ಮುಂಬೈ: ಟೀಮ್ ಇಂಡಿಯಾದ ಮಾಜಿ ಬ್ಯಾಟರ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಮುಂಬರುವ ಐಪಿಎಲ್ 20ನೇ ಆವೃತ್ತಿಗೆ ಮುನ್ನ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಜತೆಗೆ ನ್ಯೂಜಿಲೆಂಡ್ನ ಮಾಜಿ ವೇಗಿ ಮಿಚೆಲ್ ವೆುಕ್ಲೆನನ್ ಬೌಲಿಂಗ್ ಕೋಚ್, ಟಿ. ಪ್ರದಿಪ್ ಫೀಲ್ಡಿಂಗ್ ಕೋಚ್ ಮತ್ತು ಧವಳ್ ಕುಲಕರ್ಣಿ ಡೆವಲಪ್ಮೆಂಟ್ ಬೌಲಿಂಗ್ ಕೋಚ್ ಆಗಿ ಮುಂಬೈ ತಂಡದ ತರಬೇತಿ ಬಳಗವನ್ನು ಸೇರಿಕೊಂಡಿದ್ದಾರೆ. ಮುಂಬೈ ತಂಡದ ಹಿಂದಿನ ಬ್ಯಾಟಿಂಗ್ ಕೋಚ್ ಕೈರಾನ್ ಪೊಲ್ಲಾರ್ಡ್ ಇತ್ತೀಚೆಗೆ ಮುಖ್ಯ ಕೋಚ್ ಆಗಿ ಬಡ್ತಿ ಪಡೆದಿದ್ದರು.
2007ರ ಟಿ20 ವಿಶ್ವಕಪ್ ವಿಜೇತರೂ ಆಗಿರುವ 40 ವರ್ಷದ ರಾಬಿನ್ ಉತ್ತಪ್ಪ 2008ರ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. "ನಮ್ಮ ಮೊದಲ ಆವೃತ್ತಿಯಲ್ಲೇ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ ಇದೀಗ ಅಪಾರ ಅನುಭವದೊಂದಿಗೆ ತಂಡಕ್ಕೆ ಮರಳಿದ್ದಾರೆ. ಆಟದ ಬಗ್ಗೆ ಆಳವಾದ ತಿಳುವಳಿಕೆ, ಅತ್ಯುತ್ತಮ ಸಂವಹನ ಕೌಶಲ ಮತ್ತು ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವ ಸ್ಪಷ್ಟತೆ ಅವರಲ್ಲಿದೆ. ರಾಬಿನ್ಗೆ ಮತ್ತೆ ಸ್ವಾಗತ' ಎಂದು ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಟಿ. ಪ್ರದಿಪ್ ಈ ಹಿಂದೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು ಮತ್ತು 2024, 2026ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ನೆರವಾಗಿದ್ದರು. ಮೆಕ್ಲೆನನ್ ಈ ಹಿಂದೆ 2015ರಿಂದ 2020ರವರೆಗೆ ಮುಂಬೈ ತಂಡದ ಆಟಗಾರರಾಗಿದ್ದರು ಮತ್ತು 4 ಟ್ರೋಫಿ ಗೆಲುವಿನಲ್ಲಿ (2015, 2017, 2019, 2020) ಪ್ರಮುಖ ಪಾತ್ರ ವಹಿಸಿದ್ದರು.