು ಮುಖ್ಯ ಪಂದ್ಯದಿಂದ ಹೊರಗುಳಿಯುತ್ತಾರೆ ಎಂದರೆ ಅದು ಬೇರೆ ಏನೋ ಇದೆ ಎಂದರ್ಥ. ಆತನನ್ನು ಬೇಕಂತಲೇ ತಂಡದಿಂದ ಕೈ ಬಿಡಲಾಗಿದೆ. ಆದರೂ ಈ ಬಗ್ಗೆ ಯಾರು ಹೇಳಿಲ್ಲ. ಆತ ಫಾರ್ಮ್ನಲ್ಲಿದ ಕಾರಣ ಈ ಪಂದ್ಯ ತಪ್ಪಿಸಿಕೊಂಡಿದ್ದಾನೆ. ಕ್ರೀಡೆಯಲ್ಲಿ ಇದು ಸಹಜ ಪ್ರಕ್ರಿಯೆಯಾಗಿದೆ. ಆದರೆ, ನೀಡುತ್ತಿರುವ ಕಾರಣ ಸರಿಯಿಲ್ಲ ಎಂದು ಮಾರ್ಕ್ ಟೇಲರ್ ಹೇಳಿದ್ದಾರೆ.
ಟಾಸ್ ವೇಳೆ ರೋಹಿತ್ ಶರ್ಮ (Rohit Sharma) ಪಂದ್ಯ ತಪ್ಪಿಸಿಕೊಳ್ಳುವ ಕುರಿತು ಮಾತನಾಡಿದ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah), ನಮ್ಮ ಕ್ಯಾಪ್ಟನ್ ನಾಯಕತ್ವದ ಗುಣಗಳನ್ನು ತೋರಿಸಿದ್ದು, ಸ್ವತಃ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದರು. ಅನೇಕರು ಕಿಡಿಕಾರಿ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಟೀಕಿಸಿದ್ದರು. ಮುಖ್ಯವಾಗಿ ಗೌತಮ್ ಗಂಭೀರ್ ವಿರುದ್ಧ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದರು.
ಪಿತೃತ್ವದ ರಜೆ ಹಿನ್ನೆಲೆ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ (Rohit Sharma) ಗೈರಾಗಿದ್ದರು. ರೋಹಿತ್ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ತಂಡವನ್ನು ಮುನ್ನಡೆಸಿದ್ದರು. ಈ ಪಂದ್ಯದಲ್ಲಿ ಭಾರತ 295 ರನ್ಗಳ ಭರ್ಜರಿ ಜಯ ಗಳಿಸಿತ್ತು. ಸರಣಿಯ ಎರಡನೇ ಪಂದ್ಯದಿಂದ ತಂಡವನ್ನು ಮುನ್ನಡೆಸಿದ ಹಿಟ್ಮ್ಯಾನ್ ಪ್ರಸ್ತುತ ಸರಣಿಯಲ್ಲಿ 31ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಸರಣಿಯ ಕೊನೆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡವಿದ್ದು, ಏನೆಲ್ಲಾ ಆಗಲಿದೆ ಎಂದು ಕಾದು ನೋಡಬೇಕಿದೆ.