ಕ್ರೀಡೆ

3ನೇ ಟೆಸ್ಟ್​ನಿಂದ ಬುಮ್ರಾಗೆ ರೆಸ್ಟ್​!: ಅಂತಿಮ ಮೂರು ಟೆಸ್ಟ್​ಗೆ ಇಂದು ಅಥವಾ ನಾಳೆ ಟೀಮ್​ ಇಂಡಿಯಾ ಪ್ರಕಟ ಸಾಧ್ಯತೆ

ವಿಶಾಖಪಟ್ಟಣ: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆಲುವಿನ ರೂವಾರಿ ಉಪನಾಯಕ , ವೇಗಿ ಜಸ್​ಪ್ರೀತ್​ ಬುಮ್ರಾಗೆ ಮೂರನೇ ಟೆಸ್ಟ್​ ಪಂದ್ಯದಿಂದ ವಿಶ್ರಾಂತಿ ನೀಡಬಹುದು ಎನ್ನಲಾಗಿದೆ. ರಾಷ್ಟ್ರೀಯ ತಂಡದ ಆಯ್ಕೆಗಾರರು ಹಾಗೂ ತಂಡ ಮ್ಯಾನೇಜ್​ಮೆಂಟ್​ ಸಮಾಲೋಚಿಸಿ ಅಂತಿಮ ಎರಡು ಟೆಸ್ಟ್​ಗಳಿಗೆ ಪುನಶ್ಚೇತನದೊಂದಿಗೆ ಬುಮ್ರಾ ವಾಪಸಾತಿ ಮಾಡಲು ರಾಜ್​ಕೋಟ್​ ಟೆಸ್ಟ್​ನಿಂದ ಬ್ರೇಕ್​ ನೀಡುವ ಸಾಧ್ಯತೆಗಳಿವೆ. ಕನ್ನಡಿಗ ಕೆಎಲ್​ ರಾಹುಲ್​ ಐದು ಟೆಸ್ಟ್​ಗಳ ಸರಣಿಗೆ ಉಳಿದ ಪಂದ್ಯಗಳಿಗೆ ಮರಳುವ ನಿರೀೆಯಿದೆ. ೆ.15 ರಂದು ರಾಜ್​ಕೋಟ್​ನಲ್ಲಿ ಮೂರನೇ ಟೆಸ್ಟ್​ ಆರಂಭವಾಗಲಿದೆ.

ಯಾರ್ಕರ್​ ಸ್ಪೆಷಲಿಸ್ಟ್​ ಜಸ್​ಪ್ರೀತ್​ ಬುಮ್ರಾಗೆ ಬ್ರೇಕ್​ ನೀಡಿದರೆ ಬದಲಿ ಆಟಗಾರನಾಗಿ ಎರಡನೇ ಟೆಸ್ಟ್​ಗೆ ಇದೇ ರೀತಿಯ ಬ್ರೇಕ್​ ಪಡೆದಿದ್ದ ಮೊಹಮದ್​ ಸಿರಾಜ್​ ಅವರನ್ನು ತಂಡಕ್ಕೆ ವಾಪಸ್​ ಕರೆಸಿಕೊಳ್ಳುವ ನಿರೀೆಯಿದೆ. ಬಳಿಕ ಸರಣಿಯ ಅಂತಿಮ ಎರಡು ಟೆಸ್ಟ್​ಗಳಿಗೆ ಸಿರಾಜ್​ ಜತೆಗೂಡಿ ಬುಮ್ರಾ ಬೌಲಿಂಗ್​ ವಿಭಾಗವನ್ನು ಮುನ್ನಡೆಸಲಿದ್ದಾರೆ. ಮೊದಲೆರಡು ಟೆಸ್ಟ್​ ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್​ ಪಡೆದವರ ಪಟ್ಟಿಯಲ್ಲಿ ಜಸ್​ಪ್ರೀತ್​ ಬುಮ್ರಾ ಅಗ್ರಸ್ಥಾನದಲ್ಲಿದ್ದು, ಎರಡು ಪಂದ್ಯಗಳಿಂದ ಒಟ್ಟು 58 ಓವರ್​ ಬೌಲಿಂಗ್​ ನಡೆಸಿದರು. ಇನ್ನೊರ್ವ ವೇಗಿ ಮೊಹಮದ್​ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪುನರಾಗಮನಕ್ಕೆ ಸಂಪೂರ್ಣ ಫಿಟ್​ ಆಗಿಲ್ಲ.

ಪಾದದ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದು, ಶಮಿ ಅವರ ಚೇತರಿಕೆಯ ಅವಧಿಯು ದೀರ್ವಾಗಿರಲಿದೆ ಎನ್ನಲಾಗಿದೆ. ಆದ್ದರಿಂದ ಶಮಿ ಗೈರಿನಲ್ಲಿ ಬುಮ್ರಾ ಹಾಗೂ ಸಿರಾಜ್​ ಅವರ ಕಾರ್ಯದೊತ್ತಡವನ್ನು ನಿರ್ವಹಿಸುವುದು ತಂಡಸ ಮ್ಯಾನೇಜ್​ಮೆಂಟ್​ಗೆ ಸವಾಲೆನಿಸಿದೆ.
ಜಡೇಜಾ ಫಿಟ್​ ಆಗಿಲ್ಲ: ಹೈದರಬಾದ್​ ಟೆಸ್ಟ್​ನಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಆಲ್ರೌಂಡರ್​ ರವೀಂದ್ರ ಜಡೇಜಾ, ತವರು ನೆಲ ರಾಜ್​ಕೋಟ್​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಸಂಪೂರ್ಣವಾಗಿ ಫಿಟ್​ ಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ಮೂರನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಜಡೇಜಾ ಸರಣಿಯಿಂದ ಹೊರಬಿದ್ದರು ಅಚ್ಚರಿಯಿಲ್ಲ ಎನ್ನಲಾಗಿದೆ.

ಅನಿಶ್ಚಿತತೆಯಲ್ಲಿ ಕೊಹ್ಲಿ ಆಗಮನ ? ವೈಯಕ್ತಿಕ ಕಾರಣ ನೀಡಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಇಂಗ್ಲೆಂಡ್​ ವಿರುದ್ಧದ ಸರಣಿಯ 3ನೇ ಟೆಸ್ಟ್​ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆಗಳಿವೆ. ಕೊಹ್ಲಿ ಗೈರಿನ ಕಾರಣದ ಗೌಪ್ಯತೆ ಮುಂದುವರಿದಿರುವ ನಡುವೆ ಅವರು ಸದ್ಯ ದೇಶದಿಂದ ಹೊರಗಿದ್ದಾರೆ ಎನ್ನಲಾಗುತ್ತಿದ್ದು, ಕೊಹ್ಲಿ ಎರಡನೇ ಮಗುವಿನ ನಿರೀೆಯಲ್ಲಿದ್ದಾರೆ ಎಂಬ ಎಬಿ ಡಿವಿಲಿಯರ್ಸ್​ ಹೇಳಿಕೆ ಸರಣಿಯ ಉಳಿದ ಪಂದ್ಯಗಳಲ್ಲಿ ಕೊಹ್ಲಿ ಕಣಕ್ಕಿಳಿಯುವ ಬಗ್ಗೆ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ. ತಂಡದ ಮ್ಯಾನೇಜ್​ಮೆಂಟ್​ ಕೊಹ್ಲಿಯೊಂದಿಗೆ ಸಂಪರ್ಕದಲ್ಲಿದ್ದು, ಸರಣಿಯ ಉಳಿದ ಪಂದ್ಯಗಳಿಗೆ ಅವರ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಳ್ಳಲಿದೆ ಎಂದು ಕೋಚ್​ ರಾಹುಲ್​ ದ್ರಾವಿಡ್​ ತಿಳಿಸಿದ್ದಾರೆ.