Australia tour: ಭಾರತ ತಂಡದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮುಂಬರುವ ಆಸ್ಟ್ರೇಲಿಯಾ ಪ್ರವಾಸದ ನಂತರ ಏಕದಿನ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂದು ವರದಿಗಳಾಗಿವೆ.
ವರದಿಗಳ ಪ್ರಕಾರ, 2027 ರ ವಿಶ್ವಕಪ್‌ಗಾಗಿ ಭಾರತದ ಯೋಜನೆಯಲ್ಲಿ ರೋಹಿತ್ ಮತ್ತು ವಿರಾಟ್ ಇಲ್ಲ, ರೋ-ಕೋ ಜೋಡಿ ಮೆಗಾ ಟೂರ್ನಮೆಂಟ್‌ಗಾಗಿ ತಂಡದ ನಿರ್ವಹಣೆಯ ಕಾರ್ಯತಂತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಲಾಗಿದೆ.
ಅಲ್ಲದೆ, ಆಸ್ಟ್ರೇಲಿಯಾದಲ್ಲಿ ನಾಯಕನಾಗಿ ತಮ್ಮ ಕೊನೆಯ ಸರಣಿಯನ್ನು ಆಡಲು ರೋಹಿತ್‌ಗೆ ಅವಕಾಶ ನೀಡಲಾಗುವುದು. ರೋಹಿತ್ ಮತ್ತು ವಿರಾಟ್ ಇಬ್ಬರೂ ಒಟ್ಟಿಗೆ ವಿದಾಯ ಹೇಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ, ರೋಹಿತ್ ಮತ್ತು ವಿರಾಟ್ ಏಕದಿನ ತಂಡದಲ್ಲಿ ಉಳಿಯಲು ಬಯಸಿದರೆ, ವಿಜಯ್ ಹಜಾರೆ ಟ್ರೋಫಿ ಆಡಬೇಕು ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ಏನಾದ್ರೂ ಸಂಜು ಸ್ಯಾಮ್ಸನ್ ಕೈಬಿಟ್ರೆ… ಸ್ಫೋಟಕ ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ! Sanju Samson
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀ ಇಂಡಿಯಾ, ಅಕ್ಟೋಬರ್ 19, 23 ಮತ್ತು 25 ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಮತ್ತು ಸಿಡ್ನಿಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ವಿರಾಟ್ ಮತ್ತು ರೋಹಿತ್ ವಿಶ್ವ ಕ್ರಿಕೆಟ್ನ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಏಕದಿನ ಮಾದರಿಯಲ್ಲಿ ವಿರಾಟ್ 302 ಪಂದ್ಯಗಳನ್ನು ಆಡಿದ್ದಾರೆ ಮತ್ತು 57.88 ಸರಾಸರಿಯಲ್ಲಿ 14181 ರನ್ಗಳಿಸಿದ್ದಾರೆ. ಇದರಲ್ಲಿ 51 ಶತಕಗಳು ಸೇರಿವೆ. ಮತ್ತೊಂದೆಡೆ, ರೋಹಿತ್ 273 ಪಂದ್ಯಗಳಲ್ಲಿ ಆಡಿದ್ದು, 11168 ರನ್ಗಳಿಸಿದ್ದಾರೆ ಮತ್ತು 32 ಶತಕಗಳೊಂದಿಗೆ 48.76 ಸರಾಸರಿಯನ್ನು ಹೊಂದಿದ್ದಾರೆ. ಒನ್ಡೇ ಕ್ರಿಕೆಟ್ನಲ್ಲಿ 3 ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ.(ಏಜೆನ್ಸೀಸ್)