ಕ್ರೀಡೆ

ಫ್ರೆಂಚ್ ಓಪನ್​ಗೆ ಫೆಡರರ್ ಇಲ್ಲ

vijayavani

ಪ್ಯಾರಿಸ್: ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್​ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.

ಗುರುವಾರ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯ ಮೂಲಕ ಫೆಡರರ್ ಇದನ್ನು ತಿಳಿಸಿದ್ದಾರೆ. 20 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ 38 ವರ್ಷದ ಫೆಡರರ್, ಸ್ವಿಜರ್ಲೆಂಡ್​ನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಫ್ರೆಂಚ್ ಓಪನ್​ನೊಂದಿಗೆ ದುಬೈ, ಇಂಡಿಯನ್ ವೆಲ್ಸ್, ಬೊಗೊಟಾ ಹಾಗೂ ಮಿಯಾಮಿ ಟೂರ್ನಿಯಿಂದಲೂ ಹೊರಗುಳಿದಿದ್ದಾರೆ.

ಮೇ 24 ರಿಂದ ಜೂನ್ 7ರವರೆಗೆ ಫ್ರೆಂಚ್ ಓಪನ್ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಫೆಡರರ್ ಫ್ರೆಂಚ್ ಓಪನ್ ಟೂರ್ನಿ ತಪ್ಪಿಸಿಕೊಂಡಂತೆ ಆಗಲಿದೆ.