Rohit Sharma: ನಿನ್ನೆ(ಮಾ.29) ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಜಿಟಿ ನೀಡಿದ 197 ರನ್ಗಳ ಗುರಿಯನ್ನು ಬೆನ್ನಟ್ಟಲು ಮುಗ್ಗರಿಸಿದ ಮುಂಬೈ ಪಡೆ, ಕಡೆಗೂ ಐಪಿಎಲ್ನಲ್ಲಿ ಎರಡನೇ ಸೋಲನ್ನು ದಾಖಲಿಸಿತು. ಈ ಮೂಲಕ ಅಭಿಮಾನಿಗಳ ಎದುರು ಭಾರೀ ಮುಖಭಂಗ ಅನುಭವಿಸಿತು.
ಇದನ್ನೂ ಓದಿ: ಮನ್ ಕಿ ಬಾತ್ನಲ್ಲಿ ಮಕ್ಕಳಿಗೆ ಪ್ರಧಾನಿ ಮೋದಿ ಸಂದೇಶ: ಬೇಸಿಗೆ ರಜೆಯ ಅನುಭವ ಹಂಚಿಕೊಳ್ಳಲು ಕರೆ! Mann Ki Baat
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 197 ರನ್ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಪಡೆಗೆ ಆರಂಭಿಕ ಹಂತದಲ್ಲೇ ರೋಹಿತ್ ಶರ್ಮ ವಿಕೆಟ್ ಪತನಗೊಂಡಿದ್ದು, ಭಾರೀ ಆಘಾತ ತಂದೊಡ್ಡಿತು. ಸಿರಾಜ್ ಬೌಲಿಂಗ್ನಲ್ಲಿ ಹೆಚ್ಚು ಹೊತ್ತು ಕ್ರೀಸ್ಗೆ ಅಂಟದೆ ಕೇವಲ 8 ರನ್ಗೆ ಪೆವಿಲಿಯನ್ನತ್ತ ಮುಖಮಾಡಿದ ರೋಹಿತ್, ತಂಡ ಮತ್ತು ಅಭಿಮಾನಿಗಳ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದರು. ಒಂದೆಡೆ ಬೇಸರ ಮೂಡಿದ್ದೇ ಆದರೂ ಈ ಪಂದ್ಯದ ಮೂಲಕ ಟಿ20 ಫಾರ್ಮೆಟ್ನಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ದಾಖಲಿಸಿದ್ದಾರೆ.
ಗುಜರಾತ್ ಟೈಟನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ ಇತಿಹಾಸಕ್ಕೆ ಸಾಕ್ಷಿಯಾದರು. ಈ ಅಸಾಧಾರಣ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 450 ಟಿ20 ಪಂದ್ಯಗಳಲ್ಲಿ ಆಡಿರುವ ರೋಹಿತ್, ಈ ಮೈಲಿಗಲ್ಲು ತಲುಪಿದ ಮೊದಲ ಭಾರತೀಯರಾಗಿದ್ದಾರೆ. ಏಪ್ರಿಲ್ 2007ರಲ್ಲಿ ಬರೋಡಾ ವಿರುದ್ಧ ಮುಂಬೈ ರಾಜ್ಯ ತಂಡಕ್ಕಾಗಿ ಟಿ20ಗೆ ಪಾದಾರ್ಪಣೆ ಮಾಡಿದ ಶರ್ಮ, 2007ರ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಅಂದಿನಿಂದ, ಪ್ರತಿ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ನಿರಂತರವಾಗಿ ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ: ಮ್ಯಾನ್ಮಾರ್ ಭೂಕಂಪಕ್ಕೆ 1,600ಕ್ಕೂ ಅಧಿಕ ಮಂದಿ ಬಲಿ – 3,000 ಕ್ಕೂ ಹೆಚ್ಚು ಮಂದಿಗೆ ಗಾಯ! Earthquake
450 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮ ಮೊದಲನೇ ಸ್ಥಾನದಲ್ಲಿದ್ದರೆ, 412 ಪಂದ್ಯಗಳನ್ನಾಡಿ ದಿನೇಶ್ ಕಾರ್ತಿಕ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಸಲಿಗೆ ಭಾರತೀಯ ಸ್ಟಾರ್ ಬ್ಯಾಟರ್ಗಳು ಆಡಿದ ಅತಿ ಹೆಚ್ಚು ಟಿ20 ಪಂದ್ಯಗಳು ಎಷ್ಟು? ಯಾರಾರು ಈ ಪಟ್ಟಿಯಲ್ಲಿ ಇದ್ದಾರೆ ಎಂಬುದರ ವಿವರ ಹೀಗಿದೆ.
1. ರೋಹಿತ್ ಶರ್ಮಾ 450
2. ದಿನೇಶ್ ಕಾರ್ತಿಕ್ 412
3. ವಿರಾಟ್ ಕೊಹ್ಲಿ 401
4. ಎಂ.ಎಸ್. ಧೋನಿ 393
5. ಸುರೇಶ್ ರೈನಾ 336