RCB vs LSG: ಇಂದು (ಮೇ.27) ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಂತ್ ಪಡೆ ನೀಡಿದ್ದ 228 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಆರ್ಸಿಬಿ ಭರ್ಜರಿ ಯಶಸ್ವಿಯಾಗಿದೆ. ಇದು ಆರ್ಸಿಬಿಯ ಅತ್ಯಧಿಕ ರನ್ ಚೇಸ್ ಎಂಬುದು ಇಲ್ಲಿ ಹುಬ್ಬೇರಿಸುವ ಸಂಗತಿ.
ಕ್ಯಾಪ್ಟನ್ ಇನ್ನಿಂಗ್ಸ್ ತೋರಿದ ಜಿತೇಶ್ ಶರ್ಮ, ಸ್ಫೋಟಕ ಇನ್ನಿಂಗ್ಸ್ ಮೂಲಕ ಆರ್ಸಿಬಿ ಅಭಿಮಾನಿಗಳ ಆಸೆಯನ್ನು ಈಡೇರಿಸುವಲ್ಲಿ ಕಡೆಗೂ ಮೇಲುಗೈ ಸಾಧಿಸಿದರು. ವಿರಾಟ್ ಕೊಹ್ಲಿ ಅರ್ಧ ಶತಕ ಮತ್ತು ಜಿತೇಶ್ ಶರ್ಮ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತಂಡವನ್ನು ಇದೀಗ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನಕ್ಕೇರಿಸಿದೆ.