ಕ್ರೀಡೆ

ರಿಂಕು ಸಿಂಗ್​ ಜತೆ ಶುಭಮನ್​​ ಗಿಲ್​ ಸಹೋದರಿ ಮೋಜು ಮಸ್ತಿ! ವಿಡಿಯೋ ವೈರಲ್​….

ನವದೆಹಲಿ: ಟಿ20 ವಿಶ್ವಕಪ್​ ಟ್ರೋಫಿಯನ್ನು ಗೆದ್ದ ಭಾರತ, ಪ್ರಸ್ತುತ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದ ಸೋಲಿನ ನಂತರ ಭಾರತ ತಂಡ ಚೇತರಿಸಿಕೊಂಡು ಸರಣಿಯಲ್ಲಿ 2-1 ರಲ್ಲಿ ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಟಿ20ಗೆ ವಿದಾಯ ಹೇಳಿದ್ದು, ಯುವಕರಿಗೆ ಜಿಂಬಾಬ್ವೆ ಸರಣಿಯಲ್ಲಿ ಅವಕಾಶ ಸಿಕ್ಕಿದೆ. ಯುವ ಬ್ಯಾಟ್ಸ್‌ಮನ್‌ಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ ಅವರು ಎಂಜಾಯ್​ ಕೂಡ ಮಾಡುತ್ತಿದ್ದಾರೆ.

ಭಾರತದ ಯುವ ಕ್ರಿಕೆಟಿಗ ರಿಂಕು ಸಿಂಗ್, ಆರಂಭಿಕ ಆಟಗಾರ ಶುಭಮನ್​ ಗಿಲ್ ಅವರ ಸಹೋದರಿ ಶಹನೀಲ್ ಗಿಲ್ ಅವರೊಂದಿಗೆ ಫ್ಲರ್ಟಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡನೇ ಟಿ20 ಪಂದ್ಯದ ನಂತರದ ವಿಶ್ರಾಂತಿ ಸಮಯದಲ್ಲಿ ರಿಂಕು ಸಿಂಗ್​, ಶಹನೀಲ್ ಜೊತೆ ಹರಾರೆಗೆ ಪ್ರವಾಸ ಮಾಡಿದ್ದಾರೆ.

ಹರಾರೆಯಲ್ಲಿ ಇಬ್ಬರು ಜಿರಾಫೆಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ರಿಂಕು ಮತ್ತು ಶಹನೀಲ್ ಮೋಜಿನ ಸೆಲ್ಫಿ ವಿಡಿಯೋ ತೆಗೆದುಕೊಂಡಿದ್ದಾರೆ. ಈ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಿಂಕು ಮತ್ತು ಗಿಲ್ ಒಳ್ಳೆಯ ಸ್ನೇಹಿತರು ಎಂಬುದು ಗೊತ್ತೇ ಇದೆ. ಶಹನೀಲ್ ಕೂಡ ರಿಂಕುಗೆ ಒಳ್ಳೆಯ ಸ್ನೇಹಿತೆಯಾಗಿದ್ದು, ಇಬ್ಬರೂ ಹರಾರೆಯಲ್ಲಿ ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಅಂತ್ಯಗೊಂಡ ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ಪರ ಅಬ್ಬರಿಸಿದ ರಿಂಕು ಸಿಂಗ್, ಟೂರ್ನಿಯ ಬಳಿಕ ಮಾಲ್ಡೀವ್ಸ್‌ಗೆ ತೆರಳಿದರು. ರಿಂಕು ತನ್ನ ಸಿಕ್ಸ್ ಪ್ಯಾಕ್ ದೇಹವನ್ನು ತೋರಿಸುವ ಪೋಸ್ಟ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಈ ವೇಳೆ 'ಓ ಹೀರೋ' ಎಂದು ಶಹನೀಲ್ ಗಿಲ್ ಕಾಮೆಂಟ್ ಮಾಡಿದ್ದರು. ಆಗಲೂ ಈ ಕಾಮೆಂಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಶುಭಮನ್​ ಗಿಲ್​ ಗುಜರಾತ್ ಟೈಟಾನ್ಸ್ ತಂಡ ಸೇರುವ ಮುನ್ನ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡಿದ್ದರು ಎಂಬುದು ಗೊತ್ತೇ ಇದೆ. ಅಂದಿನಿಂದ ಗಿಲ್, ರಿಂಕು ಮತ್ತು ಶಹನೀಲ್ ಒಳ್ಳೆಯ ಸ್ನೇಹಿತರಾಗಿದ್ದಾರೆ. (ಏಜೆನ್ಸೀಸ್​)