ಬೆನೋನಿ: ಅಜೇಯವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ 19 ವಯೋಮಿತಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆರನೇ ಬಾರಿ ಪ್ರಶಸ್ತಿ ಒಲಿಸಿಕೊಳ್ಳುವ ತವಕದಲ್ಲಿದೆ. ಮಂಗಳವಾರ ನಡೆಯಲಿರುವ ಮೊದಲ ಸೆಮಿೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಇದುವರೆಗೆ ಲೀಗ್-ಸೂಪರ್‌ಸಿಕ್ಸ್‌ನಲ್ಲಿ ಆಡಿರುವ ಐದು ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವ ಭಾರತ ಪ್ರಶಸ್ತಿ ೇವರಿಟ್ ಎನಿಸಿದೆ. ಸಂಘಟಿತ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಉದಯ್ ಸಹಾರನ್ ಬಳಗಕ್ಕೆ ಉಪಾಂತ್ಯದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ವಿಶ್ವಕಪ್‌ಗೂ ಮುನ್ನ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ 2 ಬಾರಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವುದು ಭಾರತದ ಆತ್ಮವಿಶ್ವಾಸ ವೃದ್ಧಿಸಿದೆ.
18 ವರ್ಷದ ಮುಶೀರ್ ಖಾನ್ ಆಡಿರುವ ಐದು ಪಂದ್ಯಗಳಲ್ಲಿ 2 ಶತಕ ಹಾಗೂ ಅರ್ಧಶತಕದೊಂದಿಗೆ 83.50 ಸರಾಸರಿಯಲ್ಲಿ 334 ರನ್ ಕಲೆಹಾಕಿದ್ದಾರೆ. ನಾಯಕ ಉದಯ್ 304 ರನ್‌ಗಳಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಸಚಿನ್ ದಾಸ್ ಕಳೆದ ಪಂದ್ಯದಲ್ಲಿ ನೇಪಾಳ ಎದುರು ಶತಕ ಸಿಡಿಸಿ ಮಿಂಚಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಉಪನಾಯಕ ಮತ್ತು ಎಡಗೈ ಸ್ಪಿನ್ನರ್ ಸೌಮಿ ಕುಮಾರ್ ಪಾಂಡೆ ಟೂರ್ನಿಯಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಭಾರತೀಯ ಬ್ಯಾಟರ್‌ಗಳು ಟೂರ್ನಿಯಲ್ಲಿ ರನ್‌ಮಳೆ ಹರಿಸಿದ್ದರೆ, ಬೌಲರ್‌ಗಳು ಸಹ ವಿಕೆಟ್ ಕಬಳಿಸಿ ಬೃಹತ್ ಗೆಲುವಿಗೆ ನೆರವಾಗಿದ್ದಾರೆ. ಇವರಿಗೆ ನಮನ್ ತಿವಾರಿ (9 ವಿಕೆಟ್) ಮತ್ತು ರಾಜ್ ಲಿಂಬಾನಿ (4 ವಿಕೆಟ್) ಸಾಥ್ ನೀಡಿದ್ದಾರೆ. ಭಾರತ ತಂಡ ೈನಲ್‌ಗೇರಿದರೆ, ಇನ್ನೊಂದು ಸೆಮೀಸ್ ಪಂದ್ಯದ ಪಾಕಿಸ್ತಾನ ಅಥವಾ ಆಸ್ಟ್ರೇಲಿಯಾ ತಂಡ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ.
ಆತಿಥೇಯ ದಕ್ಷಿಣ ಆಫ್ರಿಕಾ 2014ರ ಬಳಿಕ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ವೇಗಿ ಕನ್ವಾ ಮಫಕಾ (18 ವಿಕೆಟ್) ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಭಾರತೀಯ ಬ್ಯಾಟರ್‌ಗಳಿಗೆ ಕಂಟಕವಾಗುವ ಸಾಧ್ಯತೆಗಳಿವೆ. ಆಡಿರುವ ಐದು ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದ್ದಾರೆ.
ಆರಂಭ: ಮಧ್ಯಾಹ್ನ: 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.