ಲಖನೌ: ಭಾರತದ ಕ್ರಿಕೆಟಿಗ ರಿಂಕು ಸಿಂಗ್ ಮತ್ತು ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ವಿವಾಹ ಡಿಸೆಂಬರ್ 4ರಂದು ಲಖನೌದಲ್ಲಿ ನಡೆಯಲಿದೆ.
ವಿವಾಹದ ಪೂರ್ವಭಾವಿ ಸಿದ್ಧತೆಗಳು ಈಗಾಗಲೆ ಆರಂಭಗೊಂಡಿವೆ. ಗಣ್ಯರಿಗೆ ವಿವಾಹದ ಆಮಂತ್ರಣ ಪತ್ರಿಕೆ ಹಂಚಿಕೆ ಭರದಿಂದ ಸಾಗುತ್ತಿದೆ. ಅದ್ದೂರಿ ವಿವಾಹ ಸಮಾರಂಭದಲ್ಲಿ ಹಲವು ಕ್ರಿಕೆಟ್ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ.
ರಿಂಕು ವಿವಾಹಕ್ಕೆ ಮುನ್ನ ನ.19ರಿಂದ 29ರವರೆಗೆ ದೋಹಾದಲ್ಲಿ ರೈಸಿಂಗ್ ಸ್ಟಾರ್ ಏಷ್ಯಾಕಪ್ನಲ್ಲಿ ಭಾರತ ಎ ತಂಡದ ಪರ ಉಪನಾಯಕರಾಗಿ ಆಡಲಿದ್ದಾರೆ. ರಿಂಕು-ಪ್ರಿಯಾ ನಿಶ್ಚಿತಾರ್ಥ ಕಳೆದ ವರ್ಷ ಜೂನ್ನಲ್ಲಿ ನಡೆದಿತ್ತು.