ಮಲಗ (ಸ್ಪೇನ್): ತವರಿನಲ್ಲಿ ಡೇವಿಸ್ ಕಪ್ನಲ್ಲಿ ಆಡುವ ಮೂಲಕ 20 ವರ್ಷಗಳ ಟೆನಿಸ್ ವೃತ್ತೀಜಿವನಕ್ಕೆ ವಿದಾಯ ಹೇಳುತ್ತಿರುವ ಸ್ಪೇನ್ ದಿಗ್ಗಜ ರಾೆಲ್ ನಡಾಲ್ಗೆ ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಸ್ವಿರ್ಜಲೆಂಡ್ನ ರೋಜರ್ ಫೆಡರರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.
"ನಾನು ಟೆನಿಸ್ ಆಟವನ್ನು ಹೆಚ್ಚು ಆನಂದಿಸುವಂತೆ ನೀವು ಮಾಡಿದಿರಿ. ನಾನು ನಿಮ್ಮನ್ನು ಸೋಲಿಸಿದ್ದಕ್ಕಿಂತ ಹೆಚ್ಚಾಗಿ ನೀವು ನನ್ನನ್ನು ಸೋಲಿಸಿದ್ದೀರಿ. ನಿಮ್ಮಷ್ಟು ನನಗೆ ಬೇರಾರೂ ಸವಾಲೊಡ್ಡಿರಲಿಲ್ಲ. ಕ್ಲೇಕೋರ್ಟ್ನಲ್ಲಿ ಆಡುವಾಗ ನಾನು ನಿಮ್ಮ ಮನೆಯಂಗಳದಲ್ಲಿ ಆಡುತ್ತಿರುವಂತೆ ಅನಿಸಿತ್ತು' ಎಂದು 43 ವರ್ಷದ ಫೆಡರರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ಬರೆದಿದ್ದಾರೆ. ಫೆಡರರ್-ನಡಾಲ್ 40 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದರು. ಈ ಪೈಕಿ ನಡಾಲ್ 24 ಮತ್ತು ಫೆಡರರ್ 16ರಲ್ಲಿ ಗೆದ್ದಿದ್ದರು. ಫೆಡರರ್ 2022ರ ಲೆವರ್ ಕಪ್ನಲ್ಲಿ ನಿವೃತ್ತಿ ಹೊಂದಿದ್ದರು.
ನಡಾಲ್ ಆಟ ಖಚಿತ: ಡೇವಿಸ್ ಕಪ್ ಫೈನಲ್ಸ್ನ ಕ್ವಾರ್ಟರ್ಫೈನಲ್ನಲ್ಲಿ ನೆದರ್ಲೆಂಡ್ ವಿರುದ್ಧ ನಡಾಲ್ ಸ್ಪೇನ್ ಪರ ಸಿಂಗಲ್ಸ್ ಪಂದ್ಯದಲ್ಲಿ ಆಡುವುದು ಖಚಿತಗೊಂಡಿದೆ. ಈ ಮುನ್ನ ಫಿಟ್ನೆಸ್ ಸಮಸ್ಯೆಯಿಂದಾಗಿ ನಡಾಲ್ ಸಿಂಗಲ್ಸ್ ಅಥವಾ ಡಬಲ್ಸ್ನಲ್ಲಿ ಆಡುವ ಬಗ್ಗೆ ಅನುಮಾನವಿತ್ತು.