ಕ್ರೀಡೆ

ಧರ್ಮಶಾಲಾದಲ್ಲಿ ಡುಪ್ಲೆಸಿಸ್ ಪಡೆಗೆ ಕಿಂಗ್ಸ್ ಸವಾಲು: ಹೇಗಿದೆ ಆರ್‌ಸಿಬಿ-ಪಂಜಾಬ್ ಪ್ಲೇಆಫ್​ ಲೆಕ್ಕಾಚಾರ…

ಧರ್ಮಶಾಲಾ: ಹ್ಯಾಟ್ರಿಕ್ ಗೆಲುವಿನೊಂದಿಗೆ ಬೀಗುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಆತಿಥೇಯ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-17ರ ತಮ್ಮ 12ನೇ ಲೀಗ್ ಪಂದ್ಯದಲ್ಲಿ ಮರುಮುಖಾಮುಖಿಯಾಗಲಿವೆ. ಗುರುವಾರ ಹಿಮಾಚಲ ಪ್ರದೇಶದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ನಾಕೌಟ್ ಎನಿಸಿದೆ. ಟೂರ್ನಿಯಲ್ಲಿ ತವರಿನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಎದುರು ಗೆಲುವು ಕಂಡಿದ್ದ  ಡು ಪ್ಲೆಸಿಸ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಸೋತವರು ಟೂರ್ನಿಯ ಪ್ರಶಸ್ತಿ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದ್ದಾರೆ.

ಗುಜರಾತ್ ಟೈಟಾನ್ಸ್ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿ ಅಂಕಪಟ್ಟಿಯ ಕೊನೇ ಸ್ಥಾನದಿಂದ ಏರಿಕೆ ಕಂಡಿರುವ ಆರ್‌ಸಿಬಿ, ರನ್‌ರೇಟ್‌ನಲ್ಲೂ ಪ್ರಗತಿ ಸಾಧಿಸಿದೆ. ಮತ್ತೊಂದೆಡೆ ಅಸ್ಥಿರ ಪ್ರದರ್ಶನದೊಂದಿಗೆ ಪ್ಲೇಆ್ ರೇಸ್‌ನಲ್ಲಿರುವ ಪಂಜಾಬ್, ಟೂರ್ನಿಯ ಆರಂಭಿಕ ಪಂದ್ಯಗಳನ್ನು ಮುಲ್ಲನ್‌ಪುರದಲ್ಲಿ ಆಡಿತ್ತು. ಈಗ ತನ್ನ ಅಂತಿಮ ಲೀಗ್ ಪಂದ್ಯಗಳನ್ನು 2ನೇ ತವರು ಧರ್ಮಶಾಲಾದಲ್ಲಿ ಆಡಲಿದೆ. ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ತವರಿನ ಅಂಗಣದಲ್ಲಿ ಸೋತು ಹಿನ್ನಡೆ ಅನುಭವಿಸಿದೆ. ಪ್ಲೇಆಫ್​ ರೇಸ್‌ನಲ್ಲಿ ಉಳಿಯಲು 2 ತಂಡಗಳಿಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಆರ್‌ಸಿಬಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 4 ಗೆಲುವು, 7 ಸೋಲಿನೊಂದಿಗೆ 8 ಅಂಕ ಸಂಪಾದಿಸಿದೆ. ಪಂಜಾಬ್ ಸಹ ಇಷ್ಟೇ ಅಂಕಗಳನ್ನು ಹೊಂದಿದ್ದು, ರನ್‌ರೇಟ್‌ನಲ್ಲಿ ಹಿನ್ನಡೆ ಅನುಭವಿಸಿದೆ.

ಪ್ಲೇಆಫ್ ಲೆಕ್ಕಾಚಾರ...

ಹಾಲಿ ಆವೃತ್ತಿಯ ಲೀಗ್ ಪಂದ್ಯಗಳ ಅಂತಿಮ ಹಂತದಲ್ಲಿಯೂ ಇನ್ನೂ ಯಾವುದೇ ತಂಡ ಅಧಿಕೃತವಾಗಿ ಪ್ಲೇಆ್ ರೇಸ್‌ನಿಂದ ಹೊರಗುಳಿದಿಲ್ಲ. ಅಗ್ರ 4ರಲ್ಲಿ ಸ್ಥಾನ ಪಡೆಯಲು ಎಲ್ಲ 9 ತಂಡಗಳಿಗೂ ಅವಕಾಶವಿದೆ. ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಆರ್‌ಸಿಬಿ, ಪಂಜಾಬ್, ಗುಜರಾತ್‌ಗೂ ಪ್ಲೇಆಫ್ ಬಾಗಿಲು ತೆರೆದಿದೆ. ಪ್ರಶಸ್ತಿ ರೇಸ್‌ನಿಂದ ಹೊರಬೀಳುವ ಮೊದಲ ತಂಡ ಎಂಬ ಸ್ಥಿತಿ ಎದುರಿಸಿದ ಆರ್‌ಸಿಬಿ ಸತತ 3 ಜಯದೊಂದಿಗೆ ರನ್ ರೇಟ್ ಸಹ ಸುಧಾರಿಸಿಕೊಂಡು ಪ್ಲೇ ಆಫ್ಸ್ಆಸೆ ಜೀವಂತವಿರಿಸಿದೆ. ಬಾಕಿ ಉಳಿದಿರುವ ಎಲ್ಲ ಲೀಗ್ ಪಂದ್ಯಗಳ ಗೆಲುವಿನ ಜತೆಗೆ ಇತರ ತಂಡಗಳ ಲಿತಾಂಶದ ಆಧಾರದ ಮೇಲೆ ಆರ್‌ಸಿಬಿ ಭವಿಷ್ಯ ನಿರ್ಧರಿತವಾಗಲಿದೆ. ಸನ್‌ರೈಸರ್ಸ್‌ ಗೆಲುವಿನೊಂದಿಗೆ ಮುಂಬೈ ಹೊರಬಿದ್ದಿದೆ. ಆರ್‌ಸಿಬಿ-ಪಂಜಾಬ್ ತಂಡಗಳ ಪ್ಲೇಆ್ ಹಾದಿಯ ಸ್ಪಷ್ಟ ಚಿತ್ರಣ ಸಿಕ್ಕಿದೆ. ಪಂಜಾಬ್-ಆರ್‌ಸಿಬಿ ನಡುವೆ ಸೋತ ತಂಡ ಅಧಿಕೃತವಾಗಿ ಪ್ರಶಸ್ತಿ ರೇಸ್‌ನಿಂದ ಹೊರಬೀಳಲಿದೆ. ಗುಜರಾತ್ ಟೈಟಾನ್ಸ್‌ಗೆ ತನ್ನ ಉಳಿದಿರುವ 3 ಪಂದ್ಯಗಳಲ್ಲಿ ಗೆಲುವು ಅನಿವಾರ‌್ಯ ಎನಿಸಲಿದೆ. ಈ 3 ತಂಡಗಳು ಗರಿಷ್ಠ 14 ಅಂಕಗಳನ್ನು ಮಾತ್ರ ಸಂಪಾದಿಸಬಹುದು.