Rj Mahvash : ಜನಪ್ರಿಯ ಯೂಟ್ಯೂಬರ್ ಆರ್‌ಜೆ ಮಹ್ವಾಶ್ ಸದ್ಯಕ್ಕೆ ಹಾಟ್ ಟಾಪಿಕ್ ಆಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಿಂದ ಆರಂಭವಾದ ಚರ್ಚೆ ಇನ್ನೂ ಮುಂದುವರೆದಿದೆ. ದುಬೈ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದ ವೇಳೆ ಟೀಮ್ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಜೊತೆ ಕಾಣಿಸಿಕೊಂಡ ಬಳಿಕ ಚರ್ಚೆ ಪ್ರಾರಂಭವಾಯಿತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಹಲವು ಸುದ್ದಿಗಳು ಹರಿದಾಡಿದವು.
ಇದೀಗ ಆರ್‌ಜೆ ಮಹ್ವಾಶ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಅವರು ಲಖನೌದ ಹೋಟೆಲ್ ಒಂದರಲ್ಲಿ ಸ್ವಿಮ್ಮಿಂಗ್ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅದೇ ಸಮಯದಲ್ಲಿ ಐಪಿಎಲ್ ಪಂದ್ಯಕ್ಕಾಗಿ ಚಾಹಲ್ ಕೂಡ ಅಲ್ಲಿಗೆ ಹೋಗಿದರು. ಹೀಗಾಗಿ ಇಬ್ಬರ ಡೇಟಿಂಗ್ ವದಂತಿ ಮತ್ತೊಮ್ಮೆ ಚರ್ಚೆಯಾಯಿತು.
ಇದರ ಬೆನ್ನಲ್ಲೇ ಇದೀಗ ಆರ್‌ಜೆ ಮಹ್ವಾಶ್ ಹಂಚಿಕೊಂಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸದ್ಯ ಪೋಸ್ಟ್ ಮಾಡಿರುವ ರೀಲ್‌ನಲ್ಲಿ, ಮಹ್ವಾಶ್ ಅವರು ತಮ್ಮ ಜೀವನದಲ್ಲಿ ಬರುವ ವ್ಯಕ್ತಿಯ ಬಗ್ಗೆ ಉಲ್ಲೇಖಿಸಿದ್ದಾರೆ. ನನ್ನ ಜೀವನದಲ್ಲಿ ಬರುವ ವ್ಯಕ್ತಿಯೂ ನನ್ನ ಸ್ನೇಹಿತ ಆಗಿರುತ್ತಾನೆ, ಆತ್ಮೀಯ ಸ್ನೇಹಿತನೂ ಕೂಡ, ಗೆಳೆಯ ಕೂಡ ಮತ್ತು ನನ್ನ ಪತಿಯೂ ಆಗಿರುತ್ತಾನೆ. ನಾನು ಅವರ ಸುತ್ತಲೂ ಸುತ್ತುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ, ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೂಡ ವಿಡಿಯೋಗೆ ಲೈಕ್ ಕೊಟ್ಟಿದ್ದಾರೆ. ಹೀಗಾಗಿ ಅನೇಕ ನೆಟ್ಟಿಗರು, ಯಜುವೇಂದ್ರ ಚಾಹಲ್ ನಿಮ್ಮ ಜೀವನದಲ್ಲಿ ಬರುತ್ತಾರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಚಾಹಲ್ ಅವರು ಇತ್ತೀಚೆಗಷ್ಟೇ ತಮ್ಮ ಪತ್ನಿ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯಿತು. ಕೆಲವು ತಿಂಗಳುಗಳಿಂದ ಅಂತರ ಕಾಯ್ದುಕೊಂಡಿದ್ದ ದಂಪತಿ ಕೆಲವೇ ದಿನಗಳ ಹಿಂದಷ್ಟೇ ಡಿವೋರ್ಸ್ ಪಡೆದುಕೊಂಡರು.
ಪ್ರಸ್ತುತ ಯಜುವೇಂದ್ರ ಚಾಹಲ್ 18ನೇ ಐಪಿಎಲ್ ಸೀಸನ್ನಲ್ಲಿ ಬಿಜಿಯಾಗಿದ್ದಾರೆ. ಅವರು ಈ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಆರ್‌ಜೆ ಮಹ್ವಾಶ್ ಇತ್ತೀಚೆಗೆ ಲಖನೌದಲ್ಲಿ ನಡೆದ ಪಂದ್ಯಕ್ಕಾಗಿ ಅಲ್ಲಿಗೆ ಹೋಗಿದ್ದರು ಎಂದು ತೋರುತ್ತದೆ. ಆರ್‌ಜೆ ಮಹ್ವಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡುವುದರೊಂದಿಗೆ, ಮತ್ತೊಮ್ಮೆ ಇಬ್ಬರ ಬಗ್ಗೆ ಡೇಟಿಂಗ್ ವದಂತಿಗಳನ್ನು ಹರಡಿದ್ದಾರೆ. (ಏಜೆನ್ಸೀಸ್)