ಕ್ರೀಡೆ

ರೋಹಿತ್​ ಮತ್ತು ಕೊಹ್ಲಿ ಭಾರತದ ಮೆಸ್ಸಿ-ರೊನಾಲ್ಡೊ ಇದ್ದಂಗೆ: ಪಾಕ್ ಮಾಜಿ ನಾಯಕ ಗುಣಗಾನ! | Ronaldo

ನವದೆಹಲಿ: ಕ್ರಿಕೆಟ್​ ದಿಗ್ಗಜರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ '' ಭಾರತದ ಕ್ರಿಸ್ಟಿಯಾನೊ ರೊನಾಲ್ಡೊ(Ronaldo) ಮತ್ತು ಲಿಯೋನೆಲ್​ ಮೆಸ್ಸಿ'' ಎಂದು ಪಾಕ್ ಕ್ರಿಕೆಟ್​ನ​ ಮಾಜಿ ನಾಯಕ ರಶೀದ್​​ ಲತೀಫ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೌದು, ವಿರಾಟ್​ ಮತ್ತು ರೋಹಿತ್​ ಅವರ ಏಕದಿನ ಕ್ರಿಕೆಟ್​ ಭವಿಷ್ಯದ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. 2027ರ ವಿಶ್ವಕಪ್‌ನಲ್ಲಿ ಈ ಜೋಡಿ ಭಾಗವಹಿಸುವುದು ಭಾರತೀಯ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಆದರೆ, ಭಾರತ ತಂಡವನ್ನು ಬಲಪಡಿಸಲು ಅವರಲ್ಲಿ ಒಬ್ಬರು ತಂಡದ ಭಾಗವಾಗಿರಬೇಕು ಎಂದು ಹೇಳಿದ್ದಾರೆ.

ವಿರಾಟ್​-ರೋಹಿತ್​ ಬಗ್ಗೆ ಗುಣಗಾನ

"2027ರ ವಿಶ್ವಕಪ್​ಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಎಷ್ಟು ಏಕದಿನ ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಮತ್ತು ಅವರು ಎಷ್ಟು ಪಂದ್ಯಗಳನ್ನು ಆಡುತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ. ಆದರೆ, ಹಿರಿಯ ಆಟಗಾರರು ಖಂಡಿತವಾಗಿಯೂ ಅಲ್ಲಿ ಇರಲೇಬೇಕು. ಏಕದಿನ ಕ್ರಿಕೆಟ್ ದೀರ್ಘ ಸ್ವರೂಪದ ಆಟವಾಗಿದೆ - ಇದು ಟಿ20ಗಳಂತಲ್ಲ. ಎರಡೂ ಅಲ್ಲದಿದ್ದರೂ, ಕನಿಷ್ಠ ಒಬ್ಬ ಆಟಗಾರ ತಂಡದ ಭಾಗವಾಗಿರಬೇಕು ಎಂದು ಒತ್ತಿ ಹೇಳಿದರು.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳ ಜಯ ಸಾಧಿಸುವಲ್ಲಿ ಈ ಇಬ್ಬರು ಮಾಜಿ ನಾಯಕರು ಪ್ರಮುಖ ಪಾತ್ರ ವಹಿಸಿದ್ದರು. ರೋಹಿತ್ 121 ರನ್ ಗಳಿಸಿ ಅಜೇಯ ಶತಕ ಬಾರಿಸಿದರೆ, ವಿರಾಟ್ 74 ರನ್ ಗಳಿಸಿ ಅಜೇಯರಾಗುಳಿದರು. ಭಾರತ 237 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪುವಂತೆ ಮಾಡಿದ್ದರು.(ಏಜೆನ್ಸೀಸ್​)